59 ಚೀನಾ ಆ್ಯಪ್‌ ಜೊತೆ Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಇಲ್ಲಿದೆ ಉತ್ತರ!

ಚೀನಾ ಗಡಿ ಖ್ಯಾತೆ ಬೆನ್ನಲ್ಲೇ ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡೋ ಮೂಲಕ ಭಾರತ ಮತ್ತೊಂದು ಹೊಡೆತ ನೀಡಿದೆ. ಟಿಕ್‌ಟಾಕ್, ಶೇರ್ ಇಟ್ ಸೇರಿದಂತೆ ಹಲವು ಆ್ಯಪ್‌ಗಳು ಬ್ಯಾನ್ ಆಗಿವೆ. ಆದರೆ ವಿಡಿಯೋ ಮೀಟಿಂಗ್ ಆ್ಯಪ್ ಝೂಮ್ ಬ್ಯಾನ್ ಮಾಡಿಲ್ಲ. ಝೂಮ್ ಬಳಸದಂತೆ ಹೇಳಿದ್ದ ಸರ್ಕಾರ ಇದೀಗ ಬ್ಯಾನ್ ಮಾಡಿಲ್ಲ ಯಾಕೆ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದಕ್ಕೆ ಕಾರಣ ಇಲ್ಲಿದೆ

Why Indian govt not banned Zoom video conference platform here is the dovetails

ನವದೆಹಲಿ(ಜೂ.30):  ಚೀನಾ ಸೇನೆಯ ಪುಂಡಾಟ ಹೆಚ್ಚಾಗುತ್ತಿದ್ದಂತೆ ಭಾರತ ತಕ್ಕ ತಿರುಗೇಟು ನೀಡಿಲು ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದೆ. ಇದರ ಜೊತೆಗೆ ಭಾರತ ಸರ್ಕಾರ, ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡೋ ಮೂಲಕ ಮತ್ತೊಂದು ಹೊಡೆತ ನೀಡಿದೆ. ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ಹಲವರು ಝೂಮ್ ವಿಡಿಯೋ ಮೀಟಿಂಗ್ ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. 

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!...

ಕೇಂದ್ರ ಸರ್ಕಾರವೇ ಝೂಮ್ ಆ್ಯಪ್ ಬಳಸದಂತೆ ಸೂಚಿಸಿತ್ತು. ಇಷ್ಟೇ ಅದು ಚೀನಿ ಆ್ಯಪ್ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟಾಗಿಯೂ ಝೂಮ್ ಆ್ಯಪ್ ಬ್ಯಾನ್ ಪಟ್ಟಿಯಲ್ಲಿ ಇಲ್ಲ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶ್ನಿಸಿದ್ದಾರೆ. ಝೂಮ್ ಮಾತ್ರವಲ್ಲ ಪಬ್‌ಜಿ ಕೂಡ ಬ್ಯಾನ್ ಮಾಡಿಲ್ಲ ಯಾಕೆ ಎಂದು ಕೇಳಿದ್ದಾರೆ.

ಭಾರತದಲ್ಲಿ TikTok ಬ್ಯಾನ್: ಚೀನಾಗೆ 720 ಕೋಟಿ ಲಾಸ್!

ಝೂಮ್ ಚೀನಾ ಆ್ಯಪ್?
ಝೂಮ್ ಚೀನಾ ಆ್ಯಪ್ ಅಲ್ಲ. ಇದು ಅಮೆರಿಕದ ಕಂಪನಿ. ಝೂಮ್ ಆ್ಯಪ್ ಹುಟ್ಟು ಹಾಕಿದ್ದು ಚೀನಾ ಮೂಲದ ಅಮೆರಿಕ ಉದ್ಯಮಿ ಎರಿಕ್ ಯುಆನ್. ಇದರ ಪ್ರಧಾನ ಕಚೇರಿ ಇರುವುದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸೆಯಲ್ಲಿ. ಜೂಮ್ ಕಂಪನಿಯ ಸಿಇಓ ಆಗಿರುವ ಎರಿಕ್ ಯುಆನ್ ಅಮೆರಿಕ ಪೌರತ್ವ ಹೊಂದಿದ್ದಾರೆ.

ಆಗಾಗಲೇ ಎರಿಕ್ ಝೂಮ್ ಆ್ಯಪ್ ಚೀನಾದಲ್ಲ, ಇದು ಅಮೆರಿಕದ ಆ್ಯಪ್ ಎಂದು ಸ್ಪಷ್ಟಪಡಿಸಿದ್ದಾರೆ. ಝೂಮ್ ಆ್ಯಪ್ ಡಾಟಾ ಶೇಖರಣೆಯ ಸರ್ವರ್ ಇರುವುದು ಅಮೆರಿಕದಲ್ಲಿ. ಇಷ್ಟೇ ಅಲ್ಲ ಚೀನಾದಲ್ಲಿ ಶಾಖೆ ಹೊಂದಿರುವ ಈ ಆ್ಯಪ್ ಹೆಚ್ಚು ಚೀನಿಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಭಾರತದ ಸೈಬರ್ ಕಾರ್ಡಿನೇಟ್ ಸೆಂಟರ್ ಝೂಮ್ ಆ್ಯಪ್ ಬಳಕೆ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿತ್ತು. 

ಝೂಮ್ ಚೀನಾ ಆ್ಯಪ್ ಅಲ್ಲ.  ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ನಿಮಯ ಪಾಲಿಸಿರುವ ಝೂಮ್ ಆ್ಯಪ್‌ನ್ನು ಭಾರತ ಬ್ಯಾನ್ ಮಾಡಿಲ್ಲ. ಇನ್ನು ಪಬ್‌ಜಿ, ವ್ಯಾಟ್ಸಾಪ್ ಕೂಡ ಚೀನಾ ಆ್ಯಪ್‌ಗಳಲ್ಲ. ಪಬ್‌ಡಿ ಡೆವಲಪ್ ಮಾಡಿದ ವ್ಯಕ್ತಿ ಐರ್ಲೆಂಡ್‌ನ ಬ್ರೆಂಡನ್ ಗ್ರೀನಿ. ಸೌತ್ ಕೊರಿಯಾದ ವಿಡಿಯೋ ಗೇಮಿಂಗ್ ಕಂಪನಿಯಾದ ಬ್ಲೂಡಾಟ್‌ನ ಸಹೋದರ ಸಂಸ್ಥೆ ಪಬ್‌ಜಿ ಹೊರತಂದಿದೆ. ಪಬ್‌ಜಿ ಆಟಕ್ಕೆ ವಿಡಿಯೋ ಗೇಮ್ ಪಬ್ಲಿಶಿಂಗ್ ಪಾರ್ಟ್ನರ್ ಸಹಾಯವನ್ನು ಚೀನಾ ನೀಡುತ್ತಿದೆ.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ ಒಡೆತನದ ವ್ಯಾಟ್ಸಾಪ್ ಅಮೆರಿಕದ ಕಂಪನಿ. ಹೀಗಾಗಿ ಈ ಜನಪ್ರಿಯ ಆ್ಯಪ್‌ಗಳು ಬ್ಯಾನ್ ಆಗಿಲ್ಲ.     

Latest Videos
Follow Us:
Download App:
  • android
  • ios