Asianet Suvarna News Asianet Suvarna News

ಇದೆಷ್ಟು ಕಡಿಮೆ ದರಕ್ಕೆ ಹೊಸ 4ಜಿ ಪೋನ್, ಜಿಯೋ ಧಮಾಕಾ

ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಕಾಲಿಟ್ಟ ದಿನದಿಂದಲೂ ಒಂದೆಲ್ಲಾ ಒಂದು ರೀತಿಯಲ್ಲಿ ಹವಾ ಎಬ್ಬಿಸಿಕೊಂಡೆ ಬಂದಿದೆ. ಪುಕ್ಕಟೆ ಡೇಟಾ ನೀಡಿ ಲಕ್ಷಾಂತರ ಗ್ರಾಹಕರನ್ನು ಸೆಳೆದುಕೊಂಡಿರುವ ಜಿಯೋ ಇದೀಗ ತನ್ನ ಕಸ್ಟಮರ್ ಗಳಿಗೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ.

Reliance Jio may have good news for its subscribers Customer Target
Author
Bengaluru, First Published Aug 15, 2019, 5:19 PM IST

ಮುಂಬೈ[ಆ. 15] ರಿಲಯನ್ಸ್ ಜಿಯೋ ತನ್ನ ಅಸಲಿ ಜಿಯೋ ಪೋನ್ ಅನ್ನು 500 ಮಿಲಿಯನ್ ಜನರಿಗೆ ತಲುಪಿಸಲು ಹೊಸ ಯೋಜನೆ ಹಮ್ಮಿಕೊಂಡಿದೆ.

ಜಿಯೋ ಪೋನ್ ನಲ್ಲಿಯೇ ಇನ್ನು ಹೆಚ್ಚಿ ಅಪ್ಲಿಕೇಶನ್ ಗೆ ಅವಕಾಶ ಮಾಡಿಕೊಡುವುದರೊಂದಿಗೆ ದರ ಕಡಿತಕ್ಕೂ ಮುಂದಾಗುವ ತೀರ್ಮಾನ ತೆಗೆದುಕೊಂಡಿದೆ.

ಮುಖೇಶ್ ಅಂಬಾನಿ ಒಡೆತನದ ಕಂಪನಿ ಈಗಾಗಲೇ ಜಿಯೋ ಪೋನ್ 2 ನ್ನು ಮಾರುಕಟ್ಟೆಗೆ ತಲುಪಿಸುವುದನ್ನು ಬಂದ್ ಮಾಡಿದೆ. ಜಿಯೋ ಪೋನ್ 1ಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಜಿಯೋ ಪೋನ್ 1ನ್ನೇ ಇಟ್ಟುಕೊಂಡು ಕೆಲ ಮಾರ್ಪಾಡುಗಳನ್ನು ಮಾಡಲು ಕಂಪನಿ ಸಿದ್ಧತೆ ನಡೆಸಿದೆ.

ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

ಕೃಷಿ, ಬೇಸಿಕ್ ಇಂಗ್ಲಿಷ್ ಕಲಿಕೆ, ಮನರಂಜನೆ ಸೇರಿದಂತೆ ಅನೇಕ ಸಂಗತಿಗಳು ಸಂಪೂರ್ಣವಾಗಿ ಇಲ್ಲಿ ಸಿಗಲಿದೆ. ಜಿಯೋ ಪೋನ್ 2 ಗಿಂತ ಬದಲಾಗಿ ಇರಲಿದೆ.

ಜಿಯೋ ಪೋನ್ 1ನ್ನೇ ಅಪ್ ಡೇಟ್ ವರ್ಶನ್ ಮುಂದಕ್ಕೆ ಇಡಲಾಗುತ್ತಿದೆ. ಸಂಶೋಧನೆ ಮತ್ತು ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಯೋ ಟೆಕ್ನಾಲಜಿ ಮಾರ್ಕೆಟ್ ರಿಸರ್ಚ್ ವಿಭಾಗದ ತರುಣ್ ಪಠಕ್ ತಿಳಿಸಿದ್ದಾರೆ.

340 ಮಿಲಿಯನ್ ಜಿಯೋ ಯೂಸರ್ ಬೇಸ್ ನಮ್ಮ ಬಳಿ ಇದೆ. ಹಾಗಾಗಿ ಇವರೆಲ್ಲರನ್ನು ಸುಲಭವಾಗಿ ಸೆಳೆಯಬಹುದು. 2022ರ ವೇಳೆಗೆ ಹೊಸ ಪೀಚರ್ ಒಳಗೊಂಡ 370 ಮಿಲಿಯನ್ ಜಿಯೋ ಫೋನ್ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ತರುಣ್ ತಿಳಿಸಿದ್ದಾರೆ.

ದರ ಕಡಿಮೆ ಮಾಡುವುದು ಮಾತ್ರವಲ್ಲ. ಕ್ವಾಲಿಟಿ ಮತ್ತು ಬ್ಯಾಟರಿ ಕ್ಷಮೆತೆಯಲ್ಲಿಯೂ ಸುಧಾರಣೆ ಮಾಡುವ ತಂತ್ರಾಂಶ ಅಳವಡಿಕೆ ಮಾಡಿಕೊಳ್ಳಲಾಗುವುದು ಎಂದು ರಿಸರ್ಚ್ ವಿಘಗಾಬದ ನಿರ್ದೇಶಕ ನವ್ ಕೆಂದರ್ ಸಿಂಗ್ ತಿಳಿಸಿದ್ದಾರೆ.

ಮುಖೇಶ್ ಅಂಬಾನಿ ವಾರ್ಷಿಕ ವರಮಾನ ಎಷ್ಟು?

1500 ರೂ. ಗೆ 4ಜಿ ಸೌಲಭ್ಯದ ಪೋನ್ ನೀಡಲಾಗುತ್ತದೆ. 49 ರು. ನಿಂದ 153 ರು. ವೆರೆಗಿನ ಮಾಸಿಕ ಪ್ಯಾಕ್ ಲಭ್ಯವಾಗಲಿದೆ. ಶೇ. 28 ರಷ್ಟಿದ್ದ ಜಿಯೋ ಮಾರ್ಕೆಟ್ ಶೇರ್ ಶೇ. 48ಕ್ಕೆ ಏರಿದೆ. 2299 ರೂ. ಇದ್ದ ಮೊಬೈಲ್ ದರ ಇಳಿಕೆಯಾಲಿದೆ.

ಹೊಸ ಮಾಡೆಲ್ ತರುವ ಬಗ್ಗೆ ಯಾವುದೇ ಆಲೋಚನೆಗಳಿಲ್ಲ. ಇರುವುದನ್ನೇ ಡೆವಲಪ್ ಮಾಡಿ ಜನರಕೈಗೆ ಸರಳ ರೀತಿಯಲ್ಲಿ ಇಡಲಾಗುವದು ಎಂದು ಕಂಪನಿ ತಿಳಿಸಿದೆ.

Follow Us:
Download App:
  • android
  • ios