ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?
‘WhatsApp Gold’ ಆವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸಂದೇಶಗಳು; ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಿಗಲಿದೆಯಂತೆ ಹೆಚ್ಚಿನ ಫೀಚರ್‌ಗಳು?; ಏನಿದರ ಒಳಗುಟ್ಟು?
ಜನಪ್ರಿಯ ಮೆಸೇಜಿಂಗ್ ಸೇವೆ ವಾಟ್ಸಪ್, WhatsApp Gold ಆವೃತ್ತಿಯನ್ನು ಬಿಡುಗಡೆ ಮಾಡಿದೆ ಎಂಬ ಸಂದೇಶ ನಿಮಗೂ ಬಂದಿರಬಹುದು.
WhatsApp Gold ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ, ಬಳಕೆದಾರರಿಗೆ ವಿಶಿಷ್ಟವಾದ ಫೀಚರ್‌ಗಳು ಲಭ್ಯವಾಗಲಿದೆ ಎಂದು ಆ ಸಂದೇಶದಲ್ಲಿ ತಿಳಿಸಲಾಗಿರಬಹುದು.
ಬಳಕೆದಾರರು ಒಂದೇ ಬಾರಿ 100 ಮಂದಿಗೆ ಪೋಟೋಗಳನ್ನು ಕಳುಹಿಸಬಹುದು, ಹಾಗೂ ಕಳುಹಿಸಿದ ಸಂದೇಶಗಳನ್ನು ಯಾವಾಗಲೂ ಬೇಕಾದರೂ ಡಿಲೀಟ್ ಮಾಡಬಹುದು ಎಂಬಿತ್ಯಾದಿ ವಿಷಯಗಳನ್ನು ಪಟ್ಟಿಮಾಡಲಾಗಿರಬಹುದು....
ಇದನ್ನೂ ಓದಿ: ಅಮೆರಿಕಾದಲ್ಲಿ ಮಿಂಚುತ್ತಿದ್ದಾನೆ ಮಂಡ್ಯದ ಹುಡುಗ ಸುಹೇಲ್
ಆದರೆ ಬಳಕೆದಾರರೇ... ಎಚ್ಚರ! ಇದೊಂದು ನಕಲಿ ಹಾಗೂ ಆಧಾರರಹಿತ ಮೆಸೇಜ್ ಆಗಿದೆ. ತಾನು ಇಂತಹ ಸೇವೆಯನ್ನು ಪರಿಚಯಿಸಿಲ್ಲವೆಂದು ವಾಟ್ಸಪ್ ಸ್ಪಷ್ಟಪಡಿಸಿದೆ. ಅಂತಹ ಸಂದೇಶಗಳು ಬಳಕೆದಾರರಿಗೆ ಹಾನಿಯನ್ನುಂಟು ಮಾಡಬಲ್ಲುವು. ಇದು ಹ್ಯಾಕರ್ಸ್ ಕೃತ್ಯವೂ ಆಗಿರಬಹುದು. ಆ ನಕಲಿ ಆ್ಯಪನ್ನು ಫೋನಿಗೆ ಇನ್ಸ್ಟಾಲ್ ಮಾಡಿಸುವ ಮೂಲಕ, ನಿಮ್ಮ ಫೋನ್‌ಗೆ ವೈರಸ್ ಹರಡುವ ಸಾಧ್ಯತೆಗಳೂ ಇವೆ, ಅಥವಾ ಫೋನ್‌ನಲ್ಲಿರುವ ಅಮೂಲ್ಯವಾದ/ ವೈಯುಕ್ತಿಕ ಮಾಹಿತಿ ಕಳವಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ
ಇಂತಹ ಸಂದೇಶಗಳು ಹರಿದಾಡುತ್ತಿರುವುದು ಮೊದಲೇನಲ್ಲ. ಒಂದೆರಡು ವರ್ಷಗಳ ಹಿಂದೆಯೂ ‘WhatsApp Gold’ ಬಗ್ಗೆ ವದಂತಿಗಳು ಹರಿದಾಡಿತ್ತು. ಸೆಲೆಬ್ರಿಟಿಗಳಿಗಾಗಿ ಇರುವ ಈ ಪ್ರೀಮಿಯಂ ವರ್ಶನ್ ಜನಸಾಮಾನ್ಯರಿಗೂ ಲಭ್ಯವಿದೆ ಎಂದು ಬಳಕೆದಾರರನ್ನು ಯಾಮಾರಿಸಲಾಗಿತ್ತು.
ಆದುದರಿಂದ, ಇಂತಹ ಮೇಸೇಜ್‌ಗಳು ಬಂದರೆ ಕಿವಿಗೊಡಬೇಡಿ, ಹಾಗೂ ಇತತರಿಗೂ ಫಾರ್ವರ್ಡ್ ಮಾಡಲೂಬೇಡಿ. ಎಚ್ಚರವಾಗಿರಿ.