- Home
- Technology
- What's New
- ಫೇಸ್ಬುಕ್, ಇನ್‌ಸ್ಟಾಗ್ರಾಂ ಬಳಸಲು ಎದುರಾದ ಸಮಸ್ಯೆ, ದಿಢೀರ್ ಸೋಶಿಯಲ್ ಮೀಡಿಯಾಗೆ ಏನಾಯ್ತು?
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಸಲು ಎದುರಾದ ಸಮಸ್ಯೆ, ದಿಢೀರ್ ಸೋಶಿಯಲ್ ಮೀಡಿಯಾಗೆ ಏನಾಯ್ತು?
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಬಳಸಲು ಸಾಧ್ಯವಾಗುತ್ತಿಲ್ಲವೇ, ಲಾಗಿನ್ ಆಗುತ್ತಿಲ್ಲ, ಫೀಡ್ ಸಿಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳು ವರದಿಯಾಗಿದೆ. ಅತೀ ದೊಡ್ಡ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ ಏನಾಯಿತು?

ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸಮಸ್ಯೆ
ನಿಮ್ಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲವೇ, ಫೀಡ್ ಸಿಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳು ಬಳಕೆದಾರರಿಗೆ ಎದುರಾಗಿದೆ. ತಾಂತ್ರಿಕ ಕಾರಣದಿಂದ ಮೆಟಾ ಮಾಲೀಕತ್ವದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಡೌನ್ ಆಗಿದೆ.
ಭಾರತ ಸೇರಿದಂತೆ ಹಲವೆಡೆ ಸಮಸ್ಯೆ
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಬಳಕೆದಾರರು ಸಮಸ್ಯೆ ಕುರಿತು ರಿಪೋರ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ನೆಚ್ಚಿಕೊಂಡಿರುವ ಹಲವರು ಸಮಸ್ಯೆಯಿಂದ ತೀವ್ರ ಪರದಾಡುವಂತಾಗಿದೆ. ಪ್ರಮುಖ ಸೋಶಿಯಲ್ ಮೀಡಿಯಾ ತಾಣ ಕಾರ್ಯನಿರ್ವಹಿಸದೆ ಸಮಸ್ಯೆಗೆ ಕಾರಣವಾಗಿದೆ.
ಡೌನ್ ಡಿಟೆಕ್ಟರ್ ವರದಿ
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಡೌನ್ ಕುರಿತು ಡೌನ್ ಡಿಟೆಕ್ಟರ್ ವರದಿ ಮಾಡಿದೆ. ಭಾರತ ಸೇರಿದಂತೆ ಹಲವು ದೇಶಗಳ ಬಳಕೆದಾರರು ಸಮಸ್ಯೆ ಎದುರಿಸುತ್ತಿರುವುದಾಗಿ ರಿಪೋರ್ಟ್ ಮಾಡಿದ್ದಾರೆ. ಇಂದು ಸಂಜೆ 7 ಗಂಟೆಯಿಂದಲೇ ಎರಡು ಪ್ರಮುಖ ತಾಣಗಳು ಸಮಸ್ಯೆಗೆ ತುತ್ತಾಗಿದೆ. ಎಕ್ಸ್ ಮೂಲಕ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.
ಮೆಟಾ ಹೇಳುತ್ತಿರುವುದೇನು?
ಸೋಶಿಯಲ್ ಮೀಡಿಯಾ ತಾಣಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತು ಮೆಟಾ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಒಂದೊಂದು ಭಾಗದಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡಿದೆ. ಹಲವರು ಲಾಗಿನ್ ಸಮಸ್ಯೆ ಹೇಳಿದರೆ,ಮತ್ತೆ ಕೆಲವರು ಫೀಡ್ ಸಿಗುತ್ತಿಲ್ಲ ಎಂದಿದ್ದಾರೆ. ಮೊಬೈಲ್ ಆ್ಯಪ್, ಮೆಸೇಂಜರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
1ಲಕ್ಷಕ್ಕೂ ಅಧಿಕ ಮಂದಿಯ ದೂರು
ಮೆಟಾ ಮಾಲೀಕತ್ವದ ಫ್ಲಾಟ್‌ಫಾರ್ಮ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ರಿಪೋರ್ಟ್ ಮಾಡಿದ್ದಾರೆ. ಇದೇ ವೇಳೆ ಹಲವರು ಮೂಲ ಸಮಸ್ಯೆ ಏನು ಎಂಬುದೇ ಅರ್ಥವಾಗುತ್ತಿಲ್ಲ, ಆದರೆ ಎಂದಿನಂತೆ ಖಾತೆಗಳನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

