ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಜೆಮಿನಿಯ ಜಾದೂ! ಭಾಷಾಂತರ ಈಗ ಸುಲಭ!
ಭಾಷೆಗಳ ಗಡಿ ದಾಟಿ ಜಗತ್ತನ್ನು ಒಂದುಗೂಡಿಸುವ ಗೂಗಲ್ ಟ್ರಾನ್ಸ್ಲೇಟ್ ಆ್ಯಪ್, ಸದ್ಯದಲ್ಲೇ ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಹೊಸ ರೂಪ ಪಡೆಯಲಿದೆ. ಹೌದು, ಗೂಗಲ್ ಸಂಸ್ಥೆ ಜೆಮಿನಿ AI ತಂತ್ರಜ್ಞಾನವನ್ನು ಸೇರಿಸಿ, ಭಾಷಾಂತರದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿದೆ. ಇನ್ಮುಂದೆ, ಬಳಕೆದಾರರು ತಮ್ಮ ಭಾಷಾಂತರಗಳನ್ನು ತಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡು, ಆಳವಾದ ತಿಳುವಳಿಕೆ ಪಡೆಯಬಹುದು!