180 ದೇಶಗಳಲ್ಲಿ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಪ್; ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಪಡೆದಿರುವ ಜನಪ್ರಿಯ ಮೆಸೇಜಿಂಗ್ ಸೇವೆ; ಒಂದು ಅಂದಾಜಿನ ಪ್ರಕಾರ 300 ಮಿಲಿಯನ್! ವಾಟ್ಸಪ್‌ನಲ್ಲಿ ಪ್ರತಿನಿತ್ಯ ವಿನಿಮಯವಾಗೋ ಸಂದೇಶಗಳ ಸಂಖ್ಯೆ ಬರೋಬ್ಬರಿ 65 ಬಿಲಿಯನ್ !

ಜನಪ್ರಿಯ ಮೆಸೇಜಿಂಗ್ ಸೇವೆ ವಾಟ್ಸಪ್, 2019ರಲ್ಲೂ ಹೊಸ ಫೀಚರ್‌ಗಳ ಸರಣಿಯನ್ನು ಮುಂದುವರಿಸಿದೆ. ಈಗ ಶೀಘ್ರದಲ್ಲೇ ವಾಟ್ಸಪ್‌ನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಬಳಕೆದಾರರು ಕಾಣಲಿದ್ದಾರೆ.

ಫೇಸ್ಬುಕ್ ಒಡೆತನದ ವಾಟ್ಸಪ್, ಬಳಕೆದಾರರಿಗೆ ಹೊಸ ಫೀಚರ್ ನೀಡಲು ಮುಂದಾಗಿದೆ. ಈ ಹಿಂದೆ ವಾಟ್ಸಪ್ ‘ಸರ್ಚ್’ ಫೀಚರ್ ನೀಡುವ ಮೂಲಕ, ಯಾವುದೇ ಸಂದೇಶವನ್ನು ಹುಡುಕಲು ಸೌಲಭ್ಯ ಮಾಡಿಕೊಟ್ಟಿತ್ತು.

ಈಗ ಅದರ ಮುಂದುವರಿದ ಭಾಗವಾಗಿ, ಅಡ್ವಾನ್ಸ್ಡ್ ಸರ್ಚ್ ಫೀಚರನ್ನು ಪರಿಚಯಿಸಲು ವಾಟ್ಸಪ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅಡ್ವಾನ್ಸ್ಡ್ ಸರ್ಚ್ ಫೀಚರ್ ಮೂಲಕ ಬಳಕೆದಾರರು ಫೋಟೋ, ಲಿಂಕ್, ಡಾಕ್ಯುಮೆಂಟ್, ವಿಡಿಯೋ, ಮತ್ತಿತರ ಫೈಲ್‌ಗಳನ್ನು ಹುಡುಕಬಹುದಾಗಿದೆ.

ಈ ಬಗ್ಗೆ ಮಾಹಿತಿಯನ್ನು ನೀಡಿರುವ WABetaInfo, ಈ ಹೊಸ ಫೀಚರ್ ಚ್ಯಾಟ್ ಟ್ಯಾಬಿನಲ್ಲೇ ಕಾಣಿಸಕೊಳ್ಳಲಿದೆ. ಸರ್ಚ್ ಆಯ್ಕೆಯನ್ನು ಒತ್ತಿದಾಗ, ಫೋಟೋ, ಜಿಫ್, ಲಿಂಕ್, ವಿಡಿಯೋ, ಡಾಕ್ಯುಮೆಂಟ್ ಅಥವಾ ಆಡಿಯೋ ಎಂಬುವುದನ್ನು ಸೆಲೆಕ್ಟ್ ಮಾಡಬೇಕು.

ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿದಾಗ, ಸಂಬಂಧಿಸಿದ ಎಲ್ಲಾ ಚ್ಯಾಟ್ [ವೈಯುಕ್ತಿಕ ಮತ್ತು ಗ್ರೂಪ್]ಗಳನ್ನು ನಿಮ್ಮ ಮುಂದಿಡುವುದು. ಬಳಕೆದಾರರು ಅದರ ಪ್ರಿವೀವ್ ಅನ್ನು ಕೂಡಾ ನೊಡಬಹುದಾಗಿದೆ.

ಈ ಫೀಚರ್ iOS ಜೊತೆ ಆ್ಯಂಡ್ರಾಯಿಡ್ ಫೋನ್‌ಗಳಿಗೂ ಲಭ್ಯವಾಗಲಿದೆ ಎಂದು ವರದಿಯು ಹೇಳಿದೆ.

ಇದನ್ನೂ ಓದಿ: Samsungನಿಂದ 3 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ; ಏನು ವಿಶೇಷ? ಬೆಲೆ ಎಷ್ಟು?