Asianet Suvarna News Asianet Suvarna News

ನೆಟ್‌ಫ್ಲಿಕ್ಸ್‌ ಗ್ರಾಹಕರಿಗೆ Oneplus 7 ಭರ್ಜರಿ ಆಫರ್‌

Netflix ಮಾರುಕಟ್ಟೆಗೆ ಬಂದು ಮೂರು ವರ್ಷಗಳಾಗುತ್ತಿದ್ದಂತೆ, ಅದು ವ್ಯಾಪಕವಾದ ಮಾರುಕಟ್ಟೆಯನ್ನು ಹೊಂದುವ ಯೋಚನೆ ಮಾಡುತ್ತಿದೆ. ಭಾರತೀಯನ ಆದ್ಯತೆ ಕ್ರಿಕೆಟ್‌ ಮತ್ತು ಮನರಂಜನೆ ಎಂಬುದನ್ನು ಅರ್ಥಮಾಡಿಕೊಂಡಿರುವ ಅದು ಪ್ರೇಕ್ಷಕರ ಅಗತ್ಯಕ್ಕೆ ತಕ್ಕ ಕಾರ್ಯಕ್ರಮಗಳನ್ನು ನೀಡಲು ಸಜ್ಜಾಗುತ್ತಿದೆ. ಆ ನಿಟ್ಟಿನಲ್ಲಿ Netflix ಕೈಗೊಂಡಿರುವ ಕೆಲವು ಕ್ರಮಗಳು ಹೀಗಿವೆ.

Netflix Launches Offers For Oneplus 7 Customers
Author
Bengaluru, First Published May 16, 2019, 6:11 PM IST

1. Oneplus 7 Pro ಜೊತೆ ಒಪ್ಪಂದ: ಈಗಷ್ಟೇ ಮಾರುಕಟ್ಟೆಗೆ ಬಂದಿರುವ Oneplus 7 Pro ಫೋನ್‌, Netflixನಲ್ಲಿ ಬರುವ ಹೆಚ್‌ಡಿಆರ್‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಅತ್ಯುತ್ತಮ ಫ್ಲಾಟ್‌ಫಾರ್ಮ್ ಎಂದು ಘೋಷಿಸಿದೆ. 4ಕೆಎಚ್‌ಡಿಆರ್‌ ಸಿನಿಮಾಗಳನ್ನು ಅದರ ಮೂಲ ಗುಣಮಟ್ಟಕ್ಕೆ ಕುಂದು ಬರದಂತೆ Oneplus 7 Pro ಫೋನಿನಲ್ಲಿ ನೋಡಬಹುದು.

2. Act Fibrenet ಜೊತೆಗೆ Netflix ಕೈ ಜೋಡಿಸಿದೆ. ಬೆಟರ್‌ ಟುಗೆದರ್‌ ಕ್ಯಾಂಪೇನಿನ ಮೂಲಕ Act Fibrenet ಹೊಂದಿರುವವರಿಗೆ ವಿಶೇಷ ಸೌಲಭ್ಯಗಳೂ ದೊರೆಯಲಿವೆ. Netflix ಸಿನಿಮಾಗಳನ್ನೂ ವೆಬ್‌ಸೀರೀಸ್‌ಗಳನ್ನೂ Act Fibrenet ಮೂಲಕ ನೋಡಬಹುದು. ಅಲ್ಲದೇ, ಅದಕ್ಕೆ ವಿಶೇಷ ರಿಯಾಯಿತಿಯೂ ಇದೆ.

3. ಜಗತ್ತಿನ ಸಿನಿಮಾಗಳು ಲಭ್ಯ: ಭಾರತೀಯ ಭಾಷೆಗಳ ಸಿನಿಮಾಗಳ ಜೊತೆಗೇ ಗ್ಲೋಬಲ್‌ ಸಿನಿಮಾಗಳನ್ನೂ ಪರಿಚಯಿಸುವಲ್ಲಿ Netflix ಆಸಕ್ತಿ ತೋರಿಸುತ್ತಿದೆ. ಅಷ್ಟೇನೂ ಜನಪ್ರಿಯವಾಗಿರದ ಆದರೆ, ಒಳ್ಳೆಯ ಸಿನಿಮಾಗಳನ್ನು ಭಾರತೀಯರು ಮೆಚ್ಚುತ್ತಾರೆ ಎಂಬ ಕಾರಣಕ್ಕೆ ಕೊರಿಯಾ, ಜಪಾನ್‌, ಇರಾನಿ ಮುಂತಾದ ಭಾಷೆಗಳ ಅತ್ಯುತ್ತಮ ಸಿನಿಮಾಗಳೂ Netflixನಲ್ಲಿ ದೊರೆಯಲಿವೆ.

ಇದನ್ನೂ ಓದಿ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ Oneplus 7 Pro: ಬೆಲೆ ಮತ್ತು ಫೀಚರ್ಸ್

4. ಕನ್ನಡ ಭಾಷೆಯ ಚಿತ್ರಗಳನ್ನೂ Netflix ಖರೀದಿಸಲಿದೆ. ಈಗಾಗಲೇ ಹಲವಾರು ಕನ್ನಡ ಚಿತ್ರಗಳು Netflix ಒಟಿಟಿಯಲ್ಲಿ ಲಭ್ಯವಿವೆ.

5.ಹಿಂದಿ ಭಾಷೆಗಿರುವ ವ್ಯಾಪಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು Netflix ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ವೆಬ್‌ಸೀರೀಸ್‌, ಒರಿಜಿನಲ್‌ ಕಂಟೆಂಟ್‌ಗಳ ನಿರ್ಮಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದೆ. ನಂತರ ಪ್ರಾದೇಶಿಕ ಭಾಷೆಗಳತ್ತ ಗಮನ ಹರಿಸುತ್ತದೆ.

6. ಸದ್ಯದಲ್ಲೇ ಆನಂದ ನೀಲಕಂಠನ್‌ ಕಾದಂಬರಿಯನ್ನು ಆಧರಿಸಿದ ಬಾಹುಬಲಿ- ಪ್ರೀಕ್ವೆಲ್‌ Netflixನಲ್ಲೇ ಪ್ರಸಾರವಾಗಲಿದೆ. ಸೇಕ್ರೆಡ್‌ ಗೇಮ್ಸ್‌ ಶೈಲಿಯಲ್ಲೇ ಬಾಹುಬಲಿ- ಶಿವಗಾಮಿಯ ಕತೆಯೂ ಬರಲಿದೆ.

7. ಬೇರೆ ಒಟಿಟಿಗಳಲ್ಲಿ ಇಲ್ಲದ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನೂ Netflix ನೀಡಲಿದೆ. ಉದಾಹರಣೆಗೆ ಬಸ್ಸಿನಲ್ಲೋ ಮೆಟ್ರೋದಲ್ಲೋ ಪ್ರಯಾಣ ಮಾಡುವಾಗ ಸೆಲ್‌ಫೋನಿನಲ್ಲಿ ಸಿನಿಮಾ ನೋಡುತ್ತಿರುತ್ತೀರಿ. ಮನೆಗೆ ಹೋಗಿ ಟೀವಿ ಆನ್‌ ಮಾಡಿದರೆ ನೀವು ಎಲ್ಲಿಯ ತನಕ ನೋಡಿ ನಿಲ್ಲಿಸಿದ್ದೀರೋ ಅಲ್ಲಿಂದಲೇ ಸಿನಿಮಾ ಶುರುವಾಗುತ್ತದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

Follow Us:
Download App:
  • android
  • ios