ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ಆರೋಪ: ಟಿಕ್ ಟಾಕ್ ಬ್ಯಾನ್ ಮಾಡಲು ಆದೇಶ!

ಮಕ್ಕಳ ಅಶ್ಲೀ ಚಿತ್ರಕ್ಕೆ ಪಚ್ರೋದನೆ ನೀಡುತ್ತಿರುವ ಟಿಕ್ ಟಾಕ್ ಆಪ್| ಟಿಕ್ ಟಾಕ್ ಆಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ| ಹಿರಿಯ ವಕೀಲ ಮುತ್ತು ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ| ಮದ್ರಾಸ್ ಹೈಕೋರ್ಟ್ ನ ಮಧುರೈ ಬೆಂಚ್ ನಲ್ಲಿ ವಿಚಾರಣೆ|

Madras High Court To Centre To ban TikTok App

ಚೆನ್ನೈ(ಏ.04): ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುವ ಚೀನಾ ಮೂಲದ ವಿಡಿಯೋ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ಟಿಕ್ ಟಾಕ್ ಆಪ್ ಮೂಲಕ ವಿಶೇಷ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದ್ದು, ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ.

ಆದರೆ ಟಿಕ್ ಟಾಕ್ ಆಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್ ನ ಮಧುರೈ ವಿಭಾಗೀಯ ಪೀಠದಲ್ಲಿ ಹಿರಿಯ ವಕೀಲ ಮತ್ತು ಕುಮಾರ್ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡಿಸಿದ ಮದ್ರಾಸ್ ಹೈಕೋರ್ಟ್, ಟಿಕ್ ಟಾಕ್ ಆಪ್ ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುತ್ತಿದ್ದು, ಇದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

Latest Videos
Follow Us:
Download App:
  • android
  • ios