Invention: ಹಳ್ಳಿ ಹುಡುಗನಿಂದ ಗಣಿತದ ಮೂಲಕ್ರಿಯೆ ತೋರಿಸುವ ಲೈಟಿಂಗ್ ಡಿವೈಸ್ ಆವಿಷ್ಕಾರ
ಅಪ್ಪ ಪಾನ್ ಶಾಪ್ ಪೆಟ್ಟಿ ಅಂಗಡಿ ನಡೆಸುತ್ತಿದ್ದರೆ ತಾಯಿ ಗೃಹಿಣಿ ಆಗಿದ್ದಾರೆ. ಇವರದ್ದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವೀರೇಶ್ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ 'ಗಣಿತದ ಮೂಲಕ್ರಿಯೆಯನ್ನ' ಲೈಟಿಂಗ್ ನಲ್ಲಿ ತೋರಿಸುವ ಡಿವೈಸ್ ಕಂಡು ಹಿಡಿದಿದ್ದಾನೆ. ಅದು ಕೆಲಸ ಮಾಡುವ ಬಗೆಯನ್ನೊಮ್ಮೆ ನೀವೇ ನೋಡಿ..
ವರದಿ- ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಳಗಾವಿ (ಡಿ.24): 'ಪ್ರತಿಭೆ ಯಾರ ಸ್ವತ್ತಲ್ಲ, ಅದು ಸಾಧಕನ ಸ್ವತ್ತು' ಎನ್ನುವುದು ಎಷ್ಟು ನಿಜವೊ ಪ್ರತಿಭೆಗೆ ವಯಸ್ಸು ಕೂಡ ಮಾನದಂಡವಲ್ಲ ಎನ್ನೋದು ಅಷ್ಟೇ ಸತ್ಯ. ಈ ಹುಡುಗನ ಹೆಸರು ವಿರೇಶ್ ಸೋಮಪ್ಪ ಗರ್ಗದ್. ಸವದತ್ತಿ ತಾಲೂಕು ಮುನ್ನವಳ್ಳಿ ಗ್ರಾಮದ ಪ್ರತಿಭೆ ಈತ. ಏಳನೇ ತರಗತಿ ಓದುತ್ತಿರುವ ಸಮಯದಲ್ಲೇ, ಮುಂದೊಂದು ದಿನ ತಾನು ಕೂಡ ವಿಜ್ಞಾನಿ ಆಗಬೇಕು ಎಂಬ ಆಗಸದೆತ್ತರದ ಕನಸು ಹೊತ್ತಿದ್ದಾನೆ. ಈಗಲೇ ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿ ಮಾಡಿಕೊಳ್ಳುತ್ತಿದ್ದಾನೆ.
ವಿರೇಶನ ಅಪ್ಪ ಪಾನ್ ಶಾಪ್ ನಡೆಸುತ್ತಾರೆ. ತಾಯಿ ಗೃಹಿಣಿ. ಇವರದ್ದು ಮಧ್ಯಮ ವರ್ಗದ ಕುಟುಂಬ. ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ಓದುತ್ತಿರುವ ವಿರೇಶ್‌ಗೆ ಆತನ ಶಾಲಾ ಶಿಕ್ಷಕರು ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಏನಾದರೂ ಒಂದು ಉಪಕರಣ ಮಾಡು ಎಂದು ಸಲಹೆ ನೀಡಿದರಂತೆ. ಅದಕ್ಕೆ ತಲೆ ಆಡಿಸಿದ ವಿರೇಶ್ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ 'ಗಣಿತದ ಮೂಲಕ್ರಿಯೆಯನ್ನ' ಲೈಟಿಂಗ್ ನಲ್ಲಿ ತೋರಿಸುವ ವಿಶೇಷವಾದ ಡಿವೈಸ್ ಕಂಡು ಹಿಡಿದಿದ್ದಾನೆ.
Udupi: ಕಿಸೆಯೊಳಗೆ ಇರಿಸಬಹುದಾದ ನೂತನ ಟೆಲಿಸ್ಕೋಪ್ ಆವಿಷ್ಕಾರ
ಡಿವೈಸ್ ಹೇಗೆ ಕೆಲಸ ಮಾಡುತ್ತದೆ?: ಡಿಸಿ ಬ್ಯಾಟರಿ, ಎಲ್ ಇ ಡಿ ಲೈಟ್ ವೈರ್ ಬಳಸಿ ಸಿಂಪಲಾಗಿ ಈ ಡಿವೈಸ್ ಕಂಡುಹಿಡಿದ್ದಿದ್ದಾನೆ. ಪ್ಲೇ ಕಾರ್ಡ್ ತರದ ಚಿಕ್ಕ ಬೋರ್ಡ್ ಮೇಲೆ ಒಂದಿಷ್ಟು ಅಂಕಿಗಳನ್ನು ಬರೆಯಲಾಗಿದೆ. ಉದಾಹರಣೆಗೆ 5+2, 7+3, 10+4, 14+16 20+10 ಅದೇ ಬೋರ್ಡ್ ನ ಬಲಭಾಗದಲ್ಲಿ 14, 20, 30, 7, 10 ಈಗ 5+2= 7, ಎನ್ನೋದನ್ನ 7 ಮೇಲೆಯೆ ವೈರ್ ಇಟ್ಟಾಗ ಎಲ್ ಇಡಿ ಲೈಟ್ ಗ್ಲೋ ಆಗುತ್ತದೆ. ಅದೇ 5+2= 7 ರ ಬದಲು ನೀವು 10 ಅಂಕಿಯ ಮೇಲೆ ವೈರ್ ಇಟ್ಟರೆ ಎಲ್ ಇ ಡಿ ಲೈಟ್ ಗ್ಲೋ ಆಗೋದಿಲ್ಲ. ಸರಿಯಾದ ಸಂಖ್ಯೆ ಮೇಲೆ ವೈರ್ ಇಟ್ಟಾಗ ಮಾತ್ರ ಲೈಟ್ ಹೊತ್ತಿಕೊಳ್ಳುತ್ತದೆ.
ತಪ್ಪು ಲೆಕ್ಕಾಚಾರಕ್ಕೆ ಲೈಟ್ ಆನ್ ಆಗೋದಿಲ್ಲ: ಇನ್ನು ಡಿವೈಸ್‌ನ ವೈರ್ ಅನ್ನು ತಪ್ಪು ಲೆಕ್ಕ ಮಾಡಿ ಬೇರೆ ಸಂಖ್ಯೆಗಳ ಮೇಲೆ ವೈರ್ ಟಚ್ ಮಾಡಿದರೆ ಲೈಟ್ ಆನ್ ಆಗೋದಿಲ್ಲ. ಇದಕ್ಕೆ ಮೂಲಕ್ರಿಯೆ ಡಿವೈಸ್ಎಂ ದು ಹೆಸರು ಇಟ್ಟಿದ್ದಾನೆ. ನೋಡೊದಕ್ಕೆ ಇದು ಸರಳವಾಗಿ ಕಂಡರು, ಗ್ರಾಮೀಣ ಭಾಗದ ಏಳನೇ ತರಗತಿ ವಿದ್ಯಾರ್ಥಿಯ ಈ ಸಾಧನೆ ಮೆಚ್ಚುವಂತದ್ದಾಗಿದೆ. ವಿದ್ಯಾರ್ಥಿಯ ಈ ಆವಿಷ್ಕಾರಕ್ಕೆ ಸೂಕ್ತ ಪ್ರೋತ್ಸಾಹ ಕಲ್ಪಿಸಿ ಇನ್ನಷ್ಟು ಆವಿಷ್ಕಾರ ಮಾಡಲು ವೇದಿಕೆ ಒದಗಿಸಿಕೊಡಬೇಕಿದೆ.
ಮಗುವನ್ನು ಕೂರಿಸಲು ಸೈಕಲ್‌ಗೆ ಚೇರ್ ಸೇರಿಸಿದ ತಾಯಿ; ವೀಡಿಯೋ ವೈರಲ್
ವಿದ್ಯಾರ್ಥಿಯ ಆವಿಷ್ಕಾರ ವಿವಿಧೆಡೆ ಪ್ರದರ್ಶನ: ವಿರೇಶ್‌ನ ಈ ಪುಟ್ಟ ಆವಿಷ್ಕಾರಕ್ಕೆ ಮುನವಳ್ಳಿಯ ಪಾರ್ಥಾನಾ ಶಾಲಾ ಆಡಳಿತ ಮಂಡಳಿಯವರು ಬೇರೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು. ಇಂತಹ ಪುಟ್ಟ ಸಾಧನೆ ಮುಂದೆ ಹೆಮ್ಮರವಾಗಲಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಆಶಿಸುತ್ತಾ ವಿದ್ಯಾರ್ಥಿ ವಿರೇಶ್ ಗೆ ಒಂದು ಅಭಿನಂದನೆ ಸಲ್ಲಿಸೋಣ.