ನವದೆಹಲಿ(ಡಿ.04): ಚಂದ್ರನ ದಕ್ಷಿಣ ದೃವದಲ್ಲಿ ಬಿದ್ದಿರುವ ಇಸ್ರೋದ ವಿಕ್ರಮ್ ಲ್ಯಾಂಡರ್‌ನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್‌ನ್ನು ಪತ್ತೆ ಹಚ್ಚಲು ನಾಸಾಗೆ ಚೆನ್ನೈ ಮೂಲದ ಇಂಜಿನಿಯರ್'ವೋರ್ವರು ಸಹಾಯ ಮಾಡಿದ್ದರು.

ಆದರೆ ವಿಕ್ರಮ್ ಲ್ಯಾಂಡರ್‌ನ್ನು ನಾಸಾಗಿಂತ ಮೊದಲೇ ನಮ್ಮ ಚಂದ್ರಯಾನ-2 ಆರ್ಬಿಟರ್ ಪತ್ತೆ ಮಾಡಿತ್ತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.

ಕೊನೆಗೂ ಪತ್ತೆಯಾಯ್ತು ವಿಕ್ರಮ್ ಲ್ಯಾಂಡರ್: ಫೋಟೋ ಬಿಡುಗಡೆಗೊಳಿಸಿದ ನಾಸಾ!

ನಾಸಾಗಿಂತ ಮೊದಲೇ ಚಂದ್ರಯಾನ-2ದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು. ಅಲ್ಲದೇ ಈ ಕುರಿತು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡಿತ್ತು ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ. ಆದರೆ ಸತತ ಪ್ರಯತ್ನಗಳ ಹೊರತಾಗಿಯೂ ಚಂದ್ರಯಾನ-2 ನೌಕೆಯಿಂದ ವಿಕ್ರಮ್ ಲ್ಯಾಂಡರ್‌ನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ನಾಸಾದ ಮೂನ್ ಮಿಷನ್ ಎಲ್‌ಆರ್‌ಒ (Lunar Reconnaissance Orbiter) ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಗುರುತಿಸಿ ಅದರ ಫೋಟೋಗಳನ್ನು ನಾಸಾ ನಿಯಂತ್ರಣ ಕೊಠಡಿಗೆ ರವಾನಿಸಿತ್ತು.

ಶಣ್ಮುಗ ಕಂಡ ಚಂದ್ರನ ಮೊಗ: ವಿಕ್ರಮ್ ಪತ್ತೆ ಹಚ್ಚಲು ನಾಸಾಗೆ ಸಹಕರಿಸಿದ ಭಾರತೀಯ!