ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಹಿನ್ನೆಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಚೀನಾ ಮೂಲದ ವಿಡಿಯೋ ಆ್ಯಪ್ ಟಿಕ್ ಟಾಕ್‌ಗೆ ಇದೀಗ ಮತ್ತೆ ಅನುಮತಿ ಸಿಕ್ಕಿದೆ. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ನಿಷೇಧವನ್ನು ತೆರವುಗೊಳಿಸಿದೆ.

ಟಿಕ್ ಟಾಕ್ ಆ್ಯಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನ ಮಧುರೈ ವಿಭಾಗೀಯ ಪೀಠದಲ್ಲಿ ಹಿರಿಯ ವಕೀಲರೊಬ್ಬರು  ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಟಿಕ್ ಟಾಕ್ ಆ್ಯಪನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ಹೈಕೋರ್ಟ್ ಆದೇಶದ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಆ್ಯಪ್ ಡೌನ್‌ಲೋಡ್ ಮಾಡುವ ಅವಕಾಶ ತೆಗೆದುಹಾಕಲಾಗಿತ್ತು.

ಟಿಕ್ ಟಾಕ್ ಆ್ಯಪ್ ಮೂಲಕ ವಿಶೇಷ ವಿಡಿಯೋಗಳನ್ನು ರಚಿಸಿ, ಶೇರ್ ಮಾಡಬಹುದಾಗಿದ್ದು, ಯುವಸಮೂಹದಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿತ್ತು.  ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ ಎಂದು ಅಂದಾಜಿಲಾಗಿದೆ. 

ಟಿಕ್ ಟಾಕ್ ವಿರುದ್ಧ ಕಾನೂನು ಸಮರ ಸಾರಲು ಕರ್ನಾಟಕದ ಮಹಿಳಾ ಆಯೋಗವು ಕೂಡಾ ಮುಂದಾಗಿತ್ತು.  ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಲಾಗುತ್ತಿದೆ, ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಲು ಮಹಿಳಾ ಆಯೋಗ ಚಿಂತನೆ ನಡೆಸಿತ್ತು.

ಇದನ್ನೂ ಓದಿ: Tik Tok ಮೂಲಕ ಮೋದಿ ಸರ್ಕಾರವನ್ನು ಕಾಲೆಳೆದ ರಮ್ಯಾ ಮೇಡಂ..!