gmailಗೆ ತುಂಬಿತು 15 ವರ್ಷ; ಹೇಗಿದ್ದಾ ಹೇಗಾದ ಗೊತ್ತಾ Google ಪುತ್ರ?

email ಆಧುನಿಕ ಇಂಟರ್ನೆಟ್ ತಂತ್ರಜ್ಞಾನದ ಪ್ರಮುಖ ಅವಿಷ್ಕಾರ; email ಇಲ್ಲದ ಜಗತ್ತನ್ನು ಊಹಿಸುವುದೂ ಕಷ್ಟ. ಜನಪ್ರಿಯ  gmailಗೆ 15 ವರ್ಷ ತುಂಬಿದೆ. ಇಲ್ಲಿದೆ ಒಂದು ಕಿರು ಪರಿಚಯ

popular emailing service gmail turns 15 here is brief intro

ಭೂಮಿಯ ಮೇಲೆ ಇಂಟರ್ನೆಟ್ ಹುಟ್ಟು 1983ನಲ್ಲಾದರೂ, ಇಂಟರ್ನೆಟ್ ಜನಪ್ರಿಯವಾದುದ್ದು 90ರ ದಶಕದಲ್ಲಿ. ಆ ಕಾಲದಲ್ಲಿ ಇಂಟರ್ನೆಟ್ ಅತೀ ದೊಡ್ಡ ಸಾಧನೆ ಎಂದರೆ ಸಂವಹನಕ್ಕೆ ಹೊಸ ಆಯಾಮವನ್ನು ಒದಗಿಸಿದ್ದು.

ಜನಸಾಮಾನ್ಯರಿಗೆ ಮೊದಮೊದಲು ಇಂಟರ್ನೆಟ್  ಅಂದ್ರೆ ಇ-ಮೇಲ್. 90ರ ದಶಕದ ಅಂತ್ಯ ಹಾಗೂ 2000ರ ಆರಂಭದಲ್ಲಿ  hotmail.com, usa.net, yahoo ಮುಂತಾದ ಬೆರಳಣಿಕೆಯ ದಿಗ್ಗಜ ಕಂಪನಿಗಳು e-mail ಸೇವೆಯನ್ನು ಒದಗಿಸುತ್ತಿದ್ದುವು.

ಇದನ್ನೂ ಓದಿ: ವೆಬ್‌ ವಿಳಾಸ ಜೂನ್‌ನಿಂದ ಕನ್ನಡದಲ್ಲೂ ಲಭ್ಯ

2004ರ ಏ. 01ರಂದು Google ಕಂಪನಿಯು gmailಗೆ ಜನ್ಮ ನೀಡಿತು.  ಬರೇ 15 ವರ್ಷಗಳಲ್ಲಿ gmail ಬರೋಬ್ಬರಿ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ದೈತ್ಯ ಕಂಪನಿಯಾಗಿ ಬೆಳೆದಿದೆ.

ಮೇಲ್ ಐಡಿ ಅಂದ್ರೆ gmail id ಎಂಬ ಪರಿಸ್ಥಿತಿಯಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಜಾಗತಿಕ email ಮಾರುಕಟ್ಟೆಯಲ್ಲಿ 27% ಪಾಲು gmailನದ್ದು! gmail ಮೂಲಕ ಒಂದು ದಿನದಲ್ಲಿ ಬರೋಬ್ಬರಿ 56 ಬಿಲಿಯನ್ ಮೇಲ್ ಗಳನ್ನು ಕಳುಹಿಸಲಾಗುತ್ತದೆ.

ಇದನ್ನೂ ಓದಿ:  ನಿದ್ದೆ ಮಾಡಿದ್ರೆ 13 ಲಕ್ಷ ಸಂಬಳ: ನಾಸಾ ಬಂಪರ್ ಆಫರ್!

gmail ಕೂಡಾ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕೊಡುತ್ತಾ ಬಂದಿದೆ. ಸಾಮಾನ್ಯ email ನಿಂದ ಆರಂಭಿಸಿ 30 ಟೆರಾ ಬೈಟ್ ವೆರೆಗೆ ಸ್ಟೋರೆಜ್ ಸ್ಪೇಸ್ ಒದಗಿಸುವಷ್ಟು ಬೆಳೆದುಬಿಟ್ಟಿದೆ. ಹಾಗೂ ಗೂಗಲ್ ನ ಇತರ ಉತ್ಪನ್ನಗಳಾದ ಗೂಗಲ್ ಶೀಟ್ಸ್, ಗೂಗಲ್ ಡ್ರೈವ್, ಗೂಗಲ್ ಫೋಟೋಸ್ ಮುಂತಾದವುಗಳೊಂದಿಗೂ ಬೆಸೆಯಲ್ಪಟ್ಟಿದೆ. 
 

Latest Videos
Follow Us:
Download App:
  • android
  • ios