Bike Catches Fire ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್!
- ಮೈಸೂರಿನಿಂದ ಆನಂತಪುರಕ್ಕೆ ಬೈಕ್‌ನಲ್ಲಿ ಪ್ರಯಾಣ
- ಬೈಕ್ ನಿಲ್ಲಿಸಿದ ಬೆನ್ನಲ್ಲೇ ಬೆಂಕಿ ಕಾಣಸಿಕೊಂಡು ಸ್ಫೋಟ
- ಭೀಕರ ಘಟನೆ ವಿಡಿಯೋ ಸೆರೆ, ಮತ್ತೆ ಹೆಚ್ಚಿದ ಆತಂಕ
ಅನಂತಪುರಂ(ಏ.04): ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ, ಬೆಂಕಿ ಕಾಣಿಸಿಕೊಂಡ ಘಟನೆಗಳ ಬೆನ್ನಲ್ಲೇ ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಸ್ಫೋಟಗೊಂಡ ಘಟನೆ ನಡೆದಿದೆ. ಮೈಸೂರಿನಿಂದ ಆಂಧ್ರಪ್ರದೇಶದ ಅನಂತಪುರಂಗೆ ಪ್ರಯಾಣ ಮಾಡಿ ನಿಲ್ಲಿಸಿದ ಬೆನ್ನಲ್ಲೇ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಬಾಂಬ್ ರೀತಿಯಲ್ಲೇ ಬೈಕ್ ಸ್ಪೋಟಗೊಂಡು ಆತಂಕದ ವಾತಾವರಣ ಸೃಷ್ಟಿಸಿದೆ.
ರವಿಚಂದ್ರ ಅನ್ನೋ ವ್ಯಕ್ತಿ ಇತ್ತೀಚೆಗೆ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಜ್ ಬೈಕ್ ಖರೀದಿಸಿದ್ದಾರೆ. ಬಳಿಕ ಮೈಸೂರಿನಿಂದ ನೇರವಾಗಿ ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿದ್ದಾರೆ. ಇಲ್ಲಿನ ನೆತ್ತಿಕಾಂತಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೈಕ್‌ಗೆ ಪೂಜೆ ಸಲ್ಲಿಸಲು 387 ಕಿಲೋಮೀಟರ್ ರೈಡ್ ಮಾಡಿದ್ದಾರೆ.
ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್
ಬೈಕ್ ನಿಲ್ಲಿಸಿ ರವಿಚಂದ್ರ ದೇವಸ್ಥಾನದ ಒಳ ಪ್ರವೇಶಿಸಿದ್ದಾರೆ. ಅಷ್ಟರಲ್ಲೇ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದೇವಸ್ಥಾನಕ್ಕೆ ಬಂದಿದ್ದ ಮಂದಿ ಹಾಗೂ ಸ್ಥಳದಲ್ಲಿದ್ದ ಹವವರು ದೂರ ಸರಿದಿದ್ದಾರೆ. ಇನ್ನೂ ಕೆಲವರು ವಿಡಿಯೋ ಮಾಡಲು ಆರಂಭಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಮರುಕ್ಷಣದಲ್ಲೇ ಧಗಧಗನೇ ಉರಿಯಲು ಆರಂಭಿಸಿದೆ. ಇಷ್ಟೇ ಅಲ್ಲ ಬಾಂಬ್ ರೀತಿಯಲ್ಲಿ ಬೈಕ್ ಸ್ಫೋಟಗೊಂಡಿದೆ.
ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ. ದಿಢೀರ್ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಳ್ಳಲು ಕಾರಣವೇನು ಅನ್ನೋದು ತಿಳಿದಿಲ್ಲ. ಆದರೆ ರಾಯಲ್ ಎನ್‌ಫೀಲ್ಡ್ ಬೈಕ್ ಬೆಂಕಿ ಕಾಣಿಸಿಕೊಂಡಿರುವು ಘಟನೆ ತೀರಾ ವಿರಳವಾಗಿದೆ.
ಇತ್ತೀಚೆಗೆ ಹಲವು ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನ ನಡೆದಿದೆ. ಹೈದರಾಬಾದ್, ಚೆನ್ನೈ ಪುಣೆ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇನ್ನು ತಮಿಳುನಾಡಿನಲ್ಲಿ ಚಾರ್ಜ್‌ಗೆ ಇಟ್ಟಿದ ಸ್ಕೂಟರ್ ಸ್ಫೋಟಗೊಂಡು ತಂದೆ ಮಗಳು ಸಾವನ್ನಪ್ಪಿದ ಘಟನಯೂ ನಡೆದಿದೆ. ಮನೆಯಲ್ಲಿ ಸ್ಕೂಟರ್ ಚಾಜ್‌ರ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಮೃತರನ್ನು ದುರೈ ವರ್ಮಾ (49) ಮತ್ತು ಪುತ್ರಿ ಮೋಹನಾ ಪ್ರೀತಿ (13) ಎಂದು ಗುರುತಿಸಲಾಗಿದೆ. ದುರೈ ವರ್ಮಾ 2 ದಿನಗಳ ಹಿಂದೆ ಸ್ಕೂಟರ್ ಖರೀದಿ ಮಾಡಿದ್ದರು. ಶುಕ್ರವಾರ ಬ್ಯಾಟರಿಯಲ್ಲಿ ಚಾಜ್‌ರ್ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆಯಲ್ಲೇ ಚಾರ್ಜಿಗೆ ಹಾಕಿದ್ದರು. ಈ ವೇಳೆ ಬೈಕ್ ಸ್ಫೋಟಗೊಂಡ ಅದರ ಬೆಂಕಿ ಮತ್ತೆ ಎರಡು ವಾಹನಗಳಿಗೆ ಆವರಿಸಿದೆ. ಅವಧಿಗಿಂತ ಹೆಚ್ಚು ಕಾಲ ಚಾಜ್‌ರ್ ಮಾಡಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Electric Vehicle Fire ಎಲೆಕ್ಟ್ರಿಕ್ ವಾಹನಗಳ ಶೋ ರೂಂನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ, ಹೆಚ್ಚಾಯ್ತು ಆತಂಕ!
ಹೈದರಾಬಾದ್‌ನ ಸ್ಟಾರ್ಟಪ್ ಕಂಪನಿ ಪ್ಯೂರ್ ತಯಾರಿಸಿದ ಎಲೆಕ್ಟ್ರಾನಿಕ್ ವಾಹನಕ್ಕೆ ಬೆಂಕಿ ತಗುಲಿದ ಘಟನೆ ತಮಿಳುನಾಡಿನ ಚೆನ್ನೈಯಲ್ಲಿ ವರದಿಯಾಗಿತ್ತು. ಕೆಲ ದಿನಗಳ ಹಿಂದೇ ಓಲಾ ಹಾಗೂ ಒಕಿನಾವಾ ಆಟೋಟೆಕ್ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ತಗುಲಿದ ಘಟನೆ ವರದಿಯಾದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇ-ವಾಹನಗಳ ಸುರಕ್ಷತೆಯ ಬಗ್ಗೆ ಶಂಕೆಯನ್ನು ಹುಟ್ಟುಹಾಕಿದೆ.
ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ ತಗುಲಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಾಹನ ಸುರಕ್ಷತಾ ಮಾನದಂಡಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಓಲಾ ಕಂಪನಿಯ ಸಹ ಸಂಸ್ಥಾಪಕ ಭವೀಶ್ ಅರ್ಗವಾಲ್ ‘ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಘಟನೆಗೆ ಸಂಬಂಧಿಸಿದ ಕಾರಣಗಳ ಬಗ್ಗೆ ತನಿಖೆ ನಡೆಸಿ, ಸರಿಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.