ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ ಕಾರ್ಯಾಚರಣೆ ಸ್ಥಗಿತ| ಇದೇ ಜ.22ರಂದು ಕಾರ್ಯಾಚರಣೆ ನಿಲ್ಲಿಸಲಿರುವ ಸ್ಪಿಟ್ಜರ್ ಟೆಲಿಸ್ಕೋಪ್| ಆಗಸ್ಟ್ 25, 2003 ರಂದು ಕಾರ್ಯಾಚರಣೆ ಆರಂಭಿಸಿದ್ದ ಸ್ಪಿಟ್ಜರ್| ಸತತ 16 ವರ್ಷಗಳ ಕಾಲ ಬ್ರಹ್ಮಾಂಡದ ಅಧ್ಯಯನ| TRAPPIST-1 ಗ್ರಹ ವ್ಯವಸ್ಥೆ ಕಂಡುಹಿಡಿದ ಹೆಗ್ಗಳಿಕೆ| ಜ.22ರಂದು ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿರುವ ನಾಸಾ|

ವಾಷಿಂಗ್ಟನ್(ಜ.19): ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ನಾಸಾ ಗುಡ್ ಬೈ ಹೇಳಿದ್ದು, 16 ವರ್ಷಗಳ ಸುದೀರ್ಘ ಕಾರ್ಯಾಚರಣೆ ಅಂತ್ಯ ಕಾಣಲಿದೆ. 

ಇದೇ ಜ.22 ರಂದು ಸ್ಪಿಟ್ಜರ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದ್ದು, ಇದರ ನೇರ ಪ್ರಸಾರವನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

 ಈ ಕುರಿತು ಮಾಹಿತಿ ನೀಡಿರುವ ನಾಸಾದ ಖಗೋಳ ಭೌತಶಾಸ್ತ್ರದ ನಿರ್ದೇಶಕ ಪಾಲ್ ಹರ್ಟ್ಜ್, ನಾಸಾದ ನಾಲ್ಕು ಐತಿಹಾಸಿಕ ಬಾಹ್ಯಾಕಾಶ ಟೆಲಿಸ್ಕೋಪ್‌ಗಳಲ್ಲಿ ಒಂದಾದ ಸ್ಪಿಟ್ಜರ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಿದ್ದಾರೆ.

Scroll to load tweet…

ಸ್ಪಿಟ್ಜರ್ ಟೆಲಿಸ್ಕೋಪ್ ಆಗಸ್ಟ್ 25, 2003 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸತತ 16 ವರ್ಷಗಳ ಕಾಲ ಬ್ರಹ್ಮಾಂಡದ ಅಧ್ಯಯನ ನಡೆಸಿದ್ದ ಸ್ಪಿಟ್ಜರ್, ವಿಶ್ವ ರಚನೆಯ ಕುರಿತು ಮಹತ್ವದ ಮಾಹಿತಿಗಳನ್ನು ರವಾನಿಸಿತ್ತು.

ಸ್ಪಿಟ್ಜರ್ ಎಕ್ಸೋಪ್ಲಾನೆಟ್(ಸೌರಮಂಡಲದ ಆಚೆಯ ಗ್ರಹ) ವಾಯುಮಂಡಲದ ಅಧ್ಯಯನ ಮಾಡಿದ ಮೊದಲ ಟೆಲಿಸ್ಕೋಪ್. TRAPPIST-1 ನಕ್ಷತ್ರದ ಸುತ್ತಲಿನ ಏಳು ಭೂಮಿಯ ಗಾತ್ರದ ಐದು ಗ್ರಹಗಳನ್ನು ಕಂಡುಹಿಡಿದ ಹೆಗ್ಗಳಿಕೆ ಸ್ಪಿಟ್ಜರ್ ಟೆಲಿಸ್ಕೋಪ್‌ಗೆ ಸಲ್ಲುತ್ತದೆ.

ಬ್ರಹ್ಮಾಂಡ ಅರಿಯಲು ಹಿಂದೇಟು ಹಾಕ್ತಿದೆ ನಾಸಾ: ಇದು ಟ್ರಂಪ್ ಮೋಸ?

ಈವೆಂಟ್ ನಾಸಾ ಟೆಲಿವಿಷನ್, ಫೇಸ್‌ಬುಕ್ ಲೈವ್, ಯೂಟ್ಯೂಬ್, ಟ್ವಿಟರ್ ಮತ್ತು ಏಜೆನ್ಸಿಯ ವೆಬ್‌ಸೈಟ್‌ನಲ್ಲಿ, ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ ಕಾರ್ಯಾಚರಣೆ ನಿಲ್ಲಿಸುವ ನೇರ ಪ್ರಸಾರವನ್ನು ನೋಡಬಹುದಾಗಿದೆ.