ಬೆಂಗಳೂರು (ಸೆ.30): ವಿಶ್ವಸಂಸ್ಥೆಯ ಪ್ರತಿಷ್ಠಿತ ‘ಗ್ಲೋಬಲ್ ಕ್ಲೈಮೇಟ್ ಆ್ಯಕ್ಷನ್’ ಪ್ರಶಸ್ತಿಗೆ ಜಾಗತಿಕ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಕಂಪನಿಯು ಭಾಜನವಾಗಿದೆ.

‘ಕ್ಲೈಮೇಟ್ ನ್ಯೂಟ್ರಲ್ ನೌ’ ವಿಭಾಗದಲ್ಲಿ ಇನ್ಫೋಸಿಸ್‌ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ್ದು, ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಪ್ರಯತ್ನಗಳನ್ನು ಮಾಡುತ್ತಿರುವ ಭಾರತದ ಏಕೈಕ ಕಾರ್ಪೊರೇಟ್ ಸಂಸ್ಥೆಯಾಗಿ ಇನ್ಫೋಸಿಸ್ ಗುರುತಿಸಲ್ಪಟ್ಟಿದೆ.

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತ ಇಸ್ಫೋಸಿಸ್‌ ಫೌಂಡೇಷನ್‌

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ಸ್‌ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ, ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ ಮತ್ತು ಹವಾಮಾನ ಬದಲಾವಣೆಗೆ ಸೂಕ್ತ ಯೋಜನೆಗಳನ್ನು ರೂಪಿಸಿರುವ ಅತ್ಯುತ್ತಮ ಸಂಸ್ಥೆಗಳಿಗೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಿದರು.

2019 ರ ಡಿಸೆಂಬರ್‌ನಲ್ಲಿ ಚಿಲಿಯ ಸ್ಯಾಂಟಿಯಾಗೋದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಇನ್ಫೋಸಿಸ್‌ಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ತತ್ತರಿಸಿದ ಉತ್ತರಕರ್ನಾಟಕಕ್ಕೆ ಸುಧಾಮೂರ್ತಿ 10 ಕೋಟಿ ರು ನೆರವು

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಚಿವಾಲಯ ಕೈಗೊಂಡಿರುವ ಹವಾಮಾನ ಬದಲಾವಣೆ ಉಪಕ್ರಮದ ಹಿನ್ನೆಲೆಯಲ್ಲಿ ಈ  ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರಿಹಾರಗಳನ್ನು ಸೂಚಿಸುವ ಯೋಜನೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 

ಇದಲ್ಲದೇ, ಬಡತನ ನಿರ್ಮೂಲನೆ, ಲಿಂಗ ಸಮಾನತೆ ಮತ್ತು ಆರ್ಥಿಕ ಅವಕಾಶಗಳೊಂದಿಗೆ ಒಟ್ಟಾರೆ ಅಭಿವೃದ್ಧಿಯ ಗುರಿಗಳನ್ನು ಹೊಂದಿರುವ ಅಂಶಗಳು ಈ ಯೋಜನೆಗಳಲ್ಲಿರುವುದನ್ನು ಪರಿಗಣಿಸಲಾಗುತ್ತದೆ.

ಸಂದರ್ಶನ | ಸುಧಾಮೂರ್ತಿ : ಸರಳ ಜೀವನದಲ್ಲೇ ಸಾಧನೆ, ಪ್ರತಿ ಮಾತಿನಲ್ಲೂ ಪ್ರೇರಣೆ

ಈ ಪ್ರಶಸ್ತಿಯನ್ನು ಪ್ರಕಟಿಸಿ ಮಾತನಾಡಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಜಾಗತಿಕ ಹವಾಮಾನ ಕ್ರಿಯಾ ಕಾರ್ಯಕ್ರಮದ ವ್ಯವಸ್ಥಾಪಕ ನಿಕ್ಲಸ್ ಸ್ವೆನ್ನಿಂಗ್ಸೆನ್ , ‘‘ವಿಶ್ವಸಂಸ್ಥೆ ಜಾಗತಿಕ ಹವಾಮಾನ ಕ್ರಿಯೆ ಪ್ರಶಸ್ತಿಗೆ ವಿಶ್ವದಾದ್ಯಂತದಿಂದ 670 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಎಲ್ಲಾ ಯೋಜನೆಗಳನ್ನು ಪರಿಶೀಲಿಸಿದ ನಂತರ ಅತ್ಯುತ್ತಮ ಎನಿಸಿದ ಇನ್ಫೋಸಿಸ್‌ಗೆ ಪ್ರಶಸ್ತಿಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಇಂಗಾಲ ಶೂನ್ಯ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸುಸ್ಥಿರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಹೆಜ್ಜೆ ಇಟ್ಟಿದೆ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ಫೋಸಿಸ್ ಕಂಪನಿಯು ಇಂಧನ ದಕ್ಷತೆ ಕ್ರಮಗಳನ್ನು ಕೈಗೊಂಡಿದ್ದು, ಪುನರ್‌ನವೀಕರಿಸಬಹುದಾದ ಇಂಧನವನ್ನು ಬಳಸುತ್ತಿದೆ. ಇಂಗಾಲ ಹೊರಸೂಸುವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಇಂಗಾಲ-ರಹಿತ ವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ವಿಶ್ವದ ಪರಿವರ್ತನೆಗೆ ನೆರವಾಗುತ್ತಿದೆ ಎಂದು ಅವರು ಪ್ರಶಂಸಿದರು. 

ಹವಾಮಾನ ಬದಲಾವಣೆ ವಿರುದ್ಧ ಇನ್ಫೋಸಿಸ್ ಹೋರಾಟ:

ಇನ್ಫೋಸಿಸ್ ಹವಾಮಾನ ಬದಲಾವಣೆ ವಿರುದ್ಧದ ಹೋರಾಟವನ್ನು 2008 ರಲ್ಲಿ ಇಂಗಾಲ ಪ್ರಮಾಣದ ಮೌಲ್ಯಮಾಪನದೊಂದಿಗೆ ಆರಂಭಿಸಿತ್ತು. 2011 ರಲ್ಲಿ ಇನ್ಫೋಸಿಸ್ ಇಂಗಾಲ ತಟಸ್ಥತೆಯನ್ನು ಕಾಯ್ದುಕೊಳ್ಳುವ ತನ್ನ ಬದ್ಧತೆಯನ್ನು ವಿಶ್ವಸಂಸ್ಥೆಗೆ ತಿಳಿಸಿತ್ತು. ಈ ನಿಟ್ಟಿನಲ್ಲಿ ಕಂಪನಿಯು ಅಂದಿನಿಂದ ಇಂಧನ ದಕ್ಷತೆ, ಪುನರ್‌ನವೀಕರಿಸಬಹುದಾದ ಇಂಧನ ಮತ್ತು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಕ್ಕೂ ತಂದಿತು. 

ಕಡಿಮೆ ಇಂಗಾಲದ ಭವಿಷ್ಯದ ದೃಷ್ಟಿಯಿಂದ ಇನ್ಫೋಸಿಸ್ ದೂರದೃಷ್ಟಿಯ ಬದ್ಧತೆಯನ್ನು ಪ್ರದರ್ಶಿಸಿದೆ. ಇದು 2015 ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಅನುಗುಣವಾಗಿದೆ. ಇದಲ್ಲದೇ, 2018 ರ ಅಕ್ಟೋಬರ್‌ನಲ್ಲಿ ಯುಎನ್‌ಎಫ್‌ಸಿಸಿಸಿ ಆಯೋಜಿಸಿದ್ದ ‘ಈಗ ಹವಾಮಾನ ತಟಸ್ಥ’ ಎಂಬ ವೇದಿಕೆಯಲ್ಲಿ ಇನ್ಫೋಸಿಸ್ ಕಡಿಮೆ ಇಂಗಾಲ ಆರ್ಥಿಕತೆಯತ್ತ ಸಾಗುವ ಬದ್ಧತೆಯನ್ನು ಘೋಷಣೆ ಮಾಡಿತ್ತು.

ಇನ್ಫೋಸಿಸ್‌ನ ಪ್ರಮುಖ ಸಾಧನೆಗಳು:

  • ಇನ್ಫೋಸಿಸ್ ವಿಶ್ವದಾದ್ಯಂತ ಅತ್ಯಂತ ಇಂಧನ ದಕ್ಷತೆಯ ಕ್ಯಾಂಪಸ್‌ಗಳನ್ನು ಹೊಂದಿದೆ.
  • ಆರ್‌ಇ100 ಜಾಗತಿಕ ಅಭಿಯಾನಕ್ಕೆ ಮೊದಲು ಸಹಿ ಹಾಕಿದ ಸಂಸ್ಥೆ ಇನ್ಫೋಸಿಸ್; ತನ್ನೆಲ್ಲಾ ವಿದ್ಯುತ್ ಅವಶ್ಯಕತೆಗಳಿಗೆ ಪರ್ಯಾಯವಾಗಿ ಪುನರ್‌ನವೀಕರಿಸಬಹುದಾದ ಇಂಧನ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ. 
  • 2008 ರಿಂದ ತಲಾ ಇಂಧನ ಬಳಕೆ ಪ್ರಮಾಣವನ್ನು ಶೇ.51 ರಷ್ಟು ಕಡಿಮೆ ಮಾಡಿದೆ.
  • 2019 ರ ಹಣಕಾಸು ವರ್ಷದಲ್ಲಿ ಕಂಪನಿಯು ಶೇ.46 ರಷ್ಟು ವಿದ್ಯುತ್ ಅನ್ನು ಪುನರ್‌ನವೀಕರಿಸಬಹುದಾದ ಇಂಧನ ಮೂಲದಿಂದ ಬಳಸಿಕೊಳ್ಳುತ್ತಿದೆ. ಅದಕ್ಕೆ ತನ್ನದೇ ಆದ 49 ಮೆಗಾವ್ಯಾಟ್ ಸೋಲಾರ್ ಘಟಕಗಳನ್ನು ಹೊಂದಿದೆ.        

    ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ  ಇನ್ಫೋಸಿಸ್‌ನ ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ್ ರಾವ್ , ‘‘ಇನ್‌ಫೋಸಿಸ್‌ನಲ್ಲಿ ನಾವು ಇಂಗಾಲ ತಟಸ್ಥ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಅದಕ್ಕೆ ಪೂರಕವಾದ  ಕಾರ್ಯತಂತ್ರವನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದೇವೆ. ವಿಶ್ವಸಂಸ್ಥೆಯ ಈ ಪ್ರಶಸ್ತಿಯು ನಮ್ಮ ಬದ್ಧತೆಗೆ ಸಂದ ಗೌರವ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸಿದೆ, ಎಂದರು