ವಾಷಿಂಗ್ಟನ್(ಜ.26): ಡಜನ್’ಗಟ್ಟಲೇ ಯಂತ್ರಗಳನ್ನು ಕಳುಹಿಸಿ ಮಂಗಳ ಗ್ರಹದ ಇಂಚಿಂಚು ಭೂಮಿಯನ್ನೂ ಬಿಡದಂತೆ ಸಂಶೋಧನೆ ನಡೆಸುತ್ತಿರುವ ನಾಸಾದ ಎದೆಬಡಿತವೇ ನಿಂತ ಕ್ಷಣ ಯಾವುದು ಗೊತ್ತಾ?.

ಕಳೆದ ಏಳು ವರ್ಷಗಳಿಂದ ಅಂಗಾರಕನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಇತ್ತೀಚಿಗೆ ಕೆಲವು ಕ್ಷಣಗಳ ವೆರೆಗೆ  ತನ್ನ ಕಾರ್ಯವನ್ನು ಸ್ಥಗಿತಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಾಸ್ತವ್ಯದ ಆಸೆಗೆ ತಣ್ಣೀರು?: ಮಂಗಳ ಗ್ರಹ ವೇಗವಾಗಿ ಕಳೆದುಕೊಳ್ಳುತ್ತದೆ ನೀರು!

ಮಂಗಳ ಗ್ರಹದ ಹೆಪ್ಪುಗಟ್ಟಿದ ವಾತಾವರಣಕ್ಕೆ ಕ್ಯೂರಿಯಾಸಿಟಿ ರೋವರ್ ಕಾಲಿಟ್ಟಾಗ, ಏಕಾಏಖಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಹೆಪ್ಪುಗಟ್ಟಿದ ವಾತಾವರಣದಲ್ಲಿ ಮುಂದೆ ಸಾಗಲು ಸಾಧ್ಯವಗದೇ ರೋವರ್ ಕೆಲಕಾಲ ಕಾರ್ಯ ನಿಲ್ಲಿಸಿತ್ತು.

ಹೀಗಾಗಿ ಭೂಮಿಗೆ ರೋವರ್ ಸಂದೇಶ ರವಾನೆ ಕಾರ್ಯ ನಿಲ್ಲಿಸಿದ್ದರಿಂದ ನಾಸಾದ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಸಂಪರ್ಕ ಕಡಿದುಕೊಂಡ ರೋವರ್’ಗೆ ಏನಾಗಿದೆ ಎಂದು ತಿಳಿಯದೇ ನಾಸಾ ಪೇಚಿಗೆ ಸಿಲುಕಿತ್ತು.

ಹೆಪ್ಪುಗಟ್ಟಿರುವ ಗಟ್ಟಿಯಾದ ನೆಲದಲ್ಲಿ, ಕಿರಿದಾದ ಹಾಗೂ ಇಕ್ಕಟ್ಟಿನ ದಾರಿಗಳಲ್ಲಿ ಹಾಗೂ ಬೃಹತ್ ಕಲ್ಲು ಎದುರಿಗೆ ಬಂದಾಗ ರೋವರ್ ಯಂತ್ರ ತಾನಾಗಿಯೇ ದಾರಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಆದರೆ ಅತೀಯಾದ ಶೀತ ವಾತಾವರಣದಿಂದ ಮುಂದಕ್ಕೆ ಹೋಗಲಾಗದೇ ರೋವರ್ ಯಂತ್ರ ತಾನಾಗಿಯೇ ಕೆಲಕಾಲ ತನ್ನ ಇಂಜಿನ್’ನ್ನು ಬಂದ್ ಮಾಡಿಕೊಂಡಿತ್ತು ಎಂದು ನಾಸಾ ಹೇಳಿದೆ.

ಬೆಳಗಿನ ಸೊಬಗು: ಅಂಗಾರಕನ ಅಂಗಕ್ಕೆ ಸೂರ್ಯ ಕಿರಣಗಳ ಮೆರಗು!
ಆದರೆ ವಾತಾವರಣ ಹತೋಟಿಗೆ ಬರುತ್ತಿದ್ದಂತೇ ಸುಮಾರು 2 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕ್ಯೂರಿಯಾಸಿಟಿ ರೋವರ್, ಮತ್ತೆ ತನ್ನ ಕಾರ್ಯವನ್ನು ಮುಂದುವರೆಸಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.