Asianet Suvarna News Asianet Suvarna News

ವೆಬ್‌ ವಿಳಾಸ ಜೂನ್‌ನಿಂದ ಕನ್ನಡದಲ್ಲೂ ಲಭ್ಯ

ವೆಬ್‌ ವಿಳಾಸ ಜೂನ್‌ನಿಂದ ಕನ್ನಡದಲ್ಲೂ ಲಭ್ಯ  | 9 ಪ್ರಾದೇಶಿಕ ಭಾಷೆಗಳಲ್ಲಿ ಸಂಪೂರ್ಣ ಡೊಮೇನ್‌ ನೇಮ್‌ | ಇಂಗ್ಲಿಷ್‌ ಬಳಸಬೇಕಾದ ಪ್ರಮೇಯವೇ ಇಲ್ಲ |  ಸರ್ವರ್‌ಗಳಿಗೆ ಭಾರತೀಯ ಭಾಷೆಗಳ ಲಿಪಿ ಸೇರ್ಪಡೆ ಕೆಲಸ

Website address will be available in Kannada soon
Author
Bengaluru, First Published Apr 2, 2019, 11:16 AM IST

ನವದೆಹಲಿ (ಏ. 02): ಯಾವುದಾದರೂ ವೆಬ್‌ಸೈಟ್‌ ನೋಡಬೇಕು ಎಂದರೆ, ಅಡ್ರೆಸ್‌ ಬಾರ್‌ನಲ್ಲಿ ಇಂಗ್ಲಿಷ್‌ನಲ್ಲೇ ಟೈಪಿಸಬೇಕು. ಅದು ಕನ್ನಡ ವೆಬ್‌ಸೈಟೇ ಆಗಿರಲಿ, ಹಿಂದಿ ಅಥವಾ ಬೇರೆ ಭಾಷೆಯದ್ದೇ ಆಗಿರಲಿ, ಇಂಗ್ಲಿಷ್‌ ಕಡ್ಡಾಯ. ಜೂನ್‌ ನಂತರ ಈ ರೀತಿ ಇರುವುದಿಲ್ಲ. ವ್ಯಕ್ತಿಗಳು, ಸಂಸ್ಥೆಗಳು ಅಥವಾ ಕಂಪನಿಗಳು ಕನ್ನಡ ಸೇರಿ ದೇಶದ 9 ಪ್ರಾದೇಶಿಕ ಭಾಷೆಗಳಲ್ಲಿ ವೆಬ್‌ ವಿಳಾಸ ಹೊಂದಬಹುದು. ಜನಸಾಮಾನ್ಯರು ಅಡ್ರೆಸ್‌ ಬಾರ್‌ನಲ್ಲಿ ತಮ್ಮ ಭಾಷೆಯಲ್ಲೇ ವೆಬ್‌ ವಿಳಾಸ ನಮೂದಿಸಿ ಮಾಹಿತಿ ಪಡೆಯಬಹುದು.

ಇದಕ್ಕೆ ತಕ್ಕಂತೆ ಜಾಗತಿಕ ಇಂಟರ್ನೆಟ್‌ ಸರ್ವರ್‌ಗಳು ಜೂನ್‌ ಹೊತ್ತಿಗೆ ಸಜ್ಜಾಗಲಿವೆ. ಆಗಿನಿಂದ ಕನ್ನಡ, ತಮಿಳು, ತೆಲುಗು, ಮಲಯಾಳ, ಒಡಿಯಾ, ದೇವನಾಗರಿ, ಬಂಗಾಳಿ, ಗುಜರಾತಿ, ಗುರ್ಮುಖಿ (ಪಂಜಾಬಿ) ಭಾಷೆಗಳಲ್ಲಿ ವೆಬ್‌ಸೈಟ್‌ ವಿಳಾಸಗಳನ್ನು ನೋಂದಣಿ ಮಾಡಿಸಿಕೊಳ್ಳಬಹುದು.

ಸದ್ಯ ಜಾಗತಿಕವಾಗಿ ಮ್ಯಾಂಡರಿನ್‌, ಅರೇಬಿಕ್‌, ರಷ್ಯನ್‌ ಹಾಗೂ ದೇವನಾಗರಿಯಂತಹ ಇಂಗ್ಲಿಷೇತರ ಭಾಷೆಗಳಲ್ಲಿ ವೆಬ್‌ಸೈಟ್‌ ಹೆಸರು ಪಡೆಯಬಹುದಾಗಿದೆ. ಆದರೆ ಅದು ಸಂಪೂರ್ಣವಾಗಿ ಅಲ್ಲ. ಟಾಪ್‌ ಲೆವೆಲ್‌ ಡೊಮೇನ್‌ (ಟಿಎಲ್‌ಡಿ) ಅಂದರೆ ವೆಬ್‌ ವಿಳಾಸದಲ್ಲಿ ‘ಡಾಟ್‌’ ಎಂದು ಶುರುವಾಗುವಲ್ಲಿಂದ ವೆಬ್‌ಸೈಟ್‌ ವಿಳಾಸ ಕಾದಿರಿಸಬಹುದಾಗಿದೆ. ಅಲ್ಲೊಂದು ಸಮಸ್ಯೆ ಇದೆ. ರೂಟ್‌ ಸರ್ವರ್‌ಗಳು ಗುರುತಿಸುವಂತಹ ಅಕ್ಷರಗಳು ಇರಬೇಕು.

ಜೂನ್‌ನಂತರ ಸಂಪೂರ್ಣ ವಿಳಾಸ 9 ಪ್ರಾದೇಶಿಗಳಲ್ಲಿ ಲಭ್ಯವಾಗುತ್ತದೆ. ವಿಶ್ವಾದ್ಯಂತ ವೆಬ್‌ಸೈಟ್‌ ಡೊಮೇನ್‌ ನೇಮ್‌ ವ್ಯವಸ್ಥೆ ನಿರ್ವಹಿಸುವ ಲಾಭರಹಿತ ಸಂಸ್ಥೆಯಾಗಿರುವ ‘ಇಂಟರ್ನೆಟ್‌ ಕಾರ್ಪೋರೇಷನ್‌ ಫಾರ್‌ ಅಸೈನ್‌್ಡ ನೇಮ್ಸ್‌ ಅಂಡ್‌ ನಂಬ​ರ್‍ಸ್’ (ಐಕಾನ್‌) 9 ಭಾಷೆಗಳ ಲಿಪಿಗಳನ್ನು ರೂಟ್‌ ಸರ್ವರ್‌ಗಳಿಗೆ ಸೇರ್ಪಡೆ ಮಾಡುತ್ತಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಏಕೆ?:

ಸದ್ಯ ವಿಶ್ವದ ಶೇ.52 ರಷ್ಟುಜನರು ಇಂಟರ್ನೆಟ್‌ ಸೌಲಭ್ಯ ಬಳಸುತ್ತಿದ್ದಾರೆ. ಉಳಿಕೆ ಶೇ.48ರಷ್ಟುಜನರು ಇಂಗ್ಲಿಷೇತರ ಭಾಷೆ ಬಲ್ಲವರಾಗಿದ್ದು, ಇಂಗ್ಲಿಷ್‌ನಲ್ಲಿ ಟೈಪ್‌ ಮಾಡುವ ಸಾಮರ್ಥ್ಯ ಹೊಂದಿಲ್ಲ. ಅವರ ಭಾಷೆಯಲ್ಲೇ ಡೊಮೇನ್‌ ನೇಮ್‌ಗಳು ಲಭ್ಯವಾದರೆ, ಅವರೂ ಇಂಟರ್ನೆಟ್‌ ಬಳಸಲು ಸಾಧ್ಯವಾಗುತ್ತದೆ ಎಂಬ ವಾದ ಐಕಾನ್‌ನದ್ದು.

Follow Us:
Download App:
  • android
  • ios