Asianet Suvarna News

ಆಗಸದಲ್ಲಿ ನಕ್ಷತ್ರ ಸ್ಫೋಟ: ನಾಸಾ ಸೆರೆಹಿಡಿದ ಅಪರೂಪದ ಆಟ!

ಕಾಂಪ್ಯಾಕ್ಟ್ ಯುನಿವರ್ಸ್'ನಲ್ಲಿ ಘಟಿಸುವ ವಿದ್ಯಮಾನಗಳು ಅಸಂಖ್ಯಾತ| ಕಾಂಪ್ಯಾಕ್ಟ್ ಯುನಿವರ್ಸ್ ಸಿದ್ಧಾಂತದಡಿ ಕಾರ್ಯ ನಿರ್ವಹಿಸುತ್ತಿರುವ ಖಗೋಳ ಸಂಸ್ಥೆಗಳು| ಬಾಹ್ಯಾಕಾಶದಲ್ಲಿ ಬೃಹತ್ ಥರ್ಮೋನ್ಯೂಕ್ಲಿಯರ್ ಸ್ಫೋಟ ಗುರುತಿಸಿದ ಅಮೆರಿಕದ ನಾಸಾ| ಸೂಪರ್‌ನೋವಾ ವಿದ್ಯಮಾನ ಪತ್ತೆ ಹಚ್ಚಿದ ನಾಸಾ| ಬಾಹ್ಯಾಕಾಶಲ್ಲಿ ಭಾರೀ ಪ್ರಮಾಣದಲ್ಲಿ ಥರ್ಮೋನ್ಯೂಕ್ಲಿಯರ್ ಶಕ್ತಿ ಬಿಡುಗಡೆ| ನಾಕ್ಷತ್ರಿಕ ಅವಶೇಷಗಳು ಬಾಹ್ಯಾಕಾಶದಲ್ಲಿ ಹರಡಿರುವ ಆತಂಕ ವ್ಯಕ್ತಪಡಿಸಿದ ನಾಸಾ|

NASA Detect Huge Thermonuclear Blast Deep in Space
Author
Bengaluru, First Published Nov 12, 2019, 4:15 PM IST
  • Facebook
  • Twitter
  • Whatsapp

ವಾಷಿಂಗ್ಟನ್(ನ.12): ನಿಮಗೆಲ್ಲಾ ಗ್ಲೋಬಲ್ ವಿಲೇಜ್ ಕಾನ್ಸೆಪ್ಟ್ ಗೊತ್ತಿರಬೇಕಲ್ಲ. ಒಂದು ಮೂಲೆಯಿಂದ ಮತ್ತೊಂದು ಮೂಲೆಯನ್ನು ಕ್ಷಣಾರ್ಧದಲ್ಲಿ ಒಂದುಗೂಡಿಸುವ ತಂತ್ರಜ್ಞಾನದ ಸಾಮರ್ಥ್ಯ ಇಡೀ ಜಗತ್ತನ್ನು ಒಂದು ಹಳ್ಳಿಯ ಗಾತ್ರದಷ್ಟು ಕುಬ್ಜವನ್ನಾಗಿಸಿದೆ. ಇದಕ್ಕೆ ಗ್ಲೋಬಲ್ ವಿಲೇಜ್ ಎಂದು ಕರೆಯುತ್ತಾರೆ.

ಅಂತೆಯೇ ಖಗೋಳ ಜಗತ್ತು ಇದೀಗ ಕಾಂಪ್ಯಾಕ್ಟ್ ಯುನಿವರ್ಸ್ ಎಂಬ ಹೊಸ ಸಿದ್ಧಾಂತವನ್ನು ನಂಬಿ ಅದರತ್ತ ಕಾರ್ಯೋನ್ಮುಖವಾಗಿದೆ. ಇಡೀ ಬ್ರಹ್ಮಂಡವನ್ನೇ ಕುಬ್ಜವನ್ನಾಗಿಸಿ ಅಧ್ಯಯನ ನಡೆಸುವ ಹೊಸ ಪರಿ ಇದು.

ಕಾಂಪ್ಯಾಕ್ಟ್ ಯುನಿವರ್ಸ್ ಸಿದ್ಧಾಂತದನ್ವಯ, ಇಡೀ ವಿಶ್ವದಲ್ಲಿರುವ ಎಲ್ಲ ಗ್ಯಾಲಕ್ಸಿಗಳೂ, ನಕ್ಷತ್ರಗಳೂ ಹಾಗೂ ಗ್ರಹಕಾಯಗಳು ಒಂದಕ್ಕೊಂದು ಸಂಬಂಧ ಹೊಂದಿದ್ದು, ವಿಶ್ವದ ಯಾವುದೇ ಮೂಲೆಯಲ್ಲಿ ಸಂಭವಿಸುವ ಖಗೋಳೀಯ ವಿದ್ಯಮಾನ ಮತ್ತೊಂದರ ಮೇಲೆ ಪರಿಣಾಮ ಬೀರಬಲ್ಲ ಸಾಮರ್ಥ್ಯ ಹೊಂದಿದೆ ಎಂದು ನಂಬಲಾಗಿದೆ.

ನಾಸಾ ಎಲೆಕ್ಟ್ರಿಕ್ ವಿಮಾನ: ಸುಲಭ ಇದೀಗ ಆಕಾಶಯಾನ!

ಅದರಂತೆ ಅಮೆರಿಕದ ಖಗೋಳ ಅನ್ವೇಷಣಾ ಸಂಸ್ಥೆ ನಾಸಾ ಬಾಹ್ಯಾಕಾಶದಲ್ಲಿ ಬೃಹತ್ ಥರ್ಮೋನ್ಯೂಕ್ಲಿಯರ್ ಸ್ಫೋಟವನ್ನು ಗುರುತಿಸಿದ್ದು, ಅಗಾಧ ಪ್ರಮಾಣದ ಶಕ್ತಿಯ ಹೊರಸೂಸುವಿಕೆಯಿಂದ ಆತಂಕದಲ್ಲಿದೆ.

ನಕ್ಷತ್ರವೊಂದರ ಸ್ಫೋಟಿಸುವ ವಿದ್ಯಮಾನವನ್ನು ಸೂಪರ್‌ನೋವಾ ಎಂದು ಕರೆಯಲಾಗುತ್ತದೆ. ಇದನ್ನು ನಕ್ಷತ್ರದ ಅಂತ್ಯ ಅಥವಾ ಸಾವು ಎಂತಲೂ ಪರಿಗಣಿಸಲಾಗುತ್ತದೆ.

ಅದರಂತೆ ದೂರದ ಬಾಹ್ಯಾಕಾಶದಲ್ಲಿ ಸಂಭವಿಸಿರುವ ಸೂಪರ್‌ನೋವಾ ವಿದ್ಯಮಾನದಿಂದಾಗಿ ಬಾಹ್ಯಾಕಾಶಲ್ಲಿ ಭಾರೀ ಪ್ರಮಾಣದಲ್ಲಿ ಥರ್ಮೋನ್ಯೂಕ್ಲಿಯರ್ ಶಕ್ತಿ ಪಸರಿಸಿರುವ ಆತಂಕವನ್ನು ನಾಸಾ ಹೊರಗೆಡವಿದೆ.

ಸ್ಫೋಟಗೊಂಡಿರುವ ನಕ್ಷತ್ರ ಕಪ್ಪುರಂಧ್ರವಾಗುವಷ್ಟು ಸಾಮರ್ಥ್ಯ ಹೊಂದಿಲ್ಲ ಎನ್ನಲಾಗಿದೆ. ಈ ಪರಿಣಾಮವಾಗಿ ನಾಕ್ಷತ್ರಿಕ ಅವಶೇಷಗಳು ಬಾಹ್ಯಾಕಾಶದಲ್ಲಿ ಹರಡಿದೆ ಎಂದು ನಾಸಾ ತಿಳಿಸಿದೆ.

ನಾಸಾ ಹೊರಗೆಡವಿದ ಚಂದ್ರನ ಕಲ್ಲು: ನೋಡಿದರೆ ಕಚ್ಚುವಿರಿ ಹಲ್ಲು!

ಸ್ಫೋಟದ ತೀವ್ರತೆ ಅದೆಷ್ಟು ಅಗಾಧವಾಗಿತ್ತೆಂದರೆ ಕೇವಲ 20 ಸೆಕೆಂಡ್‌ಗಳಲ್ಲಿ ನಕ್ಷತ್ರದಿಂದ ಹೊರಹೊಮ್ಮಿದ ಶಕ್ತಿಯಷ್ಟೇ ಪ್ರಮಾಣದ ಶಕ್ತಿಯನ್ನು ಹೊರಹಾಕಲು ನಮ್ಮ ಸೂರ್ಯನಿಗೆ 10 ದಿನಗಳಾದರೂ ಬೇಕು ಎಂದು ನಾಸಾದ ಖಗೋಳ ಭೌತಶಾಸ್ತ್ರಜ್ಞ ಪೀಟರ್ ಬಲ್ಟ್ ತಿಳಿಸಿದ್ದಾರೆ.

ನಕ್ಷತ್ರದ ಆಂತರ್ಯದಲ್ಲಿ ಹಿಲಿಯಂ ಪ್ರಮಾಣ ಕುಸಿದ ಪರಿಣಾಮ ಥರ್ಮೋನ್ಯೂಕ್ಲಿಯರ್ ಸ್ಫೋಟ ಸಂಭವಿಸಿದ್ದು, ಸಾವು ಕಂಡಿರುವ ನಕ್ಷತ್ರ ಇದೀಗ ಕೇವಲ ಇಂಗಾಲದ ಚೆಂಡಿನಂತೆ ಅದ್ತಿತ್ವದಲ್ಲಿದೆ ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios