Udupi: ಕಿಸೆಯೊಳಗೆ ಇರಿಸಬಹುದಾದ ನೂತನ ಟೆಲಿಸ್ಕೋಪ್ ಆವಿಷ್ಕಾರ
ಕರ್ನಾಟಕದ ಉಡುಪಿಯ ಐಟಿ ಉದ್ಯೋಗಿ ಮನೋಹರ್ ಪ್ಯಾಕೆಟ್‌ನಲ್ಲಿ ಇಡಬಹುದಾದಷ್ಟು ಚಿಕ್ಕ ಟೆಲಿಸ್ಕೋಪ್ ಆವಿಷ್ಕಾರ ಮಾಡಿದ್ದು, ಇದರಲ್ಲಿ ಅನ್ಯಗ್ರಹಗಳಾದ ಹುಣ್ಣಿಮೆ ಚಂದ್ರ, ಮಂಗಳಗ್ರಹ, ಗುರುಗ್ರಹ ,ಶನಿಗ್ರಹ, ಮೊದಲಾದ ಗ್ರಹಗಳನ್ನು ಹಾಗೂ ನಕ್ಷತ್ರ ಪುಂಜಗಳನ್ನು ನೋಡಬಹುದಾಗಿದೆ.
ಉಡುಪಿ (ಡಿ.7): ಸೂರ್ಯನ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಮಂಗಳ ಗ್ರಹವು ಡಿ.8 ಗುರುವಾರ ಭೂಮಿಗೆ ಸನಿಹದಲ್ಲಿದ್ದು, ಸಂಜೆ 6, ರಿಂದ ಆಕಾಶದಲ್ಲಿ ಕಾಣುವುದರಿಂದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮಣಿಪಾಲದ ಎಮ್ ಐಟಿ ಉದ್ಯೋಗಿ ಆರ್. ಮನೋಹರ್ ಪರ್ಕಳ ಅವರು ನೂತನವಾಗಿ ಆವಿಷ್ಕರಿಸಿದ ಪಾಕೆಟ್ ನಲ್ಲಿ ಇರಿಸುವಂತಹ ಅಂಗೈಯಗಲದ 7 ಇಂಚಿನ ಮೈಕ್ರೋಸ್ಕೋಪ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಟೆಲಿಸ್ಕೋಪ್ ಆಗಿಯೂ ಉಪಯೋಗಿಸಬಹುದಾದ, ಅಂಗೈಯಗಲದ ಪಾಕೆಟ್ ಟೆಲಿಸ್ಕೋಪ್ ಮನೋಹರ್ ಅವರ ಆವಿಷ್ಕರವಾಗಿದೆ.
ಅವರೇ ವಿನ್ಯಾಸ ಮಾಡಿರುವ ಮೇಘಾ ಜೂಮ್ ಲೆನ್ಸ್,, ಎಕ್ಸೆಲ್, ಎಂಬಂತಹ ನಾಲ್ಕು ದೂರದರ್ಶಕದ ಮೂಲಕ ಗ್ರಹಗಳನ್ನು ನೋಡಲು ಅವಕಾಶವಿದೆ. ಇವರು ಆವಿಷ್ಕರಿಸಿದ ದೂರದರ್ಶಕದಲ್ಲಿ ಗ್ರಹಗಳನ್ನು ನೇರವಾಗಿ ನೋಡುವುದೇ ವಿಶೇಷ. ಈ ಅನ್ವೇಷಣೆಗಳಿಗಾಗಿ ಇವರಿಗೆ ಪೇಟೆಂಟ್ ಕೂಡಾ ಸಿಕ್ಕಿರುತ್ತದೆ, ಮಾರುಕಟ್ಟೆಯಲ್ಲಿ ಸಿಗುವ ದೂರದರ್ಶಕದಲ್ಲಿ ಬಗ್ಗಿ ನೋಡುವುದು ಮತ್ತು ಪ್ರತಿಬಿಂಬ ಉಲ್ಟಾ ಕಾಣುತ್ತೆ. ಆದರೆ ಮನೋಹರ್ ನಿರ್ಮಿಸಿರುವ ದೂರದರ್ಶಕದಲ್ಲಿ ನೇರವಾಗಿ ಪ್ರತಿಬಿಂಬ ಕಾಣಿಸುವುದು ವಿಶೇಷ ವಾಗಿದೆ.
ಪೊಲೀಸರ ಖಾಕಿ ಬಣ್ಣ ಮೊದಲು ಆವಿಷ್ಕಾರಗೊಂಡದ್ದು ಕನ್ನಡ ನಾಡಲ್ಲಿ..!
ಶನಿ, ಗುರುಗ್ರಹ ನೋಡಬಹುದು: ಇದೀಗ ಅಂಗೈ ಅಗಲದ ಮೈಕ್ರೋಸ್ಕೋಪ್ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ. ಅನ್ಯಗ್ರಹಗಳಾದ ಹುಣ್ಣಿಮೆ ಚಂದ್ರ, ಮಂಗಳಗ್ರಹ, ಗುರುಗ್ರಹ ,ಶನಿಗ್ರಹ, ಮೊದಲಾದ ಗ್ರಹಗಳನ್ನು ಹಾಗೂ ನಕ್ಷತ್ರ ಪುಂಜಗಳನ್ನು ಕೂಡಾ ಈ ಪಾಕೆಟ್ ಟೆಲಿಸ್ಕೋಪ್ ನಲ್ಲಿ ನೋಡಬಹುದು. ಈ ವೀಕ್ಷಣೆಗೆ ಪರ್ಕಳದ ಸ್ವಾಗತ ಹೋಟೆಲ್ ನ ಬಳಿ, ಡಿಸೆಂಬರ್ 8ರ ಗುರುವಾರ ಸಂಜೆ 5:30ರ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ಖಗೋಳಾಸಕ್ತರು, ವಿದ್ಯಾರ್ಥಿಗಳಿಗಳು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿಸಿದ್ದಾರೆ.
ಆವಿಷ್ಕಾರಗಳ ಪ್ರದರ್ಶನ ನಿರಾಸಕ್ತಿ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಪ್ರದರ್ಶನಕ್ಕೆ ಹೆಚ್ಚಿನ ಕಂಪೆನಿಗಳು ಆಸಕ್ತಿ ತೋರಿಸಿರಲಿಲ್ಲ. ಪರಿಣಾಮ ವ್ಯವಸ್ಥೆ ಮಾಡಿರುವ ಒಂದೇ ಪ್ರದರ್ಶನ ಹಾಲ್‌ನಲ್ಲಿ ಎರಡನೇ ದಿನವೂ ಹಲವು ಮಳಿಗೆಗಳು ಖಾಲಿ ಇದ್ದವು. ಪ್ರದರ್ಶನ ಮಳಿಗೆಯಲ್ಲಿನ ಬಹುತೇಕ ಸ್ಟಾಲ್‌ಗಳು ತಿಂಡಿ-ತಿನಿಸಿನ ಉತ್ಪನ್ನಗಳು, ಪೀಠೋಪಕರಣ, ಬಟ್ಟೆ ಉತ್ಪನ್ನಗಳ ಪ್ರದರ್ಶನಕ್ಕೇ ಸೀಮಿತಗೊಂಡಿವೆ. ರಿಯಲನ್ಸ್, ಟಾಟಾ ಸಮೂಹದಂತಹ ಪ್ರಮುಖ ಕಂಪೆನಿಗಳ ಮಳಿಗೆಗಳು ಪ್ರದರ್ಶನಗೊಂಡಿಲ್ಲ. ಇನ್ನು ಹೊಸ ಸ್ಟಾರ್ಚ್ ಅಪ್, ಆವಿಷ್ಕಾರಗಳ ಪ್ರದರ್ಶನದ ಸಂಖ್ಯೆಯೂ ಕಡಿಮೆ ಇದ್ದವು.