ವಾಷಿಂಗ್ಟನ್(ಅ.21): ನಮ್ಮ ಸೌರಮಂಡಲದ ಅತ್ಯಂತ ಚಿಕ್ಕ ಹಾಗೂ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಬುಧ ಗ್ರಹದ ಕುರಿತು ಮಾನವನ ತಿಳುವಳಿಕೆ ಕಡಿಮೆ. ಇದಕ್ಕೆ ಕಾರಣ ಈ ಪುಟ್ಟ ಗ್ರಹದ ಕುರಿತು ಮಾನವನಿಗೆ ಅಷ್ಟೇನೂ ಕುತೂಹಲ ಇಲ್ಲದಿರುವುದು.

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಆದರೆ ಗಾತ್ರದಲ್ಲಿ ಚಿಕ್ಕದಾದರೂ ದೈತ್ಯ ಭಾಸ್ಕರನನ್ನು ಅತ್ಯಂತ ನಿರ್ಭಿಡೆಯಿಂದ ಎದುರು ಹಾಕಿಕೊಂಡಿರುವ ಬುಧ ಗ್ರಹ, ಸೂರ್ಯನನ್ನು ಒಂದು ಸುತ್ತು ಸುತ್ತಲು ಕೇವಲ 87.97 ದಿನಗಳನ್ನು ತೆಗೆದುಕೊಳ್ಳುತ್ತದೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ರೋಮನ್ನರ ದೇವತೆ ಮರ್ಕ್ಯೂರಿ (ದೇವರ ಸಂದೇಶವಾಹಕ)ಹೆಸರಲ್ಲಿ ಖ್ಯಾತವಾಗಿರುವ ಬುಧ ಗ್ರಹ, ಸೂರ್ಯನಿಂದ ಕೇವಲ 57.91 ಮಿಲಿಯನ್ ಕಿ.ಮೀ ದೂರದಲ್ಲಿದೆ.

ಇನ್ನು ಬುಧ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಈ ಗ್ರಹ ಸೂರ್ಯನನ್ನು ಸುತ್ತುವ ಸಮಯ ಮತ್ತು ವಿಧಾನವನ್ನು ಸೆರೆ ಹಿಡಿದಿದೆ.

ಬುಧ ಗ್ರಹಕ್ಕೆ ಜಪಾನ್ ನೌಕೆ: ಸುಡುವ ಗ್ರಹದತ್ತ ಚಿತ್ತ ಯಾಕೆ?

ನಾಸಾದ ಸೋಲಾರ್ ಡೈನಾಮಿಕ್ ಆಬ್ಸರ್ವೇಟರಿ ಮೂಲಕ ಸೂರ್ಯನನ್ನು ಸುತ್ತುತ್ತಿರುವ ಬುಧ ಗ್ರಹದ ಚಲನೆಯನ್ನು ಸೆರೆ ಹಿಡಿಯಲಾಗಿದೆ. ವೀಕ್ಷಣಾಲಯದ ಅಲ್ಟ್ರಾವೈಲೆಟ್ ಲೈಟ್'ಗಳ ಮೂಲಕ ವಿವಿಧ ಸಮಯದಲ್ಲಿ ಸೂರ್ಯನನ್ನು ಪರಿಭ್ರಮಿಸುತ್ತಿರುವ  ಬುಧ ಗ್ರಹದ ಅವಧಿಯನ್ನು ಸೆರೆ ಹಿಡಿಯಲಾಗಿದೆ.