Asianet Suvarna News Asianet Suvarna News

ಬ್ರಹ್ಮಾಂಡ ಅರಿಯಲು ಹಿಂದೇಟು ಹಾಕ್ತಿದೆ ನಾಸಾ: ಇದು ಟ್ರಂಪ್ ಮೋಸ?

ಹೊಸ ಖಗೋಳ ಅನ್ವೇಷಣೆಗಳಿಗೆ ನಾಸಾ ಬಳಿ ಹಣ ಇಲ್ಲ?! ಸಹಾಯಕ್ಕಾಗಿ ಟ್ರಂಪ್ ಸರ್ಕಾರದತ್ತ ದೃಷ್ಟಿ ನೆಟ್ಟ ನಾಸಾ! ನಿಷ್ಕ್ರೀಯಗೊಂಡ ಹಬಲ್, ಚಂದ್ರ ಟೆಲಿಸ್ಕೋಪ್‌ಗಳು! ಹೊಸ ಟೆಲಿಸ್ಕೋಪಿಕ್ ಯಂತ್ರ ಕಳುಹಿಸುವಲ್ಲಿ ನಾಸಾ ನಿರಾಸಕ್ತಿ! ಆರ್ಥಿಕ ಸಹಾಯ ಕೊಡದೇ ಸತಾಯಿಸುತ್ತಿರುವ ಟ್ರಂಪ್?         

Reason behind NASA apathy towards new projects
Author
Bengaluru, First Published Oct 18, 2018, 6:28 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಅ.17): ನಾಸಾ ವಿಶ್ವದ ಸರ್ವಶ್ರೇಷ್ಠ ಖಗೋಳ ಅಧ್ಯಯನ ಸಂಸ್ಥೆ. ಬ್ರಹ್ಮಾಂಡದ ವಿಸ್ಮಯಗಳನ್ನು ಅರಿಯುವಲ್ಲಿ ನಿರತವಾಗಿರುವ ನಾಸಾ, ಈಗಾಗಲೇ ಮಾನವ ಕುಲಕ್ಕೆ ಅಪಾರವಾದ ಕೊಡುಗೆ ನೀಡಿದೆ.

ಅಷ್ಟೇ ಅಲ್ಲದೇ ಖಗೋಳದಲ್ಲಿ ಹತ್ತು ಹಲವು ಪ್ರಥಮಗಳನ್ನು ಸಾಧಿಸಿರುವ ನಾಸಾ, ವಿಶ್ವದ ಅನಂತತೆಯನ್ನು ಮೀರುವ ತನ್ನ ಉದ್ಧೇಶ ಸಾಧನೆಯತ್ತ ಧೃಢ ಹೆಜ್ಜೆ ಇರಿಸಿದೆ. ಆದರೆ ಸದ್ಯ ನಾಸಾ ಹೊಸ ಹೊಸ ಖಗೋಳ ಅನ್ವೇಷಣೆಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಶ್ವದ ಖಗೋಳ ಪ್ರೀಯರ ಆತಂಕಕ್ಕೆ ಕಾರಣವಾಗಿದೆ.

Reason behind NASA apathy towards new projects

ಉದಾಹರಣಗೆ ನೋಡುವುದಾದರೆ 1990 ಮತ್ತು ಆ ನಂತರದ ಅವಧಿಯಲ್ಲಿ ಕಳುಹಿಸಲಾದ ನಾಸಾದ ಹಬಲ್, ಚಂದ್ರ, ಕಾಮ್ಟನ್ ಮತ್ತು ಪಿಟ್ಜರ್ ಟೆಲಿಸ್ಕೋಪ್‌ಗಳು ಬಹುತೇಕ ನಿಷ್ಕ್ರೀಯ ಸ್ಥಿತಿಗೆ ಬಂದು ತಲುಪಿವೆ.

ವಿಶ್ವದ ಅಗಾಧತೆಯನ್ನು ಪರಿಚಯಿಸಿದ ಹಬಲ್ ಟೆಲಸ್ಕೋಪ್ ಇತ್ತೀಚಿಗೆ ತಾಂತ್ರಿಕ ದೋಷದಿಂದ ನಿಷ್ಕ್ರೀಯವಾಗಿರುವುದು ಚಿಂತೆಗೀಡು ಮಾಡಿದೆ.

ಅದರಂತೆ ಚಂದ್ರ ಟೆಲಿಸ್ಕೋಪ್ ಕೂಡ ಅಂತ್ಯವನ್ನು ಸಮೀಪಿಸಿದೆ. ಹಬಲ್‌ಗೆ ಈಗ 28 ವರ್ಷವಾಗಿದ್ದರೆ, ಚಂದ್ರ ಟೆಲಿಸ್ಕೋಪ್‌ಗೆ 19 ವರ್ಷವಾಗಿದೆ. ಆದರೂ 2020ರ ವರೆಗೂ ಈ ಎರಡು ಟೆಲಿಸ್ಕೋಪ್‌ಗಳು ಕರ್ತವ್ಯ ನಿರ್ವಹಿಸಲಿವೆ ಎಂಬುದು ನಾಸಾದ ಭರವಸೆ.

Reason behind NASA apathy towards new projects

ಆಶ್ಚರ್ಯಕರ ಸಂಗತಿ ಎಂದರೆ ನಾಸಾ ಇವುಗಳ ಬದಲು ಹೊಸ ಮತ್ತು ಅತ್ಯಾಧುನಿಕ ಟೆಲಿಸ್ಕೋಪ್‌ಗಳನ್ನು ಕಳುಹಿಸಲು ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಂತೆ ಅನೇಕ ಅಚ್ಚರಿಯ ಸಂಗತಿಗಳು ಬಯಲಾಗುತ್ತವೆ.

ಪ್ರಮುಖವಾಗಿ ಹೊಸ ಖಗೋಳ ಅನ್ವೇಷಣೆ ಕೈಗೊಳ್ಳಲು ನಾಸಾಗೆ ಹಣದ ಕೊರತೆ ಎದುರಾಗಿದೆ. ಸರ್ಕಾರ ಕೂಡ ನಾಸಾಗೆ ನಿಯಮಿತವಾಗಿ ಹಣ ಒದಗಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ 2030ರಲ್ಲಿ ನಾಸಾ ಕೈಗೊಳ್ಳಬೇಕಾಗಿದ್ದ ನಾಲ್ಕು ಪ್ರಮುಖ ಯೋಜನೆಗಳು ಮುಂದೂಡಲ್ಪಡುವ ಸಾಧ್ಯತೆ ದಟ್ಟವಾಗಿದೆ.

Reason behind NASA apathy towards new projects

ಡೋನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ತಮ್ಮ ಅವಧಿಯಲ್ಲೇ ಮಂಗಳ ಗ್ರಹಕ್ಕೆ ಮಾನವ ಸಹಿತ ನೌಕೆಯನ್ನು ಕಳುಹಿಸಲಾಗುವುದು ಎಂದು ಘೋಷಣೆಯನ್ನು ಮಾಡಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಬಳಿಕ ನಾಸಾದ ಬೆಳವಣಿಗೆ ಕುರಿತು ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂಬುದು ಖಗೋಳ ವಿಜ್ಞಾನಿಗಳ ಆರೋಪ.

ನಾಸಾ ಇತ್ತೀಚಿಗಷ್ಟೇ ಸೂರ್ಯನ ಅಧ್ಯಯನಕ್ಕಾಗಿ ಪಾರ್ಕರ್ ಪ್ರೋಬ್ ನೌಕೆಯನ್ನು ಕಳುಹಿಸಿದೆ. ಅಲ್ಲದೇ ನಿಯಮಿತವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವರನ್ನು ಮತ್ತು ಸರಕು ಸರಂಜಾಮುಗಳನ್ನು ಕಳುಹಿಸುತ್ತಲೇ ಇರುತ್ತದೆ.

ಈ ಎಲ್ಲಾ ಯೋಜನೆಗಳಿಗೆ ಭಾರೀ ಪ್ರಮಾಣದ ಹಣ ವ್ಯಯವಾಗಿದ್ದು, ಹೊಸ ಆವಿಷ್ಕಾರಗಳಿಗೆ ಹಣವಿಲ್ಲದೇ ನಾಸಾ ಸರ್ಕಾರದತ್ತ ದೃಷ್ಟಿ ನೆಟ್ಟು ಕುಳಿತಿದೆ. ಅಲ್ಲದೇ ಹಬಲ್‌ಗೂ ಹೆಚ್ಚಿನ ಸಾಮರ್ಥ್ಯವುಳ್ಳ ಜೇಮ್ಸ್ ವೆಬ್ ಟೆಲಿಸ್ಕೋಪ್‌ಗಾಗಿ ನಾಸಾ 10 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದೆ.

Reason behind NASA apathy towards new projects

ಇನ್ನು ನಾಸಾದ ಭವಿಷ್ಯದ ಯೋಜನೆಗಳಿಗೆ ಏನಿಲ್ಲವೆಂದರೂ 120 ರಿಂದ 200 ಬಿಲಿಯನ್ ಯುಎಸ್ ಡಾಲರ್‌ನಷ್ಟು ಹಣದ ಅವಶ್ಯಕತೆ ಇದ್ದು, ಪ್ರಮುಖವಾಗಿ ಮಂಗಳ ಗ್ರಹಕ್ಕೆ ಮಾನವ ಸಹಿತ ನೌಕೆ ಕಳುಹಿಸುವ ತನ್ನ ವಾಗ್ದಾನವನ್ನು ನಾಸಾ ಉಳಿಸಿಕೊಳ್ಳಬೇಕಿದೆ.

ಆದರೆ ಸದ್ಯ ಷ್ಕ್ರೀಯವಾಗಿರುವ ಟೆಲಿಸ್ಕೋಪ್‌ಗಳಿಂದ ವಿಶ್ವದ ಅಧ್ಯಯನ ಸಾಧ್ಯವಿಲ್ಲವಾಗಿದ್ದು, ಇವುಗಳನ್ನು ಬದಲಸಿ ಹೊಸ ಮತ್ತು ಅತ್ಯಾಧುನಿಕ ಟೆಲಿಸ್ಕೋಪ್‌ಗಳನ್ನು ನಿಯೋಜಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios