ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ
- ಆ್ಯಪ್, ವೆಬ್‌ಸೈಟ್‌ಗಳ ಕಡಿವಾಣಕ್ಕೆ ಐಟಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ
- ಸುಳ್ಳು ಸುದ್ದಿ, ಮಕ್ಕಳ ಅಶ್ಲೀಲತೆ ತೋರಿಸಿದರೆ ವೆಬ್‌ಸೈಟ್‌ಗಳು ಬಂದ್
ನವದೆಹಲಿ: ಸುಳ್ಳು ಸುದ್ದಿಗಳು ಹಾಗೂ ಮಕ್ಕಳನ್ನು ಬಳಸಿ ಸಿದ್ಧಪಡಿಸಿದ ಅಶ್ಲೀಲ ದೃಶ್ಯಗಳನ್ನು ನಿಯಂತ್ರಿಸಲು ವಿಫಲವಾಗುವ ಮೊಬೈಲ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವ ಮತ್ತು ಅವುಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ಸಂಬಂಧ ಐಟಿ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಇದನ್ನೂ ಓದಿ: ALERT ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!
ಉನ್ನತ ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲ ಕಂಪನಿಗಳ ಪ್ರತಿನಿಧಿಗಳ ಜೊತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಕಾನೂನು ಬಾಹಿರ ಅಂಶಗಳಿಗೆ ಕಡಿವಾಣ ಹಾಕುವ ಸಂಬಂಧ ನಿಯಮವೊಂದನ್ನು ರೂಪಿಸಲು ಸಲಹೆಗಳನ್ನು ಕೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದೆ.
ಇದನ್ನೂ ಓದಿ: ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ
ತಿದ್ದುಪಡಿ ಮಸೂದೆಯಿಂದ ಜನಪ್ರಿಯ ಅಂತರ್ಜಾಲ ಸೇವೆಗಳಾದ ವಾಟ್ಸಾಪ್, ಫೇಸ್‌ಬುಕ್, ಗೂಗಲ್, ಟ್ವೀಟರ್, ಟೆಲಿಗ್ರಾಮ್ ಮತ್ತು ಯುಸಿವೆಬ್‌ಗಳ ಕಾರ್ಯನಿರ್ವಹಣೆಯ ಮೇಳೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ಅಂತಿಮಗೊಳಿಸಿರುವ ದತ್ತಾಂಶ ರಕ್ಷಣೆ ಮಸೂದೆಯಲ್ಲಿ ನಿಯಮ ಉಲ್ಲಂಘಿಸುವ ಕಂಪನಿಗಳಿಗೆ ಗರಿಷ್ಠ 15 ಕೋಟಿ ರು. ಅಥವಾ ಜಾಗತಿಕ ವಹಿವಾಟಿನ ಶೇ.4ರಷ್ಟುತೆರಿಗೆ ವಿಧಿಸುವ ಪ್ರಸ್ತಾವನೆ ಇದೆ.