ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್| ಮಂಗಳ ಗ್ರಹದ ಪ್ರಖ್ಯಾತ ಗಾಲೆ ಕ್ರೇಟರ್ ಬಳಿ ಕ್ಯೂರಿಯಾಸಿಟಿ ರೋವರ್| ಗಾಲೆ ಕ್ರೇಟರ್ ನಸುಕಿನ ಫೋಟೋ ಕ್ಲಿಕ್ಕಿಸಿದ ಕ್ಯೂರಿಯಾಸಿಟಿ| ಸೂರ್ಯೋದಯಕ್ಕೆ ಕೆಲವೇ ಕ್ಷಣಗಳ ಮುಂಚಿನ ಗ್ರಹದ ಮೇಲ್ಮೈ ಫೋಟೋ| 

ವಾಷಿಂಗ್ಟನ್(ಡಿ.03): ಮಂಗಳ ಬಹುತೇಕ ಶುಷ್ಕ ಹಾಗೂ ನಿರ್ಜನ ಗ್ರಹ. ಆದರೆ ಅಂಗಾರಕನ ಕೆಲವು ಪ್ರದೇಶಗಳು ಭೂಮಿಯ ನೆಲವನ್ನು ಹೋಲುತ್ತವೆ.

ಅದರಂತೆ ಮಂಗಳ ಗ್ರಹದ ಪ್ರಖ್ಯಾತ ಗಾಲೆ ಕ್ರೇಟರ್(ಗಾಲೆ ಕುಳಿ) ಕೂಡ ಭೂಮಿಯ ಮೇಲ್ಮೈ ಲಕ್ಷಣಗಳನ್ನು ಒಳಗೊಂಡ ವಿಶಿಷ್ಟ ಪ್ರದೇಶ.

ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?
ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಗಾಲೆ ಕ್ರೇಟರ್’ನ ಮುಂಜಾವಿನ ಫೋಟೋ ಕ್ಲಿಕ್ಕಿಸಿದೆ.

Scroll to load tweet…

ನಸುಕಿನ ಜಾವದಲ್ಲಿ ಗಾಲೆ ಕ್ರೇಟರ್’ನಿಂದ ಈ ಫೋಟೋ ಕ್ಲಿಕ್ಕಿಸಿರುವ ಕ್ಯೂರಿಯಾಸಿಟಿ ರೋವರ್, ಸೂರ್ಯೋದಯಕ್ಕೆ ಕೆಲವೇ ಕ್ಷಣಗಳ ಮುಂಚಿನ ಗ್ರಹದ ಮೇಲ್ಮೈ ಫೋಟೋ ಕಳುಹಿಸಿದೆ.

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಭೂಮಿಯ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಸೂರ್ಯೋದಯಕ್ಕೂ ಮುಂಚೆ ಕಂಡುಬರುವ ವಾತಾವರಣವನ್ನೇ ಮಂಗಳ ಗ್ರಹದ ಮೇಲ್ಮೈ ಹೋಲುವುದು ವಿಶೇಷ.

ನಾಸಾದ ಡೌಗ್ ಎಲಿಸನ್ ಈ ಫೋಟೋವನ್ನು ಟ್ವಿಟ್ಟರ್’ನಲ್ಲಿ ಶೇರ್ ಮಾಡಿದ್ದು, ತಮ್ಮ ಜೀವಮಾನದ ಅತ್ಯಂತ ಸುಂದರ ಫೋಟೋ ಇದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂಗಾರಕನಲ್ಲಿ ಕಾಲಿರುವ ಕೀಟ?: ಆಕ್ಸಿಜನ್ ಏರಿಕೆಯ ವಿಚಿತ್ರ ಆಟ!