Asianet Suvarna News Asianet Suvarna News

Indian Streaming ಉದ್ಯಮ ಮುಂದಿನ 10 ವರ್ಷದಲ್ಲಿ $13-15 ಶತಕೋಟಿ ಬೆಳೆವಣಿಗೆ ನಿರೀಕ್ಷೆ!

ಮಾಧ್ಯಮ ಮತ್ತು ಮನರಂಜನೆಯ ಮಾರುಕಟ್ಟೆಯ ಜಂಟಿ ವರದಿಯ ಪ್ರಕಾರ, ಭಾರತೀಯ ಓಟಿಟಿ ಸ್ಟ್ರೀಮಿಂಗ್ ಉದ್ಯಮವು (OTT Streaming) ಮುಂದಿನ ದಶಕದಲ್ಲಿ ವಾರ್ಷಿಕ 22-25 ಶೇಕಡಾ ಹಾಗೂ USD 13-15 ಶತಕೋಟಿ ಬೆಳೆವಣಿಗೆಯ ನಿರೀಕ್ಷೆಯಿದೆ. 

Indian streaming industry expected to grow USD 13 15 billion over the next decade mnj
Author
Bengaluru, First Published Jan 3, 2022, 9:56 PM IST
  • Facebook
  • Twitter
  • Whatsapp

Tech Desk: ಮಾಧ್ಯಮ ಮತ್ತು ಮನರಂಜನೆಯ ಮಾರುಕಟ್ಟೆಯ ಜಂಟಿ ವರದಿಯ ಪ್ರಕಾರ, ಭಾರತೀಯ ಓಟಿಟಿ ಸ್ಟ್ರೀಮಿಂಗ್ ಉದ್ಯಮವು (OTT Streaming) ಮುಂದಿನ ದಶಕದಲ್ಲಿ ವಾರ್ಷಿಕ 22-25 ಶೇಕಡಾ ಹಾಗೂ USD 13-15 ಶತಕೋಟಿ ಬೆಳೆವಣಿಗೆಯ ನಿರೀಕ್ಷೆಯಿದೆ. ಓಟಿಟಿ (ಓವರ್-ದಿ-ಟಾಪ್) ಉದ್ಯಮವು ನಿರಂತರವಾಗಿ ಬೆಳೆಯುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಮತ್ತು ಎಲ್ಲಾ ರೀತಿಯ ಕಂಟೆಂಟ್‌ಗಳನ್ನು ನೀಡುವ  40ಕ್ಕೂ ಹೆಚ್ಚು ಕಂಪನಿಗಳೊಂದಿ ಮಾರುಕಟ್ಟೆಗಳಲ್ಲಿ ಪೈಫೋಟಿ ನಡೆಸುತ್ತಿವೆ ಎಂದು  CII ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ವರದಿ ಹೇಳಿದೆ.

ಕೈಗೆಟಕುವ ದರದ ಹೈ-ಸ್ಪೀಡ್ ಮೊಬೈಲ್ ಇಂಟರ್ನೆಟ್, ಕಳೆದ ಆರು ವರ್ಷಗಳಲ್ಲಿ ಇಂಟರ್ನೆಟ್ ಬಳಕೆದಾರರನ್ನು ದ್ವಿಗುಣಗೊಳಿಸುವುದು, ಡಿಜಿಟಲ್ ಪಾವತಿಗಳ  ಸಂಖ್ಯೆಯಲ್ಲಿ ಗಣನೀಯ ಏರಿಕೆ ಸೇರಿದಂತೆ ಹಲವು ವಿಷಯಗಳು ಓಟಿಟಿ  ಹಾಗೂ  ಡಿಜಿಟಲ್ ವೀಡಿಯೊ ಸ್ಟ್ರೀಮಿಂಗ್‌ಗಾಗಿ ಬೆಳವಣಿಗೆಗೆ  ಕಾರಣವಾಗಿವೆ.

ಯುಎಸ್‌ಗಿಂತ ಭಾರತದಲ್ಲಿ ಅಗ್ಗದ ಯೋಜನೆಗಳು!

ಇದಲ್ಲದೆ, ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ, ಡಿಸ್ನಿ + ನಂತಹ ಜಾಗತಿಕ ಸ್ಟ್ರೀಮಿಂಗ್‌ ಫ್ಲಾಟ್‌ಫಾರ್ಮ್ಸ್  ಭಾರತದಲ್ಲಿ ಯುಎಸ್‌ ಗಿಂತ 70-90 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಯೋಜನೆಗಳನ್ನು ನೀಡುತ್ತವೆ. ಜತೆಗೆ ಇತ್ತೀಚೆಗೆ ಭಾರತದಲ್ಲೆ ನಿರ್ಮಾಣವಾಗುವ ಒರಿಗಿನಲ್ ಕಂಟೆಂಟ್‌ ಹೂಡಿಕೆಯಲ್ಲಿ ಹೆಚ್ಚಳವನ್ನು ಸಹ ನಾವು ನೋಡಬಹುದು. ಹೀಗಾಗಿ  ಬಳಕೆದಾರರಿಗೆ ಲಭ್ಯವಿರುವ ಒರಿಗಿನಲ್‌ ಕಂಟೆಂಟ್ ‌ಓಟಿಟಿ ಬಳಕೆಯ ಬೆಳವಣಿಗೆಗೆ ಕಾರಣವಾಗಿದೆ. 

ಇದನ್ನೂ ಓದಿ: Round Up 2021: ಒಳ್ಳೇ ಕ್ಲೈಮ್ಯಾಕ್ಸು, ಆರ್ಡಿನರಿ ಓಪನಿಂಗ್‌, ಸೂಪರ್‌ ಸೆಕೆಂಡ್‌ ಹಾಫ್‌!

"ಭಾರತದಲ್ಲಿ ನಿರ್ಮಾಣವಾಗುವ ಕಂಟೆಂಟ್‌ ಅಂತಾರಾಷ್ಟ್ರೀಯ ಬಳಕೆದಾರರನ್ನು ಸೆಳೆಯುತ್ತಿದೆ" ಎಂದು ವರದಿ ಹೇಳಿದೆ. ಕಳೆದ ಕೆಲವು ವರ್ಷಗಳಿಂದ SVOD (ಸಬ್‌ಸ್ಕ್ರಿಪ್ಶನ್ ವೀಡಿಯೊ ಆನ್ ಡಿಮ್ಯಾಂಡ್) ವಿಷಯದ ಮೇಲೆ ಗಮನಾರ್ಹವಾದ ಏರಿಕೆ ಕಂಡುಬಂದಿದೆ ಮತ್ತು AVOD (ಜಾಹೀರಾತು ಆಧಾರಿತ ವೀಡಿಯೊ ಆನ್ ಡಿಮ್ಯಾಂಡ್) ಅನ್ನು ಹಿಂದಿಕ್ಕುವ ನಿರೀಕ್ಷೆಯಿದೆ.

30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಜಾಸ್ತಿ!

" ಉದ್ಯಮದಲ್ಲಿ ಬೆಲೆ ನಾವೀನ್ಯತೆಗಳ ಮೂಲಕ ಬಳಕೆದಾರರ ನೆಲೆಯನ್ನು ವಿಸ್ತರಿಸಲು ತೆಗೆದುಕೊಂಡ ವಿವಿಧ ಉಪಕ್ರಮಗಳಿಂದಾಗಿ ಹಾಗೂ ಹೊಸ ಕಂಟೆಂಟ್‌ನಲ್ಲಿ ಗಮನಾರ್ಹ ಹೂಡಿಕೆಯಿಂದ ಚಂದಾದಾರಿಕೆಯಲ್ಲಿನ ಈ ಬಲವಾದ ಬೆಳವಣಿಗೆಯಾಗಿದೆ" ಎಂದು  "Blockbuster Script for the New Decade: Way Forward for Indian Media and Entertainment Industry" ವರದಿ ಹೇಳಿದೆ.

ಇದನ್ನೂ ಓದಿ: Netflix New Price: ಮನೋರಂಜನೆ ನಿಮ್ಮ ಕೈಯಲ್ಲಿ, ಬರೀ ₹149!

Netflix, Amazon Prime Video, SonyLIV, Alt Balaji, Zee5, Eros Now ಮತ್ತು Disney Hotstar Plus ಭಾರತೀಯ ಒಟಿಟಿ ಉದ್ಯಮದಲ್ಲಿನ ಪ್ರಮುಖ ಆಟಗಾರರಾಗಿದ್ದಾರೆ.  50-55 ಪ್ರತಿಶತದಷ್ಟು ಓಟಿಟಿ ಬಳಕೆದಾರರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದೂ, ಯುವಜನತೆಯ ಪ್ರಾಬಲ್ಯ ಸ್ಟ್ರೀಮಿಂಗ್‌ ಬೆಳವಣಿಗೆಗೆ ಹೆಚ್ಚು ಸಹಾಯಕವಾಗಿದೆ ಎಂದು ವರದಿ ಹೇಳಿದೆ.

ಪ್ರಾದೇಶಿಕ ಬೇಡಿಕೆಯನ್ನು ಪೂರೈಸುತ್ತಿರುವ ಓಟಿಟಿ!

"Short-form video 150% + ವಾರ್ಷಿಕ ಬೆಳವಣಿಗೆ ಕಂಡಿದ್ದು, ಟಿಕ್‌ಟಾಕ್ ನಿಷೇಧದ ನಂತರ ಭಾರತೀಯ ಶಾರ್ಟ್‌ ವೀಡಿಯೊ ಪ್ಲೇಯರ್‌ಗಳಿಂದ ಇದು ಸಾಧ್ಯವಾಗಿದೆ" ಎಂದು ವರದಿ ಹೇಳಿದೆ. ಈಗ ಓಟಿಟಿ ಕಂಪನಿಗಳು ಯಾರೂ ಹೆಚ್ಚು ಗಮನಹರಿಸಿದ ಪ್ರಾದೇಶಿಕ ಬೇಡಿಕೆಯನ್ನು ಪೂರೈಸಲು  ಕಂಟೆಂಟ್‌ಗಳನ್ನು ರಚಿಸುತ್ತಿದ್ದಾರೆ"

"ಭಾರತೀಯ ಜನಸಂಖ್ಯೆಯ ಸುಮಾರು 56 ಪ್ರತಿಶತದಷ್ಟು ಜನರು ಪ್ರಾದೇಶಿಕ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿದ್ದಾರೆ, ಇದು EU ನ ಜನಸಂಖ್ಯೆಗಿಂತ ದೊಡ್ಡದಾಗಿದೆ ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು  ಪುನಶ್ಚೇತನಗೊಂಡಿದೆ ಮತ್ತು 2030 ರ ವೇಳೆಗೆ 10 ರಿಂದ 12 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ USD 55-70 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ.  OTT, ಗೇಮಿಂಗ್, ಆನಿಮೇಷನ್ ಮತ್ತು VFX ನಲ್ಲಿನ ಗಣನೀಯ ಬೆಳವಣಿಗೆಯೇ ಇದಕ್ಕೆ ಕಾರಣವಾಗಿದೆ" ಎಂದು ವರದಿ ಹೇಳಿದೆ.

Follow Us:
Download App:
  • android
  • ios