ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಚೀನಾ ಆ್ಯಪ್ ನಿಷೇಧದ ಬೆನ್ನಲ್ಲೇ, ಭಾರತದ ದೇಸಿ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್ ರೊಪೊಸೋಗೆ ಜನರು ಮೊರೆ ಹೋಗಿದ್ದಾರೆ.

Made in India Roposo short video app become popular after tiktok ban

ಬೆಂಗಳೂರು(ಜೂ.30): ಭಾರತ ಸರ್ಕಾರ ಸೋಮವಾರ ಚೀನಾದ 59 ಆ್ಯಪ್ ಗಳನ್ನು ನಿಷೇಧ ಮಾಡಿದೆ. ರಾಷ್ಟ್ರೀಯತೆ ಭದ್ರತೆ ಮತ್ತು ಭಾರತದ ಸುರಕ್ಷತೆ ಬೆದರಿಕೆಯನ್ನೊಡ್ಡುವಂತಹ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣಕ್ಕೆ ಈ ಆ್ಯಪ್ ಗಳನ್ನು ನಿಷೇಧಿಸಲಾಗಿದೆ. ಇವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯನ್ನು ಉಂಟು ಮಾಡುತ್ತಿದ್ದವು. ಈ ಕಾರಣದಿಂದ ಟಿಕ್‍ಟಾಕ್ ಸೇರಿದಂತೆ ಆ್ಯಪ್ ಗಳು ಭಾರತಕ್ಕೆ ಗುಡ್ ಬೈ ಹೇಳಿವೆ.

59 ಚೀನಾ ಆ್ಯಪ್‌ ಜೊತೆ Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಇಲ್ಲಿದೆ ಉತ್ತರ!

ಟಿಕ್‌ಟಾಕ್ ಆ್ಯಪ್ ಬ್ಯಾನ್ ಬೆನ್ನಲ್ಲೇ  ಮೇಡ್ ಇನ್ ಇಂಡಿಯಾದ ರೊಪೊಸೋ ಶಾರ್ಟ್ ವಿಡಿಯೋ ಆ್ಯಪ್ ಹೆಚ್ಚು ಜನಪ್ರಿಯವಾಗಿದೆ. . ಇದೀಗ 65 ದಶಲಕ್ಷಕ್ಕೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದು, ದೇಶದಲ್ಲಿ ನಿರ್ವಿವಾದದ ಸಾಮಾಜಿಕ ವಿಡಿಯೋ ಆ್ಯಪ್ ಗಳ ಪೈಕಿ ಮೊದಲ ಸ್ಥಾನದಲ್ಲಿ ನಿಂತಿದೆ. ಇತ್ತೀಚಿನ ಸಮಯಗಳಲ್ಲಿ ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಸಾಮಾಜಿಕ ಆ್ಯಪ್ ಆಗಿ ಹೊರಹೊಮ್ಮಿದೆ. ಸೋನಂ ವಾಂಗ್ ಚುಂಕ್ ಸೇರಿದಂತೆ ಹಲವಾರು ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ರೊಪೊಸೊಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!.

ಇದುವರೆಗೆ ಟಿಕ್ ಟಾಕ್ ಬಳಕೆದಾರರು ಮತ್ತು ಭಾರೀ ಪ್ರಮಾಣದ ಫಾಲೋವರ್ ಗಳು ನಿಷೇಧದ ನಂತರ ಇದೀಗ ರೊಪೊಸೊಗೆ ಮೊರೆ ಹೋಗುತ್ತಿದ್ದಾರೆ. ಟಿಕ್ ಟಾಕ್ ನಲ್ಲಿ 9.5 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ಪ್ರೇಮ್ ವತ್ಸ್ ಮತ್ತು 9 ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದ ನೂರ್ ಅಫ್ಷಾನ್ ಸೇರಿದಂತೆ ಹಲವಾರು ಮಂದಿ ಪ್ರಭಾವಿಗಳು ರೊಪೊಸೊ ಕಡೆಗೆ ವಾಲಿದ್ದಾರೆ. ಭಾರತ ಸರ್ಕಾರ ಆರಂಭಿಸಿರುವ ನಾಗರಿಕ ಪಾಲ್ಗೊಳ್ಳುವಿಕೆ ಪ್ಲಾಟ್ ಫಾರ್ಮ್ ಆಗಿರುವ MyGov ಈಗಾಗಲೇ ರೊಪೊಸೊದಲ್ಲಿದೆ.

ರೊಪೊಸೊದೊಂದಿಗೆ ಬಳಕೆದಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಒಂದು ಹೊಣೆಗಾರಿಕೆ ಮನೋರಂಜನೆಯನ್ನು ಎಂಜಾಯ್ ಮಾಡಲಾರಂಭಿಸಿದ್ದಾರೆ. ರೊಪೊಸೊ 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, 14 ದಶಲಕ್ಷಕ್ಕೂ ಅಧಿಕ ವಿಡಿಯೋ ಸೃಷ್ಟಿಕರ್ತರು ಮತ್ತು ತಿಂಗಳಿಗೆ 80 ದಶಲಕ್ಷಕ್ಕೂ ಅಧಿಕ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ.

ನಿಜವಾದ ಭಾರತೀಯನಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಹುದೊಡ್ಡ ವೇದಿಕೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ನಾವು ಪರಿಶುದ್ಧವಾದ ಮತ್ತು ತತ್ತ್ವದ ಆಧಾರದಲ್ಲಿ ಈ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಪ್ರತಿಯೊಬ್ಬ ಪ್ರತಿಭಾನ್ವಿತ ಭಾರತೀಯನೂ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿ ಕ್ಷಿಪ್ರವಾಗಿ ಬೆಳೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ರೊಪೊಸೊ ಸಹ-ಸಂಸ್ಥಾಪಕ ಮಾಯಾಂಕ್ ಭಂಗಾಡಿಯಾ ಹೇಳಿದ್ದಾರೆ.`

ಭಾರತೀಯ ಮನಗಳ ಉತ್ಪನ್ನವಾಗಿರುವ ರೊಪೊಸೊವನ್ನು ಮೂವರು ಐಐಟಿ ದೆಹಲಿ ಇಂಜಿನಿಯರ್ ಗಳು ಸ್ಥಾಪಿಸಿದ್ದಾರೆ ಮತ್ತು ಮಾಲೀಕತ್ವವನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಭಾರತೀಯನು ತನ್ನ ಪ್ರತಿಭೆಯನ್ನು ವಿನೂತನ ರೀತಿಯಲ್ಲಿ ಪ್ರದರ್ಶಿಸಲು ಈ ವೇದಿಕೆಯನ್ನು ಆರಂಭಿಸಲಾಗಿದೆ. ಈ ಆ್ಯಪ್ ಅನ್ನು ಸುಲಭವಾಗಿ ಬಳಸಬಹುದಾಗಿದ್ದು, ಇದರಲ್ಲಿ ಶಕ್ತಿಶಾಲಿ ವಿಡಿಯೋ ಎಡಿಟಿಂಗ್ ಟೂಲ್ ಗಳು ಇವೆ. ಹಾಲಿ ಇರುವ ಸಮುದಾಯದ ಬಳಕೆದಾರರನ್ನು ಗುರುತಿಸಬಹುದಾಗಿದ್ದು, ಅವರೊಂದಿಗೆ ತಮ್ಮದೇ ಆದ ಮಾತೃ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಈ ಮೂಲಕ ರೊಪೊಸ್ ಭಾರತದ ನಂಬರ್ ಒನ್ ಶಾರ್ಟ್ ವಿಡಿಯೋ ಆ್ಯಪ್ ಆಗಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಶಾರ್ಟ್ ವಿಡಿಯೋ ಆ್ಯಪ್ ಆಗಿರುವ ರೊಪೊಸ್ ಭಾರತದಲ್ಲಿ ಈ ರೂಪಾಂತರವನ್ನು ಮುನ್ನಡೆಸಲು ಸರ್ವಸನ್ನದ್ಧವಾಗಿದೆ. 65 ದಶಲಕ್ಷ ಭಾರತೀಯ ಬಳಕೆದಾರರ ಪ್ರೀತಿ ಮತ್ತು ವಿಶ್ವಾಸವನ್ನು ಮುಂದುವರಿಸಲು ಪೂರಕವಾದ ಕ್ರಮಗಳನ್ನು ರೊಪೊಸ್ ತೆಗೆದುಕೊಳ್ಳಲಿದೆ ಎಂದು ರೊಪೊಸ್ ಒಡೆತನವನ್ನು ಹೊಂದಿರುವ ಇನ್ ಮೊಬಿ ಗ್ರೂಪ್ ಸಂಸ್ಥಾಪಕ ಮತ್ತು ಸಿಇಒ ನವೀನ್ ತಿವಾರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios