ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಯ್ತು Oneplusನ ಎರಡು ಹೊಸ ಫೋನ್ ಗಳು. ಮೊಬೈಲ್ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ Oneplus 7 ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ: 

ಬೆಂಗಳೂರು : ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ, ಸ್ಮಾರ್ಟ್‌ಫೋನ್ ಅನುಭವದ ಎಲ್ಲೆಯನ್ನು ಮೀರಿದ ಹೊಚ್ಚ ಹೊಸದಾದ Oneplus 7 ಸೀರೀಸ್ ಸ್ಮಾರ್ಟ್‌ಫೋನನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು. Oneplus ಹೊಸ ಫೋನ್ ವೇಗವನ್ನು ಮರುವ್ಯಾಖ್ಯಾನಿಸಿದೆ ಎಂದರೆ ತಪ್ಪಾಗಲಾರದು. 

ಸ್ಮಾರ್ಟ್‌ಫೋನ್‌ಗಳ ಕ್ಷೇತ್ರದಲ್ಲಿ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯನ್ನು ಹೊಂದಿರುವ Oneplus 7 Proನಲ್ಲಿ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ವಿಶಿಷ್ಟ ಸಂಯೋಜನೆಯು ಒಟ್ಟಾರೆ ವಿಶಿಷ್ಟ ಅನುಭವವನ್ನು ನೀಡಲಿದೆ. ಈವರೆಗೆ ಅಭಿವೃದ್ಧಿಪಡಿಸಿದ ಉತ್ಪನ್ನಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗಿದ್ದು, ಬಳಕೆದಾರರು ಇಟ್ಟಿರುವ ನಿರೀಕ್ಷೆಗಳನ್ನು ನಿಜ ಮಾಡುವಂತಹದ್ದಾಗಿದೆ.

Oneplus 7 Pro ಮೃದು... ಅಷ್ಟೇ ಆಕರ್ಷಕ ಡಿಸ್‌ಪ್ಲೇ: 

Oneplus 7 Pro ಫೋನ್ ಸೂಪರ್ ಸ್ಮೂತ್ 90Hz ಡಿಸ್‌ಪ್ಲೇ ಹೊಂದಿದೆ. ಇದರರ್ಥ, ಯಾವುದೇ ಅಡ್ಡಿ ಇಲ್ಲದೇ ಪ್ರತಿ ಸೆಕೆಂಡಿಗೆ 90 ಬಾರಿ ಸ್ಕ್ರೀನ್ ರೀಫ್ರೆಶ್ ಆಗುತ್ತದೆ. ನೀವು ಗೇಮ್ ಆಡುತ್ತಿದ್ದರೆ ಅಥವಾ ಫಿಲ್ಮ್ ವೀಕ್ಷಿಸುತ್ತಿದ್ದರೆ ಫ್ಲ್ಯೂಯಿಡ್ ಅಮೋಲೆಡ್ ಡಿಸ್‌ಪ್ಲೇಯು 19.5:9 ಅನುಪಾತದಲ್ಲಿ ಅತ್ಯುತ್ತಮ ಅನುಭವ ನೀಡುತ್ತದೆ. ಪ್ರತಿ ಇಂಚಿಗೆ 516 ಪಿಕ್ಸೆಲ್ ಹೊಂದಿರುವ ಈ ಫೋನ್ , ಒಟ್ಟು 4.49 ದಶಲಕ್ಷ ಪಿಕ್ಸೆಲ್ ಗಳ ಮೂಲಕ ಬೆರಗುಗೊಳಿಸುವಂತಹ ಚಿತ್ರಗಳನ್ನು ಸೆರೆಯಿಡಿಯುತ್ತದೆ. ಸೂಕ್ಷ್ಮ ವಿನ್ಯಾಸ: ಫೋನ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ ಟ್ಯಾಪರ್ಡ್‌ ಎಡ್ಜ್ ಹೊಂದಿರುವ Oneplus 7 Pro ಅಲ್ಟ್ರಾ-ಸ್ಲಿಮ್ ಆಗಿರುವುದು ಇನ್ನೊಂದು ವೈಷ್ಷಿಷ್ಟ್ಯ.

ಟ್ರಿಪಲ್ ಕ್ಯಾಮೆರಾ: ಪ್ರತಿಯೊಂದು ಕ್ಷಣಕ್ಕೂ ಒಂದು ಲೆನ್ಸ್!

Oneplus 7 Pro ನಲ್ಲಿ ಅತ್ಯಾಧುನಿಕವಾದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಹಿಂದಿನ ಫೋನ್ ಗಳಿಗಿಂತ ಅತ್ಯುತ್ಕೃಷ್ಠ, ಸಾಮರ್ಥ್ಯವನ್ನು ಇವು ಹೊಂದಿವೆ. ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿಯುವಂತೆ ವಿನ್ಯಾಸಗೊಳಿಸಲಾಗಿದೆ ಎಂಬುವುದು ಕಂಪನಿ ವಾದ.

ಈ ಕ್ಯಾಮೆರಾದಲ್ಲಿ ಅಲ್ಟ್ರಾಶಾಟ್ ಫೀಚರ್ ಇದ್ದು, ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮವಾದ ಫೋಟೋ ತೆಗೆಯಬಹುದಾಗಿದೆ. 4-in- One ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನ ಬಳಸಲಾಗಿದ್ದು, ರಾತ್ರಿ ವೇಳೆ ನಿಮ್ಮ ನೆಚ್ಚಿನ ಸೀನ್ ಅನ್ನು ಇನಷ್ಟು ಸುಂದರಗೊಳಿಸಲಿವೆ. Oneplusನ ರಿಯರ್ ಕ್ಯಾಮೆರಾಗಳು 48 ಮೆಗಾಪಿಕ್ಸೆಲ್, 1/2 ಇಂಚಿನ ಸೂಪರ್ ಸೈಜಿನ ಸೋನಿ ಐಎಂಎಕ್ಸ್586 ಸೆನ್ಸಾರ್, ಕಸ್ಟಮ್-ಮೇಡ್ 7 ಅಂಶಗಳ ಪ್ಲಾಸ್ಟಿಕ್ ಲೆನ್ಸ್ ಅನ್ನು ಒಳಗೊಂಡಿದೆ. ಇನ್ನುಳಿದ 2 ಕ್ಯಾಮೆರಾಗಳು 16 ಮೆಗಾಪಿಕ್ಸೆಲ್ ಮತ್ತು 8 ಮೆಗಾ ಪಿಕ್ಸೆಲ್ ಸಾಮರ್ಥ್ಯ ಹೊಂದಿವೆ.

ಇದನ್ನೂ ಓದಿಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ!

ಪಾಪ್- ಅಪ್ ಸೆಲ್ಫೀ ಕ್ಯಾಮೆರಾ:

ಸೆಲ್ಫಿಆಯ್ಕೆಯನ್ನು ಒತ್ತಿದಾಗ, ತನ್ನಿಂತಾನೆ ತೆರೆದುಕೊಳ್ಳುವ ಪಾಪ್ ಅಪ್ ಕ್ಯಾಮೆರಾ Oneplus 7 Proನ ಪ್ರಮುಖ ಆಕರ್ಷಣೆ. ಈ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಸೆಲ್ಫಿ ಪ್ರಿಯರಿಗೆ ಹೊಸ ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾದ 16 ಮೆಗಾ ಪಿಕ್ಸೆಲ್ ಪಾಪ್ ಅಪ್ ಕ್ಯಾಮೆರಾ, ಫೋನ್ ಕೆಳಗೆ ಬಿದ್ದರೂ ಒಳಗಡೆ ಸೇರಿಕೊಳ್ಳುತ್ತದೆ! ಅದು ಎಷ್ಟು ಗಟ್ಟಿಯಾಗಿದೆಯೆಂದರೆ ಭಾರ ಹಾಕಿದರೂ ತುಂಡಾಗುವುದಿಲ್ಲ, ಎಂಬುವುದು ಕಂಪನಿ ಭರವಸೆ. 

ಪ್ರೊಸೆಸರ್

Oneplus 7 Pro ಮೊಬೈಲ್ Qualcomm Snapdragon 855 ಹೊಂದಿದ್ದು, 12 GB RAMನ್ನು ಒಳಗೊಂಡಿದೆ. ಡಾಕ್ಯುಮೆಂಟ್ ಲೋಡ್ ಆಗುವ, ಕ್ಯಾಮೆರಾದಿಂದ ಚಿತ್ರಗಳು ಸೇವ್ ಆಗುವ, ಆ್ಯಪ್ ಡೌನ್‌ಲೋಡ್ ಆಗುವ ಸಂದರ್ಭದಲ್ಲಿಯೂ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಲಿದೆ. RAM ಬೂಸ್ಟ್ ಫೀಚರ್ ಹೊಸ ವೈಶಿಷ್ಟ್ಯ. ನಿಮ್ಮ ಬಳಕೆಗೆ ಅನುಗುಣವಾಗಿ, ಬೂಸ್ಟ್‌ ಫೀಚರ್ ಲೋಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹಾಗಾಗಿ ಗೇಮಿಂಗ್ ಈ ಫೋನ್ ನಲ್ಲಿ ಮಜಾ ನೀಡುತ್ತದೆ. 

ಬ್ಯಾಟರಿ ಮತ್ತು ಚಾರ್ಜಿಂಗ್:

4,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸೂಪರ್‌ಫಾಸ್ಟ್ ಫೀಚರ್ ನಿಂದಾಗಿ ಕೇವಲ 20 ನಿಮಿಷದಲ್ಲಿ ಅರ್ಧದಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗೇಮ್ ಆಡುತ್ತಿರುವ ವೇಳೆಯೂ ಚಾರ್ಜ್ ಮಾಡಿದರೂ Oneplus 7 Pro ತಣ್ಣಗಿರುತ್ತದೆ ಎಂದು ಕಂಪನಿಯು ಹೇಳಿದೆ. 

ಇಮ್ಮೆರ್ಸಿವ್ ಗೇಮಿಂಗ್:

ಅತ್ಯುತ್ತಮ ಸೌಂಡ್ ಗುಣಮಟ್ಟಕ್ಕಾಗಿ ಶಕ್ತಿಶಾಲಿ ಆ್ಯಂಪ್ಲಿಫೈಯರ್‌ನೊಂದಿಗೆ ಸ್ಟೀರಿಯೋ ಡ್ಯುಯೆಲ್-ಸ್ಪೀಕರ್ ಸಿಸ್ಟಮನ್ನು Oneplus 7 Pro ನಲ್ಲಿ ಅಳವಡಿಸಲಾಗಿದೆ. ಬಳಕೆದಾರರು ತಮ್ಮ ನೆಚ್ಚಿನ ಮನೋರಂಜನೆ ಕಾರ್ಯಕ್ರಮ, ಸಿನೆಮಾಗಳು, ಟಿವಿ ಶೊಗಳನ್ನು ವೀಕ್ಷಿಸುವಾಗ ಮತ್ತು ಗೇಮ್‌ಗಳನ್ನುಆಡುವಾಗ ಅತ್ಯುತ್ತಮ ಗುಣಮಟ್ಟದ ಡಾಲ್ಬಿ ಸೌಂಡ್ ಎಫೆಕ್ಟ್‌ನ ಅನುಭವವನ್ನು ಪಡೆಯಲಿದ್ದಾರೆ.

ಇದನ್ನೂ ಓದಿಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

ದರ ಮತ್ತು ಲಭ್ಯತೆ:

ProductConfigurationPriceAvailability (open sales)
OnePlus 7 Pro Mirror Gray6+128 GB, 8+256 GBINR 48,999, INR 52,99917 May
OnePlus 7 Pro Nebula Blue8+ 256 GB, 12 + 256GBINR 52999, INR 57,99928 May
OnePlus 7 Pro Almond8+ 256 GBINR 52,999June

ಯಾವಾಗ, ಎಲ್ಲೆಲ್ಲಿ ಲಭ್ಯ?

Oneplus 7 Pro ಬೆಂಗಳೂರು, ಮುಂಬೈ, ದೆಹಲಿ, ಹೈದ್ರಾಬಾದ್, ಚೆನ್ನೈ, ಪುಣೆ ಮತ್ತು ಅಹ್ಮದಾಬಾದ್‌ನ ಗ್ರಾಹಕರು ಮೇ 15 ರ ಸಂಜೆ 7 ಗಂಟೆಯಿಂದ ಖರೀದಿಸಬಹುದು.

ಅಮೆಜಾನ್, Oneplus.in, ಎಲ್ಲಾ Oneplus ಆಫ್‌ಲೈನ್ ಸ್ಟೋರ್‌ಗಳು, ಎಲ್ಲಾ ರಿಲಾಯನ್ಸ್ ಡಿಜಿಟಲ್ ಔಟ್‌ಲೆಟ್‌ಗಳು, ಮೈಜಿಯೋ ಸ್ಟೋರ್‌ಗಳು ಮತ್ತು ಕ್ರೊಮಾ ಔಟ್‌ಲೆಟ್‌ಗಳಲ್ಲಿಯೂ Oneplus 7 Pro ಲಭ್ಯವಿದೆ. ಎಸ್‌ಬಿಐ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 2000 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ. ಇದಲ್ಲದೇ ಜಿಯೋದಿಂದ 9300 ರೂಪಾಯಿವರೆಗಿನ ಕೊಡುಗೆಗಳೂ ಇವೆ.