Asianet Suvarna News Asianet Suvarna News

OnePlus Nord 2 5G ಸ್ಫೋಟ: ಸ್ಮಾರ್ಟ್‌ಫೋನ್ ಡಿಸ್ಪ್ಲೇ, ಫ್ರೇಮ್‌ ಛಿದ್ರ ಛಿದ್ರ

OnePlus Nord 2 5G ಸ್ಫೋಟಗೊಂಡಿರುವ  ಬಗ್ಗೆ ಟ್ವೀಟರ್‌ನಲ್ಲಿ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು ಮಾಹಿತಿ ನೀಡಿದ್ದರು

OnePlus Nord 2 5G Allegedly Explodes Again in India mnj
Author
Bengaluru, First Published Apr 6, 2022, 4:07 PM IST

OnePlus Nord 2 5G Explodes: ಒನ್‌ಪ್ಲಸ್ OnePlus Nord 2 5G ಭಾರತದಲ್ಲಿ ಸ್ಫೋಟಗೊಂಡ ಹಲವು ಪ್ರಕರಣಗಳು ಕಳೆದ ಕೆಲ ತಿಂಗಳ ಹಿಂದೆ ಬೆಳಕಿಗೆ ಬಂದಿದ್ದವು. ಈಗ ಮತ್ತೊಮ್ಮೆ ಇದೇ ಸ್ಮಾರ್ಟ್‌ಫೋನ್‌ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.  ಈ ಬಗ್ಗೆ ಟ್ವೀಟರ್‌ನಲ್ಲಿ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು ಮಾಹಿತಿ ನೀಡಿದ್ದರು. ಆದರೆ ಈಗ ವಿಡಿಯೋ ಡಿಲೀಟ್‌ ಮಾಡಲಾಗಿದೆ. ಕುತೂಹಲಕಾರಿಯಾಗಿ, ಪತ್ರಿಕಾ ವರದಿ ಮಾಡಿದ ಎಲ್ಲಾ ಹಿಂದಿನ ಪ್ರಕರಣಗಳಲ್ಲಿ, ದೂರು ನೀಡಿದ್ದ ಬಳಕೆದಾರರು ಗಮನಕ್ಕೆ ಬಂದ ನಂತರ ಘಟನೆಗಳನ್ನು ಉಲ್ಲೇಖಿಸಿದ ಟ್ವೀಟ್‌ಗಳನ್ನು ತೆಗೆದುಹಾಕಿದ್ದಾರೆ.

ಬಳಕೆದಾರರು ವಿಡಿಯೋದಲ್ಲಿ ಫೋನ್ ಸಂಪೂರ್ಣವಾಗಿ ತೆರೆದುಕೊಂಡಿರುವುದು ಸ್ಪಷ್ಟವಾಗಿದ್ದು ಫೋನ್‌ ನಿಷ್ಪ್ರಯೋಜಕವಾಗಿದೆ ಎಂದು ಹೇಳಲಾಗುತ್ತದೆ. ಇದೇ ಸಮಸ್ಯೇಯನ್ನು ಬಳಕೆದಾರರು ಲಿಂಕಡ್‌ಇನ್‌ನಲ್ಲಿ ಕೂಡ ಬರೆದುಕೊಂಡಿದ್ದಾರೆ. 

ಸ್ಮಾರ್ಟ್‌ಫೋನ್ ಸ್ಫೋಟದಿಂದ  ಬಳಕೆದಾರರಿಗೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಆದರೆ OnePlus Nord 2 5G ಸುಟ್ಟುಹೋಗಿದೆ.  ಸುಮಾರು ಐದು ತಿಂಗಳ ಹಿಂದೆ  OnePlus Nord 2 5G ಸ್ಫೋಟಗೊಂಡು  ಬಳಕೆದಾರರಿಗೆ ಗಂಭೀರವಾದ ಸುಟ್ಟಗಾಯಗಳಾಗಿದ್ದ ಘಟನೆ ನಂತರ ಇದೀಗ ಮತ್ತೆ ಈ ಸಮಸ್ಯೆಯು ಮತ್ತೆ ಕಾಣಿಸಿಕೊಂಡಿದೆ. 

ಇದನ್ನೂ ಓದಿ: ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್!

ಟ್ವಿಟರ್ ಬಳಕೆದಾರ ಲಕ್ಷಯ್ ವರ್ಮಾ (Lakshay Verma) ಅವರು ತಮ್ಮ ಸಹೋದರನ OnePlus Nord 2 5G ಅವರು ಕರೆಯಲ್ಲಿದ್ದಾಗ ಅವರ ಕೈಯಲ್ಲಿ ಸ್ಫೋಟಗೊಂಡಿದೆ ಎಂದು ವರದಿ ಮಾಡಿದ್ದಾರೆ. ಹೊಸ ದೆಹಲಿ ಮೂಲದ ಬಳಕೆದಾರರು ಸುಟ್ಟ ಫೋನ್‌ಗೆ ಪರಿಹಾರವನ್ನು ಕಂಡುಹಿಡಿಯಲು ಕನ್ನಾಟ್ ಪ್ಲೇಸ್‌ನಲ್ಲಿರುವ ಒನ್‌ಪ್ಲಸ್ ಸೇವಾ ಕೇಂದ್ರಕ್ಕೆ ಹೋಗಿದ್ದರು, ಆದರೆ ಕೇಂದ್ರವು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ವರ್ಮಾ ಆರೋಪಿಸಿದ್ದಾರೆ.  

ಟ್ವಿಟರ್ ಬಳಕೆದಾರರು ನೀಡಿದ ವಿವರಗಳ ಪ್ರಕಾರ, ಎರಡು-ಮೂರು ದಿನಗಳ ಕಾಲ ಸ್ಮಾರ್ಟ್‌ಫೋನನ್ನು ಇಟ್ಟುಕೊಂಡ ನಂತರ ಸ್ಫೋಟಗೊಂಡ ಫೋನನ್ನು ಮರುಪಡೆಯಲು ಸೇವಾ ಕೇಂದ್ರವು (Service Centre) ಬಳಕೆದಾರರಿಗೆ ಕರೆ ಮಾಡಿದೆ.

ಟ್ವಿಟರ್ ಬಳಕೆದಾರರು ಕಳೆದ ವಾರ ಸ್ಫೋಟದ ಬಗ್ಗೆ ಕೆಲ ವಿವರಗಳನ್ನು ಮತ್ತು ಸುಟ್ಟ ಫೋನಿನ  ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಛಿದ್ರಗೊಂಡ ಡಿಸ್ಪ್ಲೇ ಮತ್ತು ಬೇರ್ಪಟ್ಟ ಫ್ರೇಮ್ ಹೊಂದಿರುವ ಫೋನ್  ಕಾಣಬಹುದಾಗಿದೆ. 

ಇದನ್ನೂ ಓದಿ: ಚಾರ್ಜ್‌ ಹಾಕಿದ್ದ ಬೈಕ್‌ ಸ್ಫೋಟ.. ತಂದೆ-ಮಗಳ ದಾರುಣ ಸಾವು

ಆದರೆ ಘಟನೆಯು ಬುಧವಾರ  ಆನ್‌ಲೈನ್ ಕವರೇಜ್ ಪಡೆದ ಸ್ವಲ್ಪ ಸಮಯದ ನಂತರ ಆರಂಭಿಕ ಉಲ್ಲೇಖಗಳನ್ನು ಹೊಂದಿರುವ ಟ್ವೀಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ. ಬರೆಯುವ ಸಮಯದಲ್ಲಿ ಫೋನನ್ನು ಸುಡುವ ಸ್ಥಿತಿಯಲ್ಲಿ ತೋರಿಸುವ ವೀಡಿಯೊ ಇನ್ನೂ ಲಭ್ಯವಿತ್ತು. ಆದರೆ ಈಗ ಡೀಲಿಟ್‌ ಮಾಡಲಾಗಿದೆ. ಈ ಬಗ್ಗೆ ಲಿಂಕಡ್‌ ಇನ್‌ ಪೋಸ್ಟ್‌ನಲ್ಲಿ  ಕೂಡ ಬಳಕೆದಾರು ಮಾಹಿತಿ ನೀಡಿದ್ದಾರೆ. 

OnePlus Nord 2 5G Allegedly Explodes Again in India mnj

ಇದೇ ಮೊದಲಲ್ಲ: OnePlus Nord 2 5G ಸ್ಫೋಟಗೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಪ್ರಕರಣವೊಂದರಲ್ಲಿ ಒನ್‌ಪ್ಲಸ್ ತನ್ನ OnePlus Nord 2 5G ಯ ​​ಸ್ಫೋಟವನ್ನು ಆರೋಪಿಸಿ ದೂರು ನೀಡಿದ್ದ ಬಳಕೆದಾರರಿಗೆ ಕಾನೂನು ಸೂಚನೆಯನ್ನು ಸಹ ಕಳುಹಿಸಿದೆ. ಚೀನಾದ ಕಂಪನಿಯು ನವೆಂಬರ್‌ನಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿ ದೂರು ನೀಡಿದ್ದ ಬಳಕೆದಾರರೊಬ್ಬರಿಗೆ ಪರಿಹಾರವನ್ನು ನೀಡಿದೆ ಎಂದು ವರದಿಯಾಗಿದೆ.

Follow Us:
Download App:
  • android
  • ios