ಇದು ಚೌಕ, ಅಲ್ಲಲ್ಲ ಗೋಳ: ಶುರುವಾಗಿದೆ ‘ವಿಶ್ವ’ಕ್ಕಾಗಿ ಜಗಳ!
ವಿಶ್ವದ ಆಕಾರದ ಕುರಿತು ಹೊಸ ಸಿದ್ಧಾಂತ ಮುಂದಿಟ್ಟ ಖಗೋಳಶಾಸ್ತ್ರಜ್ಞರು/ ವಿಶ್ವದ ಆಕಾರ ಮುಚ್ಚಿದ ಗೋಳದಂತಿದೆ ಎಂದ ಸಂಶೋಧಕರು/ ಕಾಸ್ಮಾಲಾಜಿಕಲ್ ಮಾದರಿಗಳ ಅಧ್ಯಯನದಿಂದಾಗಿ ವಿಶ್ವದ ಆಕಾರ ಗುರುತು/ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ಲ್ಯಾಂಕ್ ಸ್ಯಾಟಲೈಟ್ / ಪೋಟಾನ್‌ಗಳ ಕಿರಣ ಚಲನೆ ಪ್ರಾರಂಭಿಸಿದ ಸ್ಥಳಕ್ಕೆ ಮರಳಿ ಬರುವ ಸನ್ನಿವೇಶ/ ಕಾಸ್ಮಾಲಾಜಿಕಲ್ ಕಾನ್ಕಾರ್ಡೆನ್ಸ್ ಮಾದರಿಯ ಪರಾಮರ್ಶೆಗೆ ಖಗೋಳಶಾಸ್ತ್ರಜ್ಞರ ಒತ್ತಾಯ
ಲಂಡನ್(ನ.05): ನಮ್ಮ ಆಕಾಶ ಗಂಗೆ ನಕ್ಷತ್ರಪುಂಜದ ಆಕಾರದ ಕುರಿತು ಜಿಜ್ಞಾಸೆಯಲ್ಲಿರುವ ಖಗೋಳಶಾಸ್ತ್ರಜ್ಞರು, ಇದೀಗ ವಿಶ್ವದ ಆಕಾರದ ಕುರಿತು ಯೋಚಿಸಿ ತಲೆಕೆಡಸಿಕೊಳ್ಳುತ್ತಿದ್ದಾರೆ.
ಹೌದು, ವಿಶ್ವದ ಆಕಾರ ಬಹುತೇಕ ಚೌಕಾಕಾರವಾಗಿದೆ ಎಂದೇ ಖಗೋಳಶಾಸ್ತ್ರಜ್ಞರ ನಂಬಿಕೆಯಾಗಿತ್ತು. ಆದರೆ ಹೊಸ ಅಧ್ಯಯನದಿಂದಾಗಿ ವಿಶ್ವ ಮುಚ್ಚಿದ ಗೋಳಾಕಾರದಲ್ಲಿದೆ ಎಂಬ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಲಾಗಿದೆ.
ವಾಯೇಜರ್-2 ಸಾಧನೆ: ಅಂತರತಾರಾ ವಲಯದಿಂದ ಸಂದೇಶ ರವಾನೆ!
ವರ್ಷಗಳ ಕಾಲ ನಡೆಸಿದ ದತ್ತಾಂಶ ಅವಲೋಕನ, ಕಾಸ್ಮಾಲಾಜಿಕಲ್ ಮಾದರಿಗಳ ಅಧ್ಯಯನದ ಪರಿಣಾಮವಾಗಿ, ವಿಶ್ವ ಮುಚ್ಚಿದ ಗೋಳದ ಆಕಾರದಲ್ಲಿದೆ ಎಂದು ಅಂದಾಜಿಸಲಾಗಿದೆ.
ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ಲ್ಯಾಂಕ್ ಸ್ಯಾಟಲೈಟ್ ಮಾಹಿತಿ ಪ್ರಕಾರ, ಪೋಟಾನ್‌ಗಳ ಕಿರಣ ಚಲನೆ ಪ್ರಾರಂಭಿಸಿದ ಸ್ಥಳಕ್ಕೆ ಮರಳಿ ಬರುತ್ತದೆ. ಇದರಿಂದ ಇಡೀ ವಿಶ್ವ ಗೋಳಾಕಾರದಲ್ಲಿರುವುದು ಸ್ಪಷ್ಟ ಅಂತಾರೆ ಸಂಶೋಧಕರು.
ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?
ಪ್ಯಾಟ್ ಯೂನಿವರ್ಸ್ ಸಿದ್ಧಾಂತದನ್ವಯ ಪೋಟಾನ್ ಕಿರಣಗಳು, ಸಮಾನಾಂತರವಾಗಿ ಉಳಿಯುವ ಇತರ ಕಿರಣಗಳ ಮೇಲೆ ದಾಟುತ್ತದೆ. ಆದರೆ ಚಲನೆ ಪ್ರಾರಂಭಿಸಿದ ಸ್ಥಳಕ್ಕೆ ಮರಳಿ ಬರುವುದು ಖಚತಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಕುರಿತು ಸಂಶೋಧನೆ ನಡೆಸಿರುವ ಇಂಗ್ಲೆಂಡ್’ನ ಮ್ಯಾಂಚೆಸ್ಟರ್ ವಿವಿ ಯ ಎಲಿಯೊನೊರಾ ಡಿ ವ್ಯಾಲೆಂಟಿನೊ ನೇತೃತ್ವದ ಖಗೋಳಶಾಸ್ತ್ರಜ್ಞರ ತಂಡ, ಕಾಸ್ಮಾಲಾಜಿಕಲ್ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಸ್ಮಾಲಾಜಿಕಲ್ ಕಾನ್ಕಾರ್ಡೆನ್ಸ್ ಮಾದರಿಯ ಕುರಿತು ಪರಾಮರ್ಶೆ ನಡೆಸಬೇಕಿದೆ ಎಂದ ಹೇಳಿದೆ.
ಸೂರ್ಯನ ಸುತ್ತುವ ಬುಧ ನೋಡಿ: ಹಿಂಗಿದೆ ದೈತ್ಯನ ಮುಂದೆ ಕುಬ್ಜನ ಮೋಡಿ!