ವಾಷಿಂಗ್ಟನ್(ಜ.12): ಭವಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ವಾಸಿಸುವ ಕನಸು ಕಾಣುತ್ತಿರುವ ಮಾನವನಿಗೆ ಆತಂಕ ಮತ್ತು ನಿರಾಸೆಯ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿದೆ.

ಮಂಗಳ ಗ್ರಹ ಅತ್ಯಂತ ವೇಗವಾಗಿ ತನ್ನಲ್ಲಿರುವ ನೀರನ್ನು ಕಳೆದುಕೊಳ್ಳುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಮಂಗಳ ಗ್ರಹ ಸಂಪೂರ್ಣವಾಗಿ ನೀರು ರಹಿತ ಗ್ರಹವಾಗಿ ಪರಿವರ್ತನೆ ಹೊಂದಲಿದೆ ಎಂದು ಖಗೋಳ ಸಂಶೋಧಕರು ಎಚ್ಚರಿಸಿದ್ದಾರೆ.

ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಮಂಗಳ ಗ್ರಹದಿಂದ ನೀರು ಮಾಯವಾಗುತ್ತಿದ್ದು, ಕೆಂಪು ಗ್ರಹ ಈ ಹಿಂದೆ ತನ್ನಲ್ಲಿದ್ದ ಸಮುದ್ರ,ಸರೋವರ ಮತ್ತು ನದಿಗಳನ್ನು ಹೇಗೆ ಕಳೆದುಕೊಂಡಿತು ಎಂಬುದನ್ನು ತಿಳಿಯಲು ಸಹಾಯಕಾರಿ ಎಂದು ಅಧ್ಯಯನ ವರದಿ ತಿಳಿಸಿದೆ.

ಮಂಗಳನಲ್ಲಿ ದುಂಡಾದ ರಚನೆಗಳು: ಪ್ರತೀ ಕಲ್ಲಿನಲ್ಲೂ ರಹಸ್ಯ ಮಾಹಿತಿಗಳು!

ಮಂಗಳ ಗ್ರಹ ಸದ್ಯ ಶೀತ ಮತ್ತು ಶುಷ್ಕವಾಗಿದ್ದರೂ, ಅಂಕುಡೊಂಕಾದ ನದಿ ಕಣಿವೆಗಳು ಮತ್ತು ಒಣ ಸರೋವರದ ಕುರುಹುಗಳು ಶತಕೋಟಿ ವರ್ಷಗಳ ಹಿಂದೆ ಕೆಂಪು ಗ್ರಹದ ಮೇಲ್ಮೈ ಮೇಲೆ ನೀರಿರುವುದನ್ನು ಸೂಚಿಸುತ್ತದೆ.

ಮಂಗಳ ಗ್ರಹದ ನೀರಿನ ಅವಶೇಷಗಳು ಹೆಚ್ಚಾಗಿ ಧ್ರುವೀಯ ಮಂಜುಗಡ್ಡೆಗಳಲ್ಲಿ ಹೆಪ್ಪುಗಟ್ಟಿದ್ದು, ಇದು ಮಂಗಳದ ಮೇಲ್ಮೈಯಲ್ಲಿ ಈ ಹಿಂದೆ ಹರಿಯುತ್ತಿದ್ದ ಒಟ್ಟು ನೀರಿನ ಶೇ.10ರಷ್ಟಿದೆ ಎನ್ನಲಾಗಿದೆ.

ಸೂರ್ಯನಿಂದ ಬರುವ ನೇರಳಾತೀತ ವಿಕಿರಣ ಮಂಗಳ ಗ್ರಹದ ಮೇಲಿನ ಮೇಲಿನ ವಾತಾವರಣದಲ್ಲಿನ ನೀರನ್ನು ವಿಭಜಿಸಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ರೂಪಿಸುತ್ತದೆ.

ಬೆಳಗಿನ ಸೊಬಗು: ಅಂಗಾರಕನ ಅಂಗಕ್ಕೆ ಸೂರ್ಯ ಕಿರಣಗಳ ಮೆರಗು!

ಸೂರ್ಯನ ಅಸಾಧಾರಣವಾದ ಬೆಳಕಿನ ಸ್ವರೂಪ ಮತ್ತು ಮಂಗಳ ಗ್ರಹದ ಗುರುತ್ವಾಕರ್ಷಣೆಯಿಂದಾಗಿ ಹೈಡ್ರೋಜನ್ ಬಾಹ್ಯಾಕಾಶಕ್ಕೆ ಹೊದೂಡಲ್ಪಡುತ್ತದೆ ಎನ್ನಲಾಗಿದೆ.

ನೂತನ ಸಂಶೋಧನೆ ಪ್ರಕಾರ ಹೆಚ್ಚಿನ ಪ್ರಮಾಣದ ನೀರು ನಿಯಮಿತವಾಗಿ ಮಂಗಳ ಗ್ರಹದ ಮೇಲಿನ ವಾತಾವರಣಕ್ಕೆ ವೇಗವಾಗಿ ಒಳನುಗ್ಗುವಂತೆ ಮಾಡುತ್ತದೆ ಎಂದು ಸೂಚಿಸಲಾಗಿದೆ.

ಈ ಕುರಿತು ಯುರೋಪ್-ರಷ್ಯಾ ಎಕ್ಸೊಮಾರ್ಸ್ ಕಾರ್ಯಕ್ರಮದ ಭಾಗವಾಗಿರುವ ಮಂಗಳ-ಸುತ್ತುವ ಟ್ರೇಸ್ ಗ್ಯಾಸ್ ಆರ್ಬಿಟರ್ ನೀಡಿರುವ ಮಾಹಿತಿಯನ್ನು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

ಮಂಗಳದ ವಾತಾವರಣದಲ್ಲಿ ನೀರು ಹೇಗೆ ಆವಿಯಾಗಿ ಬಾಹ್ಯಾಕಾಶಕ್ಕೆ ಸೇರುತ್ತಿದೆ ಎಂಬುದರ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದು, ಗ್ರಹದ ತಾಪಮಾನಕ್ಕಿಂತ ಶೇ.10 ರಿಂದ ಶೇ.100 ಪಟ್ಟು ಹೆಚ್ಚು ನೀರು ಆವಿಯಾಗುತ್ತಿದೆ ಎಂದು ತಿಳಿಸಿದ್ದಾರೆ.