ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ

ಹೊಸ ವರ್ಷಕ್ಕೂ ಮುನ್ನವೇ ಬಂಪರ್ ಆಫರ್ ನೀಡಿದ್ದು, ರಿಲಯನ್ಸ್ ಜಿಯೋ ತನ್ನ ಜನಪ್ರಿಯ ಪ್ರಿಪೇಯ್ಡ್ ಪ್ಲಾನ್‌ನ ಬೆಲೆಯನ್ನು ಇಳಿಸಿ, ವ್ಯಾಲಿಡಿಟಿ ಮತ್ತು ಡೇಟಾವನ್ನು ಹೆಚ್ಚಿಸಿದೆ. .

New Changes in  Reliance Jio Rs 999 plan validity and data limit increased mrq

ಮುಂಬೈ:  ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ವರ್ಷಕ್ಕೂ ಮುನ್ನವೇ ಬಂಪರ್ ಆಫರ್ ನೀಡಿದ್ದು, ತನ್ನ ಜನಪ್ರಿಯ ಪ್ರಿಪೇಯ್ಡ್  ಪ್ಲಾನ್ ಬೆಲೆಯನ್ನು ಇಳಿಕೆ  ಮಾಡಿದೆ.  ಬೆಲೆ ಇಳಿಕೆ ವ್ಯಾಲಿಡಿಟಿ ಮತ್ತು ಡೇಟಾ ಸಹ ಏರಿಕೆ ಮಾಡಿದೆ. ಈ ಹೊಸ ಘೋಷಣೆಯಿಂದ ಜಿಯೋ ಬಳಕೆದಾರರು ಹೊಸ ವರ್ಷಕ್ಕೂ ಮುನ್ನವೇ ನ್ಯೂ ಇಯರ್ ಆಚರಣೆಗೆ ಮುಂದಾಗಿದ್ದಾರೆ. ಈ ಮೂಲಕ ಎಂಎನ್‌ಪಿ ಮೂಲಕ ಪೋರ್ಟ್ ಆಗುತ್ತಿರೋ ಬಳಕೆದಾರರನ್ನು ತಡೆಯಲು ರಿಲಯನ್ಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. 

ರಿಲಯನ್ಸ್  ಜಿಯೋದಿಂದ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ 
ರಿಲಯನ್ಸ್ ಜಿಯೋ  ದಿಢೀರ್ ಅಂತ ತನ್ನ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬದಲಾವಣೆಗಳನ್ನು ತಂದಿದೆ. ತನ್ನ ಹಳೆ ಪ್ಲಾನ್‌ನನ್ನು ಜಿಯೋ ರಿಲಯನ್ಸ್ ರೀ ಲಾಂಚ್ ಮಾಡಿದೆ.  ಬೆಲೆ ಏರಿಕೆಗೂ ಮುನ್ನ  ಇದೇ ದರದ ಪ್ಲಾನ್‌ಗಳು ಲಭ್ಯವಿದ್ದವು. ಹೌದು, ರಿಲಯನ್ಸ್ ಜಿಯೋ 999 ರೂಪಾಯಿ ಪ್ಲಾನ್ ಕೆಲ ಬದಲಾವಣೆಗಳನ್ನು ತಂದಿದೆ. 

ಕೆಲವು ತಿಂಗಳ ಹಿಂದೆ ಖಾಸಗಿ ಟೆಲಿಕಾಂ ಕಂಪನಿಗಳಾದ  ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟ್ಯಾರಿಫ್  ಬೆಲೆಗಳನ್ನು ಏರಿಕೆ ಮಾಡಿಕೊಂಡ ಪರಿಣಾಮ ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ಈ ಹೊರ ಹೋಗುವಿಕೆಯನ್ನು ತಡೆಯಲು ಹೊಸ ಟ್ಯಾರಿಫ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿವೆ. 

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ ಯಾವಾಗ ಪ್ರಶ್ನೆಗೆ ಉತ್ತರಿಸಿದ ಆರ್ಥಿಕ ತಜ್ಞ, ಎಷ್ಟು ಕಡಿಮೆಯಾಗುತ್ತೆ ಅಂತಾನೂ ಹೇಳಿದ್ರು!

999 ರೂಪಾಯಿ ರೀಚಾರ್ಜ್ ಪ್ಲಾನ್
ರಿಲಯನ್ಸ್ ಜಿಯೋ 999 ರೂಪಾಯಿ ಪ್ಲಾನ್‌ನ್ನು ಅಪ್‌ಡೇಟ್ ಮಾಡಿ ಬಿಡುಗಡೆಗೊಳಿಸಿದೆ. ಈ ಮೊದಲು 84 ದಿನ ವ್ಯಾಲಿಡಿಟಿಯನ್ನು 999 ರೂಪಾಯಿ ಪ್ಲಾನ್ ಹೊಂದಿತ್ತು. ಇದೀಗ 84 ರಿಂದ 98 ದಿನಕ್ಕೆ ಏರಿಕೆ ಮಾಡಲಾಗಿದೆ. ಒಟ್ಟು 14 ದಿನಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ಮಾತ್ರವಲ್ಲ 2GB ಬದಲಾಗಿ ಪ್ರತಿದಿನ 3GB ಡೇಟಾ ಹೆಚ್ಚಿಸಲಾಗಿದೆ. ಹೆಚ್ಚುವರಿ ಡೇಟಾ ಮತ್ತು ವ್ಯಾಲಿಡಿಟಿಯಿಂದ ನಿಮಗೆ 200 ರೂಪಾಯಿವರೆಗೆ ಉಳಿತಾಯವಾಗಲಿದೆ.

ಉಳಿದಂತೆ 999 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 100 ಎಸ್ಎಂಎಸ್, ಅನ್‌ಲಿಮಿಟೆಡ್ ಕಾಲ್ ಸಿಗುತ್ತದೆ. ಉಚಿತವಾಗಿ ಜಿಯೋ ಟಿವಿ, ಜಿಯೋ ಸಿನಿಮಾದ ಅಕ್ಸೆಸ್ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ. 

ಇದನ್ನೂ ಓದಿ: ಜಿಯೋ ಹೊಸ ವರ್ಷದ ಬಂಪರ್, ಕೇವಲ 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!

Latest Videos
Follow Us:
Download App:
  • android
  • ios