ಚಂದ್ರನ ಅಂಗಳಕ್ಕಿಳಿದು ಬರೋಬ್ಬರಿ 50 ವರ್ಷ ಭರ್ತಿ| ಅಪೋಲೊ50 ಸಂಭ್ರಮಾಚರಣೆಗೆ ನಾಸಾ ಭರದ ಸಿದ್ಧತೆ| ಜುಲೈ 20, 1969 ರಂದು ಚಂದ್ರನ ಮೇಲ್ಮೈ ಮೇಲೆ ಇಳಿದಿದ್ದ ಅಪೋಲೊ-11 ನೌಕೆ| ನೀಲ್ ಆರ್ಮ್’ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಹಾಗೂ ಬಜ್ ಆಲ್ಡ್ರಿನ್ಸ್| ಅಪೋಲೊ-11 ಗಗನಯಾನಿಗಳ ಫೋಟೋ ಬಿಡುಗಡೆ ಮಾಡಿದ ನಾಸಾ|
ಫೋಟೋ: ಮೖಕೆಲ್ ಕಾಲಿನ್ಸ್(ಎಡ), ನೀಲ್ ಆರ್ಮ್‌ಸ್ಟ್ರಾಂಗ್(ಮಧ್ಯ) ಹಾಗೂ ಬಜ್ ಆಲ್ಡ್ರಿನ್(ಬಲ)
ವಾಷಿಂಗ್ಟನ್(ಜು.14): ಅದು ಜುಲೈ 20, 1969. ಗಗನಯಾನಿಗಳನ್ನು ಹೊತ್ತ ನಾಸಾದ ಅಪೋಲೊ 11 ನೌಕೆ, ಚಂದ್ರನ ಮೇಲ್ಮೈ ಮೇಲೆ ಇಳಿದು ಇತಿಹಾಸ ಸೃಷ್ಟಿಸಿತ್ತು. ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಅಪೋಲೊ 11 ನೌಕೆಯಿಂದ ಇಳಿದು ಚಂದ್ರನ ನೆಲ ಮುಟ್ಟಿದ ಮೊದಲ ಮಾನವ ಎಂಬ ಖ್ಯತಿಗೆ ಪಾತ್ರರಾದರು.
ನಾಸಾ ಇದೀಗ ಅಪೋಲೊ 11 ಯಶಸ್ವಿ ಯೋಜನೆಯ 50ನೇ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಇದೇ ಜುಲೈ 20, 2019ರಂದು ನಾಸಾ ಅಪೋಲೊ ಮೀಶನ್’ನ 50ನೇ ವರ್ಷದ ಸಂಭ್ರಮಾಚರಣೆ ಅದ್ದೂರಿಯಿಂದ ಆಚರಿಸಲಿದೆ.
ಈ ಹಿನ್ನೆಲೆಯಲ್ಲಿ ಅಪೋಲೊ 11 ಮಿಶನ್’ನ ಗಗನಯಾನಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಹಾಗೂ ಬಜ್ ಆಲ್ಡ್ರಿನ್ಸ್ ಅವರ ಫೋಟೋವೊಂದನ್ನು ಬಿಡುಗಡೆ ಮಾಡಿದೆ.
ಅಪೋಲೊ 11 ಮಿಶನ್ ಉಡಾವಣೆ(ಜು.16, 1969)ಗೂ ಮುನ್ನ ಸಿಮ್ಯುಲೇಟರ್ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಈ ವೇಳೆ ಕೊನೆಯ ಪ್ರಯೋಗಕ್ಕೆ ನೀಲ್ ಆರ್ಮ್‌ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಹಾಗೂ ಬಜ್ ಆಲ್ಡ್ರಿನ್ ಹಾಜರಾದ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ.
