Asianet Suvarna News Asianet Suvarna News

ಇನ್ಮುಂದೆ ನೆಟ್‌ಫ್ಲಿಕ್ಸ್‌ನಲ್ಲೂ ಜಾಹೀರಾತು? ವರ್ಷದ ಅಂತ್ಯದ ವೇಳೆಗೆ ಹೊಸ ಯೋಜನೆ ಲಾಂಚ್?

ನೆಟ್‌ಫ್ಲಿಕ್ಸ್ ಈ ವರ್ಷದ ಆರಂಭದಲ್ಲಿ ಒಂದು ದಶಕದಲ್ಲೇ ಅತಿ ಹೆಚ್ಚು ಚಂದಾದಾರರ ನಷ್ಟವನ್ನು ವರದಿ ಮಾಡಿದೆ. ಆದರೆ ಕಂಪನಿಯು ಈ ವರ್ಷದ ನಂತರ ಇನ್ನೂ ಹೆಚ್ಚಿನ ಚಂದಾದಾರರು ಕಳೆದುಕೊಳ್ಳುವ ನಿರೀಕ್ಷೆಯಿದೆ

Netflix may announce advertisement supported plans by the end of 2022 says Report mnj
Author
Bengaluru, First Published May 15, 2022, 5:44 PM IST

Netflix ad-supported plans: ನೆಟ್‌ಫ್ಲಿಕ್ಸ್ ಈ ವರ್ಷದ ಆರಂಭದಲ್ಲಿ ಒಂದು ದಶಕದಲ್ಲೇ ಅತಿ ಹೆಚ್ಚು ಚಂದಾದಾರರ ನಷ್ಟವನ್ನು ವರದಿ ಮಾಡಿದೆ. ಆದರೆ ಕಂಪನಿಯು ಈ ವರ್ಷದ ನಂತರ ಇನ್ನೂ ಹೆಚ್ಚಿನ ಚಂದಾದಾರರು ಕಳೆದುಕೊಳ್ಳುವ ನಿರೀಕ್ಷೆಯಿದೆ. ಚಂದಾದಾರರ ಕುಸಿತವನ್ನು ಎದುರಿಸಲು, ನೆಟ್‌ಫ್ಲಿಕ್ಸ್ ಸೇವೆಗೆ ಜಾಹೀರಾತು-ಬೆಂಬಲಿತ ಯೋಜನೆಗಳ ಶ್ರೇಣಿಯನ್ನು ಘೋಷಿಸುವ ನಿರೀಕ್ಷೆಯಿದೆ.

XDA Developers ಹೊಸ ವರದಿಯು ಸ್ಟ್ರೀಮಿಂಗ್ ಸೇವೆ ನೀಡುವ ನೆಟ್‌ಫ್ಲಿಕ್ಸ್ ವರ್ಷದ ಅಂತ್ಯದ ವೇಳೆಗೆ ತನ್ನ ಮೊದಲ ಜಾಹೀರಾತು-ಬೆಂಬಲಿತ ಯೋಜನೆಗಳನ್ನು ಘೋಷಿಸಬಹುದು ಎಂದು ತಿಳಿಸಿದೆ. 2022ರ ಅಂತಿಮ ಮೂರು ತಿಂಗಳುಗಳು ಹೊಸ ಜಾಹೀರಾತು-ಬೆಂಬಲಿತ ಯೋಜನೆಗಳನ್ನು ಘೋಷಿಸುವುದು ನೆಟ್‌ಫ್ಲಿಕ್ಸ್‌ನ ಗುರಿಯಾಗಿದೆ.

ವರ್ಷಾಂತ್ಯದಲ್ಲಿ ಪ್ರಪಂಚದ ಅನೇಕ ಪ್ರದೇಶಗಳಲ್ಲಿ ರಜಾದಿನವಾಗಿರುತ್ತದೆ, ಹೀಗಾಗಿ ಇದು ಹೊಸ ಯೋಜನೆಗಳನ್ನು ಪರಿಚಯಿಸಲು ಉತ್ತಮ ಸಮಯವಾಗಿದೆ ಎಂದು ವರದಿಯು ಉಲ್ಲೇಖಿಸುತ್ತದೆ ಏಕೆಂದರೆ ಇದು ಪ್ರತಿ ವರ್ಷ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಸಮಯವಾಗಿದೆ.

ಇದನ್ನೂ ಓದಿIndian Streaming ಉದ್ಯಮ ಮುಂದಿನ 10 ವರ್ಷದಲ್ಲಿ $13-15 ಶತಕೋಟಿ ಬೆಳೆವಣಿಗೆ ನಿರೀಕ್ಷೆ!

ಕಳೆದ ಕೆಲವು  ವರ್ಷಗಳಲ್ಲಿ, ನೆಟ್‌ಫ್ಲಿಕ್ಸ್ ಪ್ರತಿಸ್ಪರ್ಧಿಗಳು ಜಾಹೀರಾತು-ಬೆಂಬಲಿತ ಯೋಜನೆಗಳನ್ನು ನೀಡುತ್ತದ್ದಾರೆ, ಆದರೆ ನೆಟ್‌ಫ್ಲಿಕ್ಸ್ ತನ್ನ ಜಾಹೀರಾತುಗಳಿಲ್ಲದ ಮಂತ್ರಕ್ಕೆ ಅಂಟಿಕೊಂಡಿತ್ತು, ಬದಲಿಗೆ ಯುಎಸ್‌ನಂತಹ ಪ್ರದೇಶಗಳಲ್ಲಿ ಬೆಲೆ ಹೆಚ್ಚಳದಂತಹ ಕ್ರಮಗಳನ್ನು ಕೈಗೊಂಡಿತ್ತು. . ಇತ್ತೀಚಿನ ಹೆಚ್ಚಳವು ಮಾರ್ಚ್ 2022 ರಲ್ಲಿ ಮಾಡಲಾಗಿತ್ತು, ಮೂಲ ಬೆಲೆಯನ್ನು $9.99 ಗೆ ಮರುಹೊಂದಿಸಲಾಗಿದ್ದು ಮತ್ತು ಪ್ರೀಮಿಯಂ ಯೋಜನೆಯನ್ನು ತಿಂಗಳಿಗೆ $19.99ಕ್ಕೆ ಏರಿಸಲಾಗಿದೆ. 

ಈ ಹಂತದಲ್ಲಿ ಜಾಹೀರಾತುಗಳು ವೇದಿಕೆಗೆ ಸಹಾಯ ಮಾಡುತ್ತವೆಯೇ ಎಂದು ಕಾದು ನೋಡಬೇಕಾಗಿದೆ. ನೆಟ್‌ಫ್ಲಿಕ್ಸ್ ಈಗಾಗಲೇ ಖಾತೆ ಮತ್ತು ಪಾಸವರ್ಡ್ ಹಂಚಿಕೆಯು ಚಂದಾದಾರರ ಕುಸಿತಕ್ಕೆ ಒಂದು ದೊಡ್ಡ ಕಾರಣವಾಗಿದೆ ಎಂದು ಸೂಚಿಸಿದೆ ಮತ್ತು ಪ್ಲಾಟ್‌ಫಾರ್ಮ್ ಖಾತೆ ಹಂಚಿಕೆಗೂ ಶುಲ್ಕ ವಿಧಿಸುವ ನಿರೀಕ್ಷೆಯಿದೆ.

ನೆಟ್‌ಫ್ಲಿಕ್ಸ್ ಈಗಾಗಲೇ ದಕ್ಷಿಣ ಅಮೆರಿಕಾದ ದೇಶಗಳಾದ ಪೆರು, ಕೋಸ್ಟರಿಕಾ ಮತ್ತು ಚಿಲಿಯ ಬಳಕೆದಾರರಿಗೆ ಮನೆಯ ಹೊರಗೆ ಎರಡು ಹೆಚ್ಚುವರಿ ಬಳಕೆದಾರರನ್ನು ಸೇರಿಸಲು ಹೆಚ್ಚುವರಿ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. 

ನೆಟ್‌ಫ್ಲಿಕ್ಸ್ ಚಂದಾದಾರರಲ್ಲಿ ಕುಸಿತ: ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧ ಯುದ್ಧ ಮತ್ತು ತೀವ್ರ ಪೈಪೋಟಿಯು ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರ ನಷ್ಟಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಕಂಪನಿ ಇನ್ನಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಕೋವಿಡ್‌ ಸಮಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದ ನೆಟ್‌ಫ್ಲಿಕ್ಸ್‌ ಈಗ ಚಂದಾದಾರರನ್ನು ಕಳೆದುಕೊಂಡಿದ್ದು  ಸ್ಟ್ರೀಮಿಂಗ್ ಕಂಪನಿಯಲ್ಲಿ ಹಠಾತ್ ಬದಲಾವಣೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತೀಯ ಮಕ್ಕಳು ಆನ್‌ಲೈನ್ ವಂಚನೆ ಬಲಿಯಾಗುವ ಸಾಧ್ಯತೆ ಹೆಚ್ಚು: McAfee 2022 ವರದಿ

ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ಏರಿಕೆಯಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕಂಪನಿಯು ತನ್ನ ಚಂದಾದಾರಿಕೆ ವ್ಯವಹಾರದ ಏರಿಳಿತಗಳನ್ನು ಅರ್ಥೈಸಿಕೊಳ್ಳಲು ವಿಫಲವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರತಿಸ್ಪರ್ಧಿಗಳ ಬೆಳವಣಿಗೆ  ಮತ್ತು ಬಳಕೆದಾರರು ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಖಾತೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಬೆಳೆಯಲು ಕಷ್ಟವಾಗುವಂತೆ ತೋರುತ್ತಿದೆ. 

Follow Us:
Download App:
  • android
  • ios