59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!

ಕೇಂದ್ರ ಸರ್ಕಾರದಿಂದ ಮತ್ತೊಂದು ದಿಟ್ಟ ನಿರ್ಧಾರ/  5 ಜಿ ಸೇವೆಯಿಂದ ಚೀನಾದ ಹುವೈ ಹೊರಕ್ಕೆ/ ಪ್ರಮುಖ ಸಚಿವರ ಸಭೆ/ ಅಮೆರಿಕದಲ್ಲಿ ಈಗಾಗಲೇ ಬ್ಯಾನ್ ಆಗಿರುವ ಹುವೈ

Union Top ministers discuss ban on Chinese Huawei 5G equipment

ನವದೆಹಲಿ(ಜೂ. 30)  ಕೇಂದ್ರ ಸರ್ಕಾರ ದೇಶಾದ್ಯಂತ  5 ಜಿ  ಸೇವೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.  ಚೀನಾದ  59 ಆ್ಯಪ್ ಗಳನ್ನು ನಿಷೇಧ ಮಾಡಿದ್ದು  5 ಜಿ ವಿಚಾರದಿಂದಲೂ ಚೀನಾ ಹೊರಗಿಡಲು ಯೋಜನೆ ರೂಪಿಸಿದೆ. 

ಚೀನಾ ಮೂಲದ ಹುವೈಗೆ ವಸ್ತುಗಳ ಬಳಕೆ ಮಾಡದೆ 5 ಜಿ  ಸೇವೆಗೆ ಸಿದ್ಧವಾಗುವ ಚಿಂತನೆ ನಡೆಸಿದೆ. ಕಾನೂನು ಬಾಹಿರವಾಗಿ ಭಾರತದ ಡೇಟಾ ಕದಿಯುತ್ತಿದ್ದ ಚೀನಾದ ಅಪ್ಲಿಕೇಶನ್ ಗಳ ನಿಷೇಧ ಮಾಡಿದ ನಂತರ ಪ್ರಮುಖ ಸಚಿವರು ಸಭೆ ನಡೆಸಿದ್ದು ಹುವೈ ಹೇಗೆ ಹೊರಗಿಡಬೇಕು ಎಂದು ಚರ್ಚೆ ಮಾಡಿದ್ದಾರೆ.

ಚೀನಾ ಆಪ್ ಬ್ಯಾನ್ ನಂತರ ಭಾರತದ ಅಪ್ಲಿಕೇಶನ್ ಗಳಿಗೆ ಜಾಕ್ ಪಾಟ್

ಕೊರೋನಾ ವೈರಸ್ ಕಾರಣಕ್ಕೆ  5 ಜಿ ವ್ಯವಸ್ಥೆ ನೀಡುವ ಕೆಲಸ ಒಂದು ವರ್ಷ ಮುಂದಕ್ಕೆ ಹೋಗಿದೆ ಎನ್ನಲಾಗಿದ್ದು ಸಭೆಯ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.  ಆದರೆ ಚೀನಾ ಮೂಲದ ಕಂಪನಿ ಹೊರಗಿಡುವ ಬಗ್ಗೆ ಚರ್ಚೆಯಾಗಿದೆ.

ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕದಲ್ಲಿ ಹುವೈ ಈಗಾಗಲೇ ಬ್ಯಾನ್ ಆಗಿದೆ.  ಯುಕೆ ಮತ್ತು ಭಾರತಕ್ಕೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯೊಂದಿಗೆ ಸಂಬಂಧ ಹೊಂದಿರುವ ಹುವೈ ಹೊರಗಿಡುವಂತೆ ಅಮೆರಿಕ ಮನವರಿಕೆ ಮಾಡಿಕೊಡುತ್ತಿದೆ. 

ಭಾರತ ಮತ್ತು ಚೀನಾ ಗಡಿಯಲ್ಲಿ ಸಂಘರ್ಷ ಆರಂಭವಾದಗಲೇ ಚೀನಾ ಮೂಲದ ಎಲ್ಲ ಕಂಪನಿಗಳನ್ನು ಹೊರಗೆ ಇಡುವಂತೆ ಕೂಗು ಕೇಳಿಬಂದಿತ್ತು. ಈಗ ಒಂದೊಂದೆ ಹೆಜ್ಜೆಯನ್ನು ಸರ್ಕಾರ ಇಡುತ್ತಿದೆ. 

Latest Videos
Follow Us:
Download App:
  • android
  • ios