ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಆ್ಯಪಲ್ ಆರಂಭಿಸಿದ ಹೊಸ ಕ್ರಿಯೇಟರ್ ಸ್ಟುಡಿಯೋ ಏನು? ಎಲ್ಲಾ ಕಡೆ ಒಂದೇ ಫೀಚರ್ ಲಭ್ಯವಾಗುವಂತೆ ಮಾಡಿರುವ ಆ್ಯಪಲ್ ಕ್ರಿಯೆಟರ್ ಸ್ಟುಡಿಯೋ ಸಬ್‌ಸ್ಕ್ರಿಪ್ಶನ್ ಬೆಲೆ ಎಷ್ಟು?

ಆ್ಯಪಲ್ ಕ್ರಿಯೇಟರ್ ಸ್ಟುಡಿಯೋ (Apple Creator Studio)
ಟೆಕ್ ದೈತ್ಯ ಆ್ಯಪಲ್, ವಿಶ್ವಾದ್ಯಂತ ಕ್ರಿಯೇಟರ್‌ಗಳಿಗಾಗಿ 'ಆ್ಯಪಲ್ ಕ್ರಿಯೇಟರ್ ಸ್ಟುಡಿಯೋ' ಎಂಬ ಹೊಸ ಸಬ್‌ಸ್ಕ್ರಿಪ್ಷನ್ ಪರಿಚಯಿಸಿದೆ. ವೀಡಿಯೊ ಎಡಿಟಿಂಗ್, ಸಂಗೀತ, ಡಿಸೈನ್‌ಗೆ ಬೇಕಾದ ಪ್ರೊ-ಲೆವೆಲ್ ಟೂಲ್‌ಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ.
ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ಸಿಗಲಿದೆ?
ಆ್ಯಪಲ್ ಕ್ರಿಯೇಟರ್ ಸ್ಟುಡಿಯೋ ಸಬ್‌ಸ್ಕ್ರಿಪ್ಷನ್‌ನಲ್ಲಿ ಆ್ಯಪಲ್‌ನ ಅತ್ಯಂತ ಶಕ್ತಿಶಾಲಿ ಆ್ಯಪ್‌ಗಳು ಸೇರಿವೆ:
• ಫೈನಲ್ ಕಟ್ ಪ್ರೊ: ಮ್ಯಾಕ್ ಮತ್ತು ಐಪ್ಯಾಡ್ ಸಾಧನಗಳಿಗೆ.
• ಲಾಜಿಕ್ ಪ್ರೊ: ಮ್ಯಾಕ್ ಮತ್ತು ಐಪ್ಯಾಡ್ ಸಾಧನಗಳಿಗೆ.
• ಪಿಕ್ಸೆಲ್‌ಮೇಟರ್ ಪ್ರೊ: ಮೊದಲ ಬಾರಿಗೆ ಐಪ್ಯಾಡ್‌ನಲ್ಲಿ ಪರಿಚಯ, ಮ್ಯಾಕ್‌ನಲ್ಲೂ ಲಭ್ಯ.
• ಮೋಷನ್, ಕಂಪ್ರೆಸರ್ ಮತ್ತು ಮೇನ್‌ಸ್ಟೇಜ್: ಮ್ಯಾಕ್ ಬಳಕೆದಾರರಿಗೆ.
• ಪ್ರೊಡಕ್ಟಿವಿಟಿ ಆ್ಯಪ್ಸ್: ಕೀನೋಟ್, ಪೇಜಸ್, ನಂಬರ್ಸ್ ಮತ್ತು ಫ್ರೀಫಾರ್ಮ್‌ಗಾಗಿ ಪ್ರೀಮಿಯಂ ಟೆಂಪ್ಲೇಟ್‌ಗಳು.
ಪ್ರತ್ಯೇಕವಾಗಿ ಆ್ಯಪ್ಸ್ ಖರೀದಿಸುವ ಆಯ್ಕೆಯೂ ಇದೆ, ಸಬ್‌ಸ್ಕ್ರಿಪ್ಷನ್ ಕಡ್ಡಾಯವಲ್ಲ.
ಫೈನಲ್ ಕಟ್ ಪ್ರೊ (Final Cut Pro) ಹೊಸ AI ಫೀಚರ್ಸ್
ಫೈನಲ್ ಕಟ್ ಪ್ರೊ ಈಗ AI ತಂತ್ರಜ್ಞಾನದೊಂದಿಗೆ ಅಪ್‌ಡೇಟ್ ಆಗಿದೆ. 'ವಿಶುವಲ್ ಸರ್ಚ್' ಮೂಲಕ ವೀಡಿಯೊದಲ್ಲಿನ ವಸ್ತುಗಳನ್ನು ಹುಡುಕಬಹುದು. 'ಬೀಟ್ ಡಿಟೆಕ್ಷನ್' ಫೀಚರ್ ಸಂಗೀತದ ತಾಳಕ್ಕೆ ತಕ್ಕಂತೆ ಟೈಮ್‌ಲೈನ್ ಸಿಂಕ್ ಮಾಡುತ್ತದೆ.
ಲಾಜಿಕ್ ಪ್ರೊ (Logic Pro) ಮತ್ತು ಮ್ಯೂಸಿಕ್ ಕ್ರಿಯೇಶನ್
ಸಂಗೀತ ನಿರ್ಮಾಪಕರಿಗಾಗಿ ಲಾಜಿಕ್ ಪ್ರೊದಲ್ಲಿ ಹೊಸ 'ಸಿಂಥ್ ಪ್ಲೇಯರ್' ಪರಿಚಯಿಸಲಾಗಿದೆ. ಇದು AI ಸಂಗೀತಗಾರನಂತೆ ಕೆಲಸ ಮಾಡಿ ಸಂಗೀತ ರಚಿಸುತ್ತದೆ. 'ಕಾರ್ಡ್ ಐಡಿ' ಫೀಚರ್ ನಿಮ್ಮ ರೆಕಾರ್ಡಿಂಗ್ ಕೇಳಿ ತಾನಾಗಿಯೇ ಕಾರ್ಡ್‌ಗಳನ್ನು ಪತ್ತೆ ಮಾಡುತ್ತದೆ.
ಐಪ್ಯಾಡ್‌ನಲ್ಲಿ ಪಿಕ್ಸೆಲ್‌ಮೇಟರ್ ಪ್ರೊ (Pixelmator Pro)
ಮೊದಲ ಬಾರಿಗೆ, ಜನಪ್ರಿಯ ಫೋಟೋ ಎಡಿಟಿಂಗ್ ಆ್ಯಪ್ ಆದ ಪಿಕ್ಸೆಲ್‌ಮೇಟರ್ ಪ್ರೊ ಐಪ್ಯಾಡ್‌ನಲ್ಲಿ ಪರಿಚಯವಾಗುತ್ತಿದೆ. ಇದು ಆ್ಯಪಲ್ ಪೆನ್ಸಿಲ್ ಸಪೋರ್ಟ್, ಲೇಯರ್‌ಗಳು, ಸ್ಮಾರ್ಟ್ ಸೆಲೆಕ್ಷನ್ ಮತ್ತು ಸೂಪರ್ ರೆಸಲ್ಯೂಶನ್‌ನಂತಹ AI ಟೂಲ್‌ಗಳನ್ನು ಹೊಂದಿದೆ.
ಕೀನೋಟ್ ಮತ್ತು ಪ್ರೊಡಕ್ಟಿವಿಟಿ ಟೂಲ್ಸ್
ಕೀನೋಟ್, ಪೇಜಸ್ ಮತ್ತು ನಂಬರ್ಸ್‌ನಂತಹ ಆ್ಯಪ್‌ಗಳು OpenAI ತಂತ್ರಜ್ಞಾನದ ಸಹಾಯದಿಂದ ಚಿತ್ರಗಳನ್ನು ರಚಿಸುವ ಸಾಮರ್ಥ್ಯವನ್ನು ಪಡೆಯುತ್ತವೆ. ಕೀನೋಟ್ ಆ್ಯಪ್ ಕೇವಲ ಟೆಕ್ಸ್ಟ್ ನೋಟ್ಸ್ ಬಳಸಿ ಸಂಪೂರ್ಣ ಪ್ರೆಸೆಂಟೇಶನ್ ರಚಿಸಬಲ್ಲದು.
ಬೆಲೆ ಮತ್ತು ಮಾರಾಟ ದಿನಾಂಕ
ಆ್ಯಪಲ್ ಕ್ರಿಯೇಟರ್ ಸ್ಟುಡಿಯೋ ಜನವರಿ 28, 2026 ರಿಂದ ಲಭ್ಯವಾಗಲಿದೆ.
• ಮಾಸಿಕ ಚಂದಾ: $12.99 (ಸುಮಾರು ರೂ. 1,000)
• ವಾರ್ಷಿಕ ಚಂದಾ: $129 (ಸುಮಾರು ರೂ. 10,000)
• ವಿದ್ಯಾರ್ಥಿ ಕೊಡುಗೆ: ತಿಂಗಳಿಗೆ $2.99.
• ಫ್ಯಾಮಿಲಿ ಶೇರಿಂಗ್: 6 ಜನರವರೆಗೆ ಬಳಸಬಹುದು.
ಹೊಸ ಮ್ಯಾಕ್ ಅಥವಾ ಅರ್ಹ ಐಪ್ಯಾಡ್ ಖರೀದಿಸುವವರಿಗೆ 3 ತಿಂಗಳು ಉಚಿತವಾಗಿ ಸಿಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

