Asianet Suvarna News Asianet Suvarna News

National Startup Day 2022: ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸುವರ್ಣಯುಗ ಆರಂಭ: ಪ್ರಧಾನಿ ಮೋದಿ!

ಸ್ಟಾರ್ಟ್‌ಅಪ್‌ಗಳನ್ನು ನವ ಭಾರತದ ಬೆನ್ನೆಲುಬು ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಜನವರಿ 16  ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ  ಎಂದು ಘೋಷಿಸಿದ್ದಾರೆ
 

National Startup Day 2022 the golden period of startups is just beginning Said PM Modi mnj
Author
Bengaluru, First Published Jan 16, 2022, 12:35 PM IST

Tech Desk: ಸ್ಟಾರ್ಟ್‌ಅಪ್‌ಗಳನ್ನು ನವ ಭಾರತದ ಬೆನ್ನೆಲುಬು ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ (Narendra Modi)  ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ (National Startup Day) ಎಂದು ಘೋಷಿಸಿದ್ದಾರೆ. “ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ಟಾರ್ಟ್‌ಅಪ್‌ಗಳನ್ನು, ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್‌ಅಪ್‌ಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳನ್ನು ತಲುಪಲು, ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ, ”ಎಂದು  ವಿವಿಧ ವಲಯಗಳ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗಿನ ಸಂವಾದದಲ್ಲಿ ಮೋದಿ ಘೋಷಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಟಾರ್ಟ್‌ಅಪ್‌ಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸ್ಟಾರ್ಟಪ್ ವಲಯದ ಬೆಳವಣಿಗೆಯನ್ನು ಮೋದಿ ಶ್ಲಾಘಿಸಿದರು.  ಜತೆಗೆ ಸ್ಟಾರ್ಟಪ್‌ಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಸರ್ಕಾರವು ದೊಡ್ಡ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. “ಕಳೆದ ವರ್ಷ ಭಾರತವು 42 ಯುನಿಕಾರ್ನ್‌ಗಳನ್ನು ($1 ಶತಕೋಟಿ ಮೌಲ್ಯವನ್ನು ತಲುಪಿದ ಖಾಸಗಿ ಸ್ಟಾರ್ಟಪ್) ಸೃಷ್ಟಿಸಿದೆ! ಸ್ಟಾರ್ಟ್‌ಅಪ್‌ಗಳ ಸುವರ್ಣ ಅವಧಿ ಈಗಷ್ಟೇ ಆರಂಭವಾಗಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ,’’ ಎಂದು  ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಜನವರಿ 23 ರಿಂದ Republic Day Celebrations!

ಆಲೋಚನೆಗಳು ವ್ಯವಹಾರಗಳಾಗಿ ಪರಿವರ್ತನೆ:  “ಭಾರತದಾದ್ಯಂತ ಕನಿಷ್ಠ 625 ಜಿಲ್ಲೆಗಳಲ್ಲಿ ಕನಿಷ್ಠ ಒಂದು ಸ್ಟಾರ್ಟಪ್ ಇದೆ. ಭಾರತದ ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ ಅರ್ಧದಷ್ಟು Tier-II  ಅಥವಾ Tier-III ನಗರಗಳಲ್ಲಿವೆ. ಎಲ್ಲಾ ವರ್ಗದ ಜನರು ತಮ್ಮ ಆಲೋಚನೆಗಳನ್ನು ವ್ಯವಹಾರಗಳಾಗಿ ಪರಿವರ್ತಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಮೋದಿ ತಿಳಿಸಿದ್ದಾರೆ ಎಂದು ಪ್ರಸಾರ ಭಾರತಿ ಉಲ್ಲೇಖಿಸಿದೆ.

“ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಅಭಿಯಾನವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಸಾಕಷ್ಟು ಸುಧಾರಿಸಿದೆ. 2015ರಲ್ಲಿ ಭಾರತ ಈ ಶ್ರೇಯಾಂಕದಲ್ಲಿ 81ನೇ ಸ್ಥಾನದಲ್ಲಿತ್ತು. ಈಗ ಭಾರತವು ನಾವೀನ್ಯತೆ ಸೂಚ್ಯಂಕದಲ್ಲಿ 46 ನೇ ಸ್ಥಾನದಲ್ಲಿದೆ, ” ಮೋದಿ ತಿಳಿಸಿದ್ದಾರೆ

ಸ್ಟಾರ್ಟ್‌ಅಪ್‌ಗಳು ಭಾರತದ ಬೆನ್ನೆಲುಬು:  “2022 ರ ವರ್ಷವು ಭಾರತೀಯ ಸ್ಟಾರ್ಟಪ್ ವ್ಯವಸ್ಥೆಗೆ ಹೊಸ ದಿಗಂತಗಳನ್ನು ತಂದಿದೆ. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ಸ್ಟಾರ್ಟ್‌ಅಪ್‌ಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ. ನಮ್ಮ ಸ್ಟಾರ್ಟ್‌ಅಪ್‌ಗಳು  ಉದ್ಯಮದ ಸ್ಥಿಗತಿಯನ್ನು ಬದಲಾಯಿಸುತ್ತಿವೆ. ಸ್ಟಾರ್ಟ್‌ಅಪ್‌ಗಳು ಭಾರತದ ಬೆನ್ನೆಲುಬಾಗಲಿವೆ ಎಂದು ನಾನು ನಂಬುತ್ತೇನೆ" ಎಂದು ಪ್ರಸಾರ ಭಾರತಿ ಪ್ರಧಾನಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

 

 

ಇದನ್ನೂ ಓದಿ: ಫ್ಯೂಚರ್‌ ಡಿಜಿಟಲ್‌ ಜಾಬ್ಸ್‌ಗೆ ಸಚಿವ ಅಶ್ವತ್ಥ ಚಾಲನೆ

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಣ್ಣ-ನಗರ ಮತ್ತು ಗ್ರಾಮೀಣ ಪ್ರದೇಶಗಳು  ಪ್ರಸ್ತುತ ಪ್ರವರ್ಧಮಾನಕ್ಕೆ ಬರುತ್ತಿವೆ. ಹೀಗಾಗಿ ಈ ಪ್ರದೇಶಗಳನ್ನು  ಕನೆಕ್ಟ್‌ ಮಾಡುವಂತೆ ಸ್ಟಾರ್ಟ್‌ಅಪ್‌ಗಳನ್ನು ಮೋದಿ ಕೇಳಿಕೊಂಡಿದ್ದಾರೆ. “ಗ್ರಾಮೀಣ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಸ್ಟಾರ್ಟ್‌ಅಪ್‌ಗಳನ್ನು ಒತ್ತಾಯಿಸುತ್ತೇನೆ. ಇದು ಸವಾಲುಗಳನ್ನು ಮಾತ್ರವಲ್ಲದೆ ದೊಡ್ಡ ಸಾಮರ್ಥ್ಯವನ್ನೂ ಹೊಂದಿದೆ, ”ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ ಟೆಕೆಡ್‌:  "ಈ ದಶಕವನ್ನು ಭಾರತದ 'ಟೆಕೆಡ್‌'(techade) ಎಂದು ಕರೆಯಲಾಗುತ್ತಿದೆ... ನಾವೀನ್ಯತೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಉದ್ಯಮಗಳನ್ನು ಕಾರ್ಯ ವಿಧಾನವನ್ನು ಸುಲಭಗೊಳಿಸುವುದು, ಸರ್ಕಾರಿ ವಲಯದಲ್ಲಿ ನಾವೀನ್ಯತೆ, ಅಧಿಕಾರಿಗಳ ಹೊಂದಾಣಿಕ ಪ್ರಮುಖ ಪಾತ್ರ ವಹಿಸುತ್ತವೆ," ಎಂದು ಪ್ರಧಾನಮಂತ್ರಿ  ಟ್ವೀಟ್ ಮಾಡಿದ್ದಾರೆ.  ಜಾಗತಿಕ ಸನ್ನಿವೇಶದಲ್ಲಿ ಭಾರತವನ್ನು ಮುಂದೆ ಕೊಂಡೊಯ್ಯಲು ಸರ್ಕಾರವು ಎಲ್ಲಾ ನವೋದ್ಯಮಿಗಳಿಗೆ ಸಹಾಯ ಮಾಡುತ್ತದೆ ಎಂದು  ಮೋದಿ ಹೇಳಿದ್ದಾರೆ.

Follow Us:
Download App:
  • android
  • ios