ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು BSNL ಕಂಪನಿಗಳು ವಾರ್ಷಿಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ. ಈ ಪ್ಲಾನ್‌ಗಳು ಡೇಟಾ, ಕರೆ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿವೆ.

ನವದೆಹಲಿ: ಕೆಲವೇ ದಿನಗಳಲ್ಲಿ 2024ಕ್ಕೆ ಗುಡ್‌ಬೈ ಹೇಳಿ 2025ರ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2024ರ ಮಧ್ಯದಲ್ಲಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಬೆಲೆ ಏರಿಕೆ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕಣ್ಮುಚ್ಚಿ ಬಿಡೋವಷ್ಟರಲ್ಲಿ ತಿಂಗಳು ಮುಗಿಯುತ್ತದೆ. ಪದೇ ಪದೇ ತಿಂಗಳ ರೀಚಾರ್ಜ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳೋದು ಗ್ರಾಹಕರ ಜೇಬಿಗೆ ಹೊರೆಯಾಗುತ್ತದೆ. ವರ್ಷದ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವ ಮೂಲಕ ಪದೇ ಪದೇ ಮೊಬೈಲ್ ರೀಚಾರ್ಜ್ ಮಾಡುವ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Reliance Jio, Airtel, Vodafone Idea ಮತ್ತು BSNL ಟೆಲಿಕಾಂ ಕಂಪನಿಗಳು ಇಡೀ ವರ್ಷಕ್ಕೆ ಮಾನ್ಯವಾಗಿರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು ವರ್ಷದವರೆಗೆ ಟೆನ್ಷನ್ ಫ್ರೀ ಆಗುತ್ತದೆ.

ಈ ಯೋಜನೆಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವ ಮೂಲಕ ಮತ್ತೆ ಮತ್ತೆ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತರಾಗಬಹುದು. ಇಡೀ ವರ್ಷಕ್ಕೆ ಡೇಟಾ, ಕರೆ ಮತ್ತು SMS ಪ್ರಯೋಜನಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಟೆಲಿಕಾಂ ಕಂಪನಿಗಳ ಒಂದು ವರ್ಷದ ಪ್ಲಾನ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

Reliance Jio 1 Year Prepaid Plan
1. 336 ದಿನದ ಪ್ಲಾನ್:
 895 ರೂಪಾಯಿ ರೀಚಾರ್ಜ್ ಮಾಡ್ಕೊಂಡು ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಪ್ರತಿದಿನ 24GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, 100 ಎಸ್ಎಂಎಸ್ ಕಳುಹಿಸಬಹುದು. ಇದರ ಜೊತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಸಹ ಲಭ್ಯವಾಗುತ್ತದೆ.
2. 365 ದಿನದ ಪ್ಲಾನ್: ಈ ಪ್ಲಾನ್‌ ಆಕ್ಟಿವೇಟ್ ಮಾಡಿಕೊಳ್ಳಲು 3,599 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ 2.5GB ಡೇಟಾ, ಉಚಿತ 100 ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಲಾಭವೂ ಸಿಗಲಿದೆ. ಇದರ ಜೊತೆ ಜಿಯೋ ಆಪ್‌ ಲಾಗಿನ್ ಆಕ್ಸೆಸ್ ಸಿಗುತ್ತದೆ.
3. 11 ತಿಂಗಳ ಪ್ಲಾನ್: 1899 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ 336 ದಿನ ಅಂದ್ರೆ 11 ತಿಂಗಳ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಪ್ರತಿದಿನ 2GB ಡೇಟಾ, 100 ಎಸ್‌ಎಂಎಸ್ ಮತ್ತು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. 

ಇದನ್ನೂ ಓದಿ: ಜಿಯೋ ಹೊಸ ವರ್ಷದ ಬಂಪರ್, ಕೇವಲ 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!

Airtel and Vodafone Idea 1 Year Plan
ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡೂ 365 ದಿನಗಳ ಮಾನ್ಯತೆಯೊಂದಿಗೆ ಯೋಜನೆಗಳನ್ನು ನೀಡುತ್ತವೆ. ಈ ಎರಡೂ ಕಂಪನಿಗಳ ಯೋಜನೆಯು ರೂ 1,999 ಆಗಿದ್ದು, ಇದರಲ್ಲಿ 24GB ಹೈ ಸ್ಪೀಡ್ ಡೇಟಾ, ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿದೆ.

BSNL 1 Year Plan
BSNL ನ 365 ದಿನಗಳ ಯೋಜನೆಯು 2,999 ರೂ. ಯಲ್ಲಿ ಲಭ್ಯವಿದೆ. ಈ ಯೋಜನೆಯಡಿಯಲ್ಲಿ, ನೀವು ಪ್ರತಿದಿನ 3GB ಡೇಟಾ, 100 SMS ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆಯುತ್ತೀರಿ. ಈ ಯೋಜನೆಯು 4G ನೆಟ್‌ವರ್ಕ್‌ನ ಹೆಚ್ಚಿನ ವೇಗದ ಇಂಟರ್ನೆಟ್ ಒಳಗೊಂಡಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ