ವಾಷಿಂಗ್ಟನ್(ನ.08): ಖಗೋಳ ಪ್ರೀಯರಿಗೆ ನಾಸಾ ಸಂತಸದ ಸುದ್ದಿಯೊಂದನ್ನು ನೀಡಿದೆ. ಅನ್ಯ ಗ್ರಹಕಾಯದ ನೈಸರ್ಗಿಕ ಅವಶೇಷಗಳನ್ನು ನೋಡಬಯಸುವವರಿಗೆ ನಾಸಾ ಮೃಷ್ಠಾನ್ಹ ಭೋಜನವನ್ನೇ ಉಣಬಡಿಸಿದೆ.

ಹೌದು, ಇದುವರೆಗೂ ಗುಪ್ತವಾಗಿ ಇಡಲಾಗಿದ್ದ ಚಂದ್ರನ ಮೇಲ್ಮೈ ಕಲ್ಲೊಂದನ್ನು ನಾಸಾ ಇದೀಗ ಬಿಡುಗಡೆ ಮಾಡಿದೆ. 1977ರ ಅಪೊಲೋ 17 ಮಿಶನ್ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯಿಂದ ತರಲಾದ ಬೃಹತ್ ಕಲ್ಲಿನ ತುಣುಕೊಂದನ್ನು ನಾಸಾ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ.

ಥ್ರೋ ಬ್ಯಾಕ್: ಹೀಗಿದ್ದರು ಅಪೋಲೊ-11 ಹೀರೋಗಳು!

ನಾಸಾದ ಅಪೊಲೋ ನೆಕ್ಸ್ಟ್-ಜನರೇಷನ್ ಸ್ಯಾಂಪಲ್ ಅನಾಲಿಸಿಸ್ (ಎಎನ್‌ಜಿಎಸ್‌ಎ) ಉಪಕ್ರಮದ ಅಂಗವಾಗಿ ಚಂದ್ರನ ಕಲ್ಲಿನ ಮಾದರಿಗಳನ್ನು ನಾಸಾ ತೆರೆದೆಟ್ಟಿದೆ.

ಚಂದ್ರನಿಂದ ಸಂಗ್ರಹಿಸಲಾಗುವ ಭವಿಷ್ಯದ ಮಾದರಿಗಳನ್ನು ಅಧ್ಯಯನ ಮಾಡಲು ಅನುವಾಗುವಂತೆ 1977ರ ಅಪೊಲೋ ಮೂನ್ ಮಿಶನ್ ನಿಂದ ಹೊತ್ತು ತರಲಾದ ಕಲ್ಲಿನ ಮಾದರಿಯನ್ನು ನಾಸಾ ಬಿಡುಗಡೆ ಮಾಡಿದೆ.

ಚಂದ್ರನ ಮಣ್ಣು ತಂದವನೊಬ್ಬ, ಮುಟ್ಟಿದವ ಮತ್ತೊಬ್ಬ: ಫೋಟೋಗ್ರಾಫರ್ ಅಬ್ಬಬ್ಬ!

ಈ ಕುರಿತು ಮಾಹಿತಿ ನೀಡಿರುವ ನಾಸಾದ ಖಗೋಳ ಸಾಮಗ್ರಿಗಳ ಮೇಲ್ವಿಚಾರಕ ಫ್ರಾನ್ಸಿಸ್ ಮೆಕ್‌ಕಬ್ಬಿನ್, ಚಂದ್ರನ ಬಗೆಗಿನ ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಈ ನಡೆ ಸಾಕ್ಷಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಚಂದಮಾಮನ ಮುತ್ತಿಟ್ಟು 50 ವರ್ಷ: ನಾಸಾ ಸಂಭ್ರಮಾಚರಣೆ!

ನಮ್ಮ ವೈಜ್ಞಾನಿಕ ತಂತ್ರಜ್ಞಾನಗಳು ಸಾಕಷ್ಟು ಸುಧಾರಿಸಿದ್ದು, ಕಳೆದ 50 ವರ್ಷಗಳಲ್ಲಿ ವಿಶ್ಲೇಷಿಸಲಾಗದ ಆಧುನಿಕ ಮಾದರಿಗಳಲ್ಲಿ ಇವುಗಳ ಅಧ್ಯಯನ  ಇದೀಗ ಸಾಧ್ಯ ಎಂದು  ಮೆಕ್‌ಕಬ್ಬಿನ್ ಅಭಿಪ್ರಾಯಪಟ್ಟಿದ್ದಾರೆ.

ಈ ಸ್ಯಾಂಪಲ್’ಗಳನ್ನು ಅಧಯಯನ ಮಾಡಲು ನಾಸಾ 3 ಡಿ ಇಮೇಜಿಂಗ್, ಮಾಸ್ ಸ್ಪೆಕ್ಟ್ರೋಮೆಟ್ರಿ ಮತ್ತು ಅಲ್ಟ್ರಾ-ಹೈ ರೆಸಲ್ಯೂಷನ್ ಮೈಕ್ರೊಟೊಮಿ ಮುಂತಾದ ತಂತ್ರಜ್ಞಾನಗಳನ್ನು ಬಳಸಲಿದೆ.

ಬದಲಾಯ್ತು ಚಂದ್ರನ ಆಯಸ್ಸು: ಹೊಸ ಲೆಕ್ಕಾಚಾರದ ಡಿಟೇಲ್ಸು!

ಅಲ್ಲದೇ ಈ ಮಾದರಿಗಳ ಅಧ್ಯಯನದಿಂದಾಗಿ ಚಂದ್ರನ ಮೇಲ್ಮೈಯ ಆಳವಾದ ಅಧ್ಯಯನ, ಚಂದ್ರನ ಮೇಲ್ಮೈಯಲ್ಲಿ ಭೂಕುಸಿತಗಳು ಹೇಗೆ ಸಂಭವಿಸುತ್ತವೆ ಮತ್ತು ಕಾಲಾನಂತರದಲ್ಲಿ ಚಂದ್ರನ ಹೊರ ಪದರ ಹೇಗೆ ವಿಕಸನಗೊಂಡಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭಿಸಲಿದೆ.