ಚೆನ್ನೈ(ಡಿ.03): ಚಂದ್ರನ ದಕ್ಷಿಣ ದೃವದಲ್ಲಿ ಇಸ್ರೋದ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ನಾಸಾ ಚೆನ್ನೈ ಮೂಲದ ಇಂಜಿನಿಯರ್’ವೋರ್ವರ ಸಹಾಯ ಪಡೆದಿತ್ತು.

ಹೌದು, ಚೆನ್ನೈ ಮೂಲದ ಮೆಕಾನಿಕಲ್ ಇಂಜಿನಿಯರ್ ಶಣ್ಮುಗ ಸುಬ್ರಮಣಿಯನ್, ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ.

ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳದ ಫೋಟೋಗಳನ್ನು ಹಂಚಿಕೊಂಡಿದ್ದ ನಾಸಾ, ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡುವಂತೆ ಸಾವರ್ಜನಿಕರಲ್ಲಿ ಮನವಿ ಮಾಡಿತ್ತು.

ಅದರಂತೆ ನಾಸಾದ ಫೋಟೋಗಳನ್ನು ತಮ್ಮ ಲ್ಯಾಪ್’ಟಾಪ್ ಮೂಲಕ ಅಧ್ಯಯನ  ನಡೆಸಿದ್ದ ಶಣ್ಮುಗ, ಲ್ಯಾಂಡರ್ ಬಿದ್ದ ಕರಾರುವಕ್ಕು ಸ್ಥಳವನ್ನು ಪತ್ತೆ ಹಚ್ಚಲು ಯಶಸ್ವಿಯಾದರು.

ತಮ್ಮ ಅಧ್ಯಯನದ ಮಾಹಿತಿಯನ್ನು ಇಸ್ರೋ ಮತ್ತು ನಾಸಾದೊಂದಿಗೆ ಹಂಚಿಕೊಂಡಿದ್ದ ಶಣ್ಮುಗ ಅವರಿಗೆ, ನಾಸಾದಿಂದ ಬೆಂಬಲವೂ ದೊರೆತಿದ್ದು ವಿಶೇಷ.

ಇ-ಮೇಲ್ ಮೂಲಕ ನಾಸಾ ವಿಜ್ಞಾನಿಗಳನ್ನು ಸಂಪರ್ಕಿಸಿದ್ದ ಶಣ್ಮುಗ, ನಾಸಾ ಫೋಟೋಗಳ ತಮ್ಮ ತುಲನಾತ್ಮಕ ಅಧ್ಯಯನದ ಮಾಹಿತಿ ನೀಡಿದರು. ಈ ಮೂಲಕ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡಿದರು.

ಶಣ್ಮುಗ ಕಾರ್ಯವನ್ನು ಮೆಚ್ಚಿರುವ ನಾಸಾ, ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಶಣ್ಮುಗ ಪಾತ್ರ ಮಹತ್ವದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದೆ.