Asianet Suvarna News Asianet Suvarna News

National Startup Day 2022: ನವೋದ್ಯಮಗಳಲ್ಲಿ ಕರ್ನಾಟಕದ್ದೇ ಸಿಂಹಪಾಲು: ಸಚಿವ ಅಶ್ವಥ್ ನಾರಾಯಣ!

2021 ರಲ್ಲಿ ₹1060 ಸಾವಿರ ಬಂಡವಾಳ ವಿದೇಶಿದಿಂದ ನಮ್ಮ ರಾಜ್ಯಕ್ಕೆ ಬಂದಿದೆ ಎಂದು  ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

National Startup Day 2022 Karnataka is Startup capital of India says C N Ashwath Narayan mnj
Author
Bengaluru, First Published Jan 16, 2022, 1:24 PM IST

ಬೆಂಗಳೂರು (ಜ. 16): ಸ್ಟಾರ್ಟ್‌ಅಪ್‌ಗಳನ್ನು ನವ ಭಾರತದ ಬೆನ್ನೆಲುಬು ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ (National Startup Day) ಎಂದು ಘೋಷಿಸಿದ್ದಾರೆ. ಈ ಬೆನ್ನಲ್ಲೇ  ವಿಧಾನಸೌಧದಲ್ಲಿ  ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ (C N Ashwath Narayan) ಸುದ್ದಿಗೊಷ್ಠಿ ನಡೆಸಿದ್ದು "ದೇಶದಲ್ಲೇ ಅತಿ ಹೆಚ್ಚಿನ ಸಾರ್ಟ್ ಅಪ್ ನಮ್ಮ ರಾಜ್ಯದಲ್ಲಿದೆ (Karnataka Start Ups). ಸ್ಟಾರ್ಟ್ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು" ಎಂದು ಹೇಳಿದ್ದಾರೆ. 

ಶನಿವಾರ ವಿವಿಧ ವಲಯಗಳ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗಿ ಮೋದಿ ಸಂವಾದ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ ಸ್ಟಾರ್ಟ್ಅಪ್ ರಾಜಧಾನಿ ಕರ್ನಾಟಕದ  ಪ್ರಶಂಸೆ ವ್ಯಕ್ತಪಡಿಸಿದ್ದರು. “ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ಟಾರ್ಟ್‌ಅಪ್‌ಗಳನ್ನು, ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್‌ಅಪ್‌ಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳನ್ನು ತಲುಪಲು, ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದರು. 

ಇದನ್ನೂ ಓದಿ: National Startup Day 2022: ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸುವರ್ಣಯುಗ ಆರಂಭ: ಪ್ರಧಾನಿ ಮೋದಿ!

ಈ ಬೆನ್ನಲ್ಲೇ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ  "2021 ರಲ್ಲಿ 1060 ಸಾವಿರ ಬಂಡವಾಳ ವಿದೇಶಿದಿಂದ ನಮ್ಮ ರಾಜ್ಯಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. " ಒಂದು ವಾರದಿಂದ  ಸಾರ್ಟ್ ಅಪ್ ಡೇ ಆಚರಣೆ ಮಾಡುತ್ತಿದ್ದೇವೆ. ದೇಶದಲ್ಲೇ ಅತಿ ಹೆಚ್ಚಿನ ಸಾರ್ಟ್ಅಪ್ ನಮ್ಮ ರಾಜ್ಯದಲ್ಲಿದೆ. ಸ್ಟಾರ್ಟ್ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು. ರಾಜ್ಯದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿದೆ. ಭಾರತ ವಿಶ್ವ ಗುರು ಅಗಬೇಕು ಎಂದರೆ ಅದಕ್ಕೆ ಸಾರ್ಟ್ಅಪ್ ಬೆಳವಣಿಗೆ ಬಹಳ ಮುಖ್ಯ ಎಂದು‌ ಮೋದಿ ಹೇಳಿದ್ದಾರೆ" ಎಂದು ಐಟಿ ಬಿಟಿ ಸಚಿವ ಹೇಳಿದ್ದಾರೆ.

ಕರ್ನಾಟಕ ಸೀಡ್ ಫಂಡ್ ಯೋಜನೆ: "ಎಲಾ ಕ್ಷೇತ್ರದ ಸಾರ್ಟ್ಅಪ್ ನಲ್ಲಿ ನಮ್ಮ ರಾಜ್ಯ ಅಗ್ರಮಾನ್ಯದಲ್ಲಿದೆ.  ಸಾರ್ಟ್ಅಪ್ ಪ್ರೋತ್ಸಾಹಿಸಲು ಕರ್ನಾಟಕ ಸೀಡ್ ಫಂಡ್ (Seed Funding) ಯೋಜನೆ ಜಾರಿಮಾಡಿದ್ದೇವೆ. ಈಗಾಗಲೇ 200 ಕ್ಕಿಂತ ಹೆಚ್ಚು ಸಾರ್ಟ್ಅಪ್‌ಗಳಿಗೆ ಸೀಟ್ ಫಂಡ್‌ ನೀಡಲಾಗುತ್ತಿದೆ. ಇದುವರೆಗೂ  50 ಲಕ್ಷದವರೆಗೂ  ಸೀಡ್ ಫಂಡ್ ನೀಡಲಾಗಿದೆ"  ಎಂದು ಅಶ್ವತ್ಥ್‌ ನಾರಾಯಣ್‌ ತಿಳಿಸಿದ್ದಾರೆ. 

ಇದನ್ನೂ ಓದಿ: ಫ್ಯೂಚರ್‌ ಡಿಜಿಟಲ್‌ ಜಾಬ್ಸ್‌ಗೆ ಸಚಿವ ಅಶ್ವತ್ಥ ಚಾಲನೆ

"ಇಡಿ ದೇಶದಲ್ಲಿ 57 ಸಾವಿರ ಸಾರ್ಟ್ ಅಪ್ ಗಳಿವೆ‌. ಅವುಗಳಲ್ಲಿ 13 ಸಾವಿರ ಸಾರ್ಟ್ ಅಪ್ ಕರ್ನಾಟಕದಲ್ಲೇ ಆರಂಭಿಸಲಾಗಿದೆ. 7 ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಡಿಜಿಟಲ್ ಲರ್ನಿಂಗ್ (Digital Learning) ಸಹ ಭೋದಿಸಲಾಗ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಸುಧಾರಣೆ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಕರ್ನಾಟಕಕ್ಕೆ ಬೇರೆ ರಾಜ್ಯ ಹಾಗೂ ದೇಶಗಳಿಂದ ವಿದ್ಯಾರ್ಥಿಗಳು  ಶಿಕ್ಷಣಕ್ಕಾಗಿ ಬರಬೇಕು  ಎಂಬ ಧ್ಯೇಯದ ಜತೆಗೆ ಕೆಲಸ ಮಾಡುತ್ತಿದ್ಧೆವೆ.  ಕರ್ನಾಟಕ ಎಂದರೆ ಒಳ್ಳೆಯ ಶಿಕ್ಷಣ ಸಿಗಲಿದೆ ಎಂದು ವಿಶ್ವವೇ ತಿರುಗಿ ನೋಡಬೇಕು ಆ ರೀತಿ ಸುಧಾರಣೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಕರ್ನಾಟಕ ಭರವಸೆಯ ರಾಜ್ಯ: ಕರ್ನಾಟಕ ಭರವಸೆ ನಾಡು, ಭವಿಷ್ಯದ ನಾಡನ್ನಾಗಿ ಮಾಡುವುದಾಗಿ ಸಚಿವರು ಹೇಳಿದ್ದಾರೆ. "ರಾಜ್ಯದಲ್ಲಿ ವಿಶ್ವದರ್ಜೆಯ ಸಂಸ್ಥೆಗಳನ್ನ ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಯುವಕರ ಸಬಲಿಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ. ಇನ್ನಷ್ಟು ಬಲವಾಗಿ ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಳೆಸಲು ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ ರಾಷ್ಟ್ರೀಯ ಯುವ ದಿನಾಚರಣೆ ವೇಳೆಗೆ ಕರ್ನಾಟಕ ಭರವಸೆಯ ರಾಜ್ಯವಾಗಿ ಹೊರಹೊಮ್ಮಲಿದೆ" ಎಂದು ಸಚಿವರು ಹೇಳಿದ್ದಾರೆ.

Follow Us:
Download App:
  • android
  • ios