ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್‌ ಮತ್ತು ಕಾರನ್ನು ಸಾಲ ನೀಡಿದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಡಿಜಿಟಲೀ ಜಪ್ತಿಯಾಗಲಿದೆ.

ಮುಂಬೈ: ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್‌ ಮತ್ತು ಕಾರನ್ನು ಸಾಲ ನೀಡಿದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಡಿಜಿಟಲೀ ಜಪ್ತಿಯಾಗಲಿದೆ.

ಹೌದು. ಇಂಥಹ ಒಂದು ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್ ಚಿಂತನೆ ನಡೆಸಿದೆ. ಮೊಬೈಲ್‌ ಅನ್ನು ಸಾಲ ಮಾಡಿ ಖರೀದಿ ಮಾಡಿ ಅದರ ಪ್ರತಿ ತಿಂಗಳ ಕಂತು (ಇಎಂಐ) ಸರಿಯಾಗಿ ಪಾವತಿ ಮಾಡದೇ ಇದ್ದಲ್ಲಿ ಅದನ್ನು ಲಾಕ್‌ ಮಾಡಲು ಆರ್‌ಬಿಐ ಚಿಂತನೆ ನಡೆಸಿದೆ.

ಈ ಬಗ್ಗೆ ಗುರುವಾರ ಮಾತಾಡಿದ ಆರ್‌ಬಿಐನ ಉಪ ಗವರ್ನರ್‌ ರಾಜೇಶ್ವರ್‌ ರಾವ್‌, ‘ಈ ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗ ವಾಹನಗಳ ಸಾಲದ ಪಾವತಿ ಸರಿಯಾಗಿ ಆಗದಿದ್ದಲ್ಲಿ ಬ್ಯಾಂಕುಗಳು ಅವುಗಳನ್ನು ಜಪ್ತಿ ಮಾಡುತ್ತವೆ. ಆದರೆ ಫೋನ್‌ಗೆ ಅಂತಹ ಕ್ರಮಗಳಿಲ್ಲ. ಅದಕ್ಕಾಗಿ ಸಾಲಗಾರರು ಮತ್ತು ಗ್ರಾಹಕರ ವಿಚಾರಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್‌ಡೇಟ್‌ಗೆ ಸೂಚನೆ

ನವದೆಹಲಿ :  ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಸೇರಿದಂತೆ ಯಾವುದೇ ಗ್ಯಾಜೆಟ್ಸ್ ಬಳಸುತ್ತಿರುವ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಆದರೆ ಇದೇ ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕ್ರೋಮ್ ಬಳಸುತ್ತಿರುವ ಎಲ್ಲಾ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ತಕ್ಷಣವೇ ಕ್ರೋಮ್ ಅಪ್‌ಡೇಟ್ ಮಾಡಲು ಸೂಚಿಸಿದೆ. ಹೈ ಸೆಕ್ಯೂರಿಟಿ ರಿಸ್ಕ್ ಸಮಸ್ಯೆಗಳು ಎದುರಾಗಿದೆ. ಇದರ ಪರಿಣಾಮ ಕ್ರೋಮ್ ಅಪ್‌ಡೇಟ್ ಉಪಯುಕ್ತ ಎಂದು ಸೂಚಿಸಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಂ (CERT-In) ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ. ಅಪ್‌ಡೇಟ್ ಮಾಡದೇ ಬಳಕೆ ಮಾಡಿದರೆ ನಿಮ್ಮ ಡೇಟಾವನ್ನು ಹ್ಯಾಕರ್ಸ್ ಕದಿಯುವ ಸಾಧ್ಯತೆ ಇದೆ.

ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಸಮಸ್ಯೆ

ಗೂಗಲ್ ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಸೆಕ್ಯೂರಿಟಿ ಸಮಸ್ಯೆಗಳು ಎದುರಾಗಿದೆ ಎಂದು CERT-In ಹೇಳಿದೆ. ವಿಂಡೋಸ್, ಮ್ಯಾಕ್ಒಎಸ್ ಹಾಗೂ ಲಿನಕ್ಸ್ ಪ್ಲಾಟ್‌ಫಾರ್ಮ್ ಕೂಡ ರಿಸ್ಕ್‌ನಲ್ಲಿದ ಎಂದಿದೆ. ಹ್ಯಾಕರ್ಸ್ ಸುಲಭವಾಗಿ ಆರ್ಟಿಬಿಟರಿ ಕೋಡ್ ಮೂಲಕ ಮಾಹಿತಿ, ಡೇಟಾಗಳನ್ನು ಕದಿಯುವ ಸಾದ್ಯತೆ ಹೆಚ್ಚಿದೆ ಎಂದು CERT-In ಹೇಳಿದೆ. ಸೆಕ್ಯೂರಿಟಿ ರಿಸ್ಕ್ ಎದುರಾಗಿರುವ ಕಾರಣ ಹ್ಯಾಕರ್ಸ್ ಸುಲಭಾಗಿ ಡೇಟಾಗಳನ್ನು ಕದಿಯುವ ಸಾಧ್ಯೆತಗೆಳಿವೆ ಎಂದಿದೆ.

ಕ್ರೋಮ್ ಬಳಕೆದಾರರ ಪೈಕಿ ಯಾರಿಗೆಲ್ಲಾ ಈ ಸೆಕ್ಯೂರಿಟಿ ರಿಸ್ಕ್ ಸಮಸ್ಯೆ ಇದೆ

ಗೂಗಲ್ ಕ್ರೋಮ್ ಬಳಸುವ ವಿಂಡೋಸ್ ಹಾಗೂ ಮ್ಯಾಕ್‌ಗಗಳಲ್ಲಿ ಗೂಗಲ್ ಕ್ರೋಮ್ 140.0.7339.207/.208 ವರ್ಶಗಳಲ್ಲಿ ಸಮಸ್ಯೆ ಇದೆ.

ಲಿನಕ್ಸ್‌ನಲ್ಲಿ ಬಳಸುವ ಗೂಗೂಲ್ ಕ್ರೋಮ್ 140.0.7339.207 ವರ್ಶನ್‌ನಲ್ಲೂ ಸೆಕ್ಯೂರಿಟಿ ಸಮಸ್ಯೆಗಳಿವೆ