E-Bike Explodes: ಚಾರ್ಜ್ ಹಾಕಿದ್ದ ಬೈಕ್ ಸ್ಫೋಟ.. ತಂದೆ-ಮಗಳ ದಾರುಣ ಸಾವು
* ಇದೊಂದು ಘೋರ ದುರಂತ
* ಚಾರ್ಜ್ ಹಾಕಿದ್ದ ಬೈಕ್ ಸ್ಫೋಟಗೊಂಡು ತಂದೆ-ಮಗಳ ಸಾವು
* ಬಾತ್ ರೂಂನಲ್ಲಿ ಸಿಲುಕೊಂಡ
ಚೆನ್ನೈ(ಮಾ. 27) ಇದೊಂದು ಘೋರ ದುರಂತ. ಅಪಘಾತದಲ್ಲಿ (Accident) ತಂದೆ ಮತ್ತು ಮಗಳು ದಾರುಣ ಅಂತ್ಯ ಕಂಡಿದ್ದಾರೆ. ವೆಲ್ಲೂರಿನಿಂದ (Vellore)ಘಟನೆ ವರದಿಯಾಗಿದ್ದು ಅಪಘಾತ ಸುಂದರ ಕುಟುಂಬವನ್ನು ಬಲಿ ಪಡೆದುಕೊಂಡಿದೆ. ಎಲೆಕ್ಟ್ರಿಕ್ ಬೈಕ್ (E Bike) ತಂದೆ ಮಗಳ ಜೀವ ಬಲಿ ಪಡೆದುಕೊಂಡಿದೆ.
ರಾತ್ರಿ ಪೂರ್ತಿ ಜಾರ್ಜ್ ಗೆ ಹಾಕಿದ್ದ ಬೈಕ್ ಓವರ್ ಚಾರ್ಜಿಂಗ್ ಆಗಿದ್ದು ಸ್ಫೋಟಗೊಂಡಿದೆ. ಹೊಗೆ ಮತ್ತು ಬೆಂಕಿಯಿಂದ ತಪ್ಪಿಸಿಕೊಳ್ಳಲು ತಂದೆ ಮತ್ತು ಮಗಳು ಬಾತ್ ರೂಂ ನಲ್ಲಿ ಅಡಕಿ ಕುಳಿತುಕೊಂಡಿದ್ದರು. ಅಲ್ಲಿಯೇ ಉಸಿರು ಕಟ್ಟಿ (Death) ಸಾವನ್ನಪ್ಪಿದ್ದಾರೆ.
ಪೋಟೋಗ್ರಾಫರ್ ಆಗಿದ್ದ ದುರೈ ವರ್ಮಾ (49) ಅವರು ಎರಡು ದಿನಗಳ ಹಿಂದೆ ಬೈಕ್ ಖರೀದಿಸಿದ್ದು, ಶುಕ್ರವಾರ ರಾತ್ರಿ ವೆಲ್ಲೂರು ನಗರದ ಹೊರವಲಯದಲ್ಲಿರುವ ತಮ್ಮ ಮನೆಯ ಮುಂದೆ ಚಾರ್ಜ್ ಮಾಡಲು ಪ್ಲಗ್ ಇನ್ ಮಾಡಿ ಇಟ್ಟಿದ್ದರು. ಪೆಟ್ರೋಲ್ ಬೈಕ್ ಪಕ್ಕದಲ್ಲಿಯೇ ನಿಲ್ಲಿಸಿದ್ದರು. ಬೈಕ್ ಚಾರ್ಜ್ ಹಾಕಿ ತಂದೆ ಮಗಳು ನಿದ್ರೆಗೆ ಜಾರಿದ್ದಾರೆ.
ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಕದಲ್ಲಿದ್ದ ಬೈಕ್‌ನಲ್ಲಿದ್ದ ಪೆಟ್ರೋಲ್ ಬೈಕ್ ಗೆ ಬೆಂಕಿ ತಗುಲಿ ಮನೆಯೊಳಗೆ ವ್ಯಾಪಿಸಿದೆ.ಸರಿಯಾದ ಗಾಳಿ ಇಲ್ಲದ ಸಣ್ಣ ಮನೆಗೆ ದಟ್ಟ ಹೊಗೆ ಆವರಿಸಿದೆ. ದಟ್ಟ ಹೊಗೆಯಲ್ಲಿ ಏನು ಮಾಡಬೇಕು ಎಂದು ತೋಚದೆ ಸ್ನಾನದ ಕೋಣೆಗೆ ತೆರಳಿ ಅಡಗಿಕೊಂಡಿದ್ದಾರೆ,.
ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು.. ಪ್ರಯಾಣಿಕರು ಜಸ್ಟ್ ಮಿಸ್
ದುರಂತದ ವಿಚಾರ ಪಕ್ಕದ ಮನೆಯವರಿಗೆ ಗೊತ್ತಾಗಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ರಕ್ಷಣಾ ಕಾರ್ಯ ಮಾಡಿ ಮುಗಿಸುವ ವೇಳೆ ತಂದೆ ಮತ್ತು ಮಗಳು ಬಾತ್ ರೂಂ ನಲ್ಲಿ ಹೆಣವಾಗಿ ಬಿದ್ದಿರುವುದು ಕಂಡಿದೆ. ಪೋಟೋಗ್ರಾಫರ್ ಮಗ ಅದೇ ದಿನ ರಾತ್ರಿ ಊರಿನ ಬೇರೆ ಕಡೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊತ್ತಿಕೊಂಡು ಉಡಿದ ಬೈಕ್: ಪುಣೆಯಲ್ಲಿ ಓಲಾ ಎಲಕ್ಟ್ರಿಕ್ ಬೈಕ್ ಹೊತ್ತಿಕೊಂಡು ಉರಿದಿದೆ. ಈ ಘಟನೆ ಆತಂಕಕ್ಕೆ ಕಾರಣವಾಗಿದೆ. ಸಂಸ್ಥೆ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಅಲ್ಲದೆ ತಾನು ಆ ಸ್ಕೂಟರ್ ನ ಮಾಲೀಕರೊಂದಿಗೆ ಸಂಪರ್ಕದಲ್ಲಿರುವುದಾಗಿಯೂ, ಘಟನೆಯಲ್ಲಿ ಅವರಿಗೆ ಯಾವುದೇ ಪ್ರಾಣಪಾಯ ಸಂಭವಿವಿಸಿಲ್ಲ ಎಂಬುದನ್ನು ದೃಢಪಡಿಸಿದೆ.
ಕರ್ನಾಟಕದ ಕುಂದಾಪುರಲ್ಲಿಯತೂ ನೋಡನೋಡುತ್ತಿದ್ದಂತೆ ಇ ಬೈಕ್ ಹೊತ್ತಿ ಉರಿದಿತ್ತು. ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ನಾವು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅಷ್ಟೇ ಮುಖ್ಯವಾಗಿದೆ.
ಮಂಡ್ಯದಲ್ಲಿಯೂ ಆಗಿತ್ತು: ಶಾರ್ಟ್ಸರ್ಕ್ಯೂಟ್ನಿಂದ ಬೈಕ್ ಹೊತ್ತಿ ಉರಿದ ಘಟನೆ ಮಂಡ್ಯದ ಪಾಂಡವಪುರದಿಂದ ವರದಿಯಾಗಿತ್ತು. ಶ್ಯಾದನಹಳ್ಳಿ ಗ್ರಾಮಸ್ಥ ಸುನೀಲ್ ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಕ್ ಚಾಲನೆ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಬೈಕ್‌ನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದು ಸಾರ್ವಜನಿಕರು ದಂಪತಿಯನ್ನು ಕಾಪಾಡಿದ್ದರು.