Asianet Suvarna News Asianet Suvarna News

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತ ಇಸ್ಫೋಸಿಸ್‌ ಫೌಂಡೇಷನ್‌

ಮೆಟ್ರೋ 2ನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದ ಕೋನಪ್ಪನ ಅಗ್ರಹಾರದ ಮೆಟ್ರೋ ನಿಲ್ದಾಣಕ್ಕೆ ಇಸ್ಫೋಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Infosys foundation takes maintenance responsibility of Konappana Agrahara metro station
Author
Bengaluru, First Published Sep 21, 2019, 9:52 AM IST

ಬೆಂಗಳೂರು (ಸೆ. 21):  ಮೆಟ್ರೋ 2ನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದ ಕೋನಪ್ಪನ ಅಗ್ರಹಾರದ ಮೆಟ್ರೋ ನಿಲ್ದಾಣಕ್ಕೆ ಇಸ್ಫೋಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶದನ್ವಯ ಮುಂದಿನ 30 ವರ್ಷಗಳ ಕಾಲ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ಹೆಸರು, ‘ಇಸ್ಫೋಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ’ ಎಂದು ಇರಲಿದೆ.

ಹಾಗೆಯೇ ಈ ಅವಧಿಯಲ್ಲಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಇಸ್ಫೋಸಿಸ್‌ ಫೌಂಡೇಷನ್‌ ನಿರ್ವಹಿಸಲಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ಮತ್ತು ಇಸ್ಫೋಸಿಸ್‌ ಫೌಂಡೇಷನ್‌ ಒಪ್ಪಂದ ಮಾಡಿಕೊಂಡಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಇಸ್ಫೋಸಿಸ್‌ ಪ್ರತಿಷ್ಠಾನ .200 ಕೋಟಿ ದೇಣಿಗೆ ನೀಡಿತ್ತು. ಕೋನಪ್ಪನ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನು ಇಸ್ಫೋಸಿಸ್‌ ಸಂಸ್ಥೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.

ಬೊಮ್ಮಸಂದ್ರ ಮಾರ್ಗಕ್ಕೆ 5744 ಕೋಟಿ ವೆಚ್ಚ

2ನೇ ಹಂತದ ಮೆಟ್ರೋ ಯೋಜನೆಯಲ್ಲಿ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದ ವರೆಗೂ 18.8 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣಗೊಳ್ಳಲಿದ್ದು, ಸುಮಾರು .5744 ಕೋಟಿ ವೆಚ್ಚ ಅಂದಾಜಿಸಲಾಗಿದೆ. 18.8 ಕಿ.ಮೀ ಉದ್ದದ 16 ನಿಲ್ದಾಣಗಳನ್ನು ಒಳಗೊಂಡ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದ ಕಾಮಗಾರಿ 3 ಪ್ಯಾಕೇಜ್‌ಗಳಡಿ ನಡೆಯುತ್ತಿದೆ.

ಆರ್‌.ವಿ.ರಸ್ತೆ- ಎಚ್‌ಎಸ್‌ಆರ್‌ಲೇಔಟ್‌ (6.34 ಕಿ.ಮೀ), ಎಚ್‌ಎಸ್‌ಆರ್‌ಲೇಔಟ್‌- ಹೊಸರಸ್ತೆ (6.4 ಕಿಮೀ), ಹೊಸ ರಸ್ತೆ- ಬೊಮ್ಮಸಂದ್ರ (6.41 ಕಿ.ಮೀ) ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, 2021ಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios