ನವದೆಹಲಿ, (ಫೆ.14): ಟಿಕ್ ಟಾಕ್ ಮಾಡುವುದು ಈಗಿನ ಫ್ಯಾಶನ್ ಆಗಿದೆ. ದೊಡ್ಡವರಿಂದ ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಾರೆ.

ಈಗ ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗ ಮುಖ್ಯಸ್ಥೆ ರಮ್ಯಾ ಕೂಡ  ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಚೀನಾದ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.

ಕುದುರೆ ಬಾಲ, ಕುಂಟು ಕತ್ತೆ.. ಕಾಲೆಳೆಯಲು ಹೋಗಿ ಕೆಳಕ್ಕೆ ಬಿದ್ದ ರಮ್ಯಾ!

ಕೇಂದ್ರ ಸರಕಾರವನ್ನು  ‘ಭಾರತೀಯ ಜೂಟಿ ಪಾರ್ಟಿ’(ಭಾರತೀಯ ಸುಳ್ಳಿನ ಪಕ್ಷ) ಎಂದು ಕಾಳೆಲೆದಿದ್ದು, ‘ಭಾರತೀಯ ಸುಳ್ಳಿನ ಪಕ್ಷ’ದ ಭರವಸೆಗಳು ಇದೇ ರೀತಿಯದ್ದಾಗಿವೆ ಎಂದು ಕೇಂದ್ರ ಸರ್ಕಾರವನ್ನು  ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋವನ್ನು  ರಮ್ಯಾ ಫೆಬ್ರವರಿ 13ರಂದು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.