ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!
ಸೂಪರ್ ನೋವಾಗಳ ತವರಾಗಿರುವ ಬೃಹತ್ ಗ್ಯಾಲಕ್ಸಿ| ನಾಸಾದ ಹಬಲ್ ಟೆಲಿಸ್ಕೋಪ್ ಪತ್ತೆ ಹಚ್ಚಿದ ಸುಂದರ ಗ್ಯಾಲಕ್ಸಿ| ಭೂಮಿಯಿಂದ 130 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ NGC 5468| NGC 5468 ಗ್ಯಾಲಕ್ಸಿಯಲ್ಲಿ ಸಾಯಲು ಸಜ್ಜಾಗಿರುವ ನಕ್ಷತ್ರಗಳ ದೊಡ್ಡ ಪಡೆ| ಸೂಪರ್ ನೋವಾ ಹಂತಕ್ಕೆ ಬಂದು ತಲುಪಿರುವ ಸಾವಿರಾರು ನಕ್ಷತ್ರಗಳು| ಗ್ಯಾಲಕ್ಸಿಯ ಅಂಚಿನಲ್ಲಿ ಅನಿಲದ ಸುಂದರವಾದ ವೃತ್ತಾಕಾರ|
ವಾಷಿಂಗ್ಟನ್(ಡಿ.08): ಹಲವಾರು ಸೂಪರ್ ನೋವಾಗಳ ತವರಾಗಿರುವ ಬೃಹತ್ ಗ್ಯಾಲಕ್ಸಿಯೊಂದನ್ನು ನಾಸಾದ ಹಬಲ್ ಟೆಲಿಸ್ಕೋಪ್ ಪತ್ತೆ ಹಚ್ಚಿದೆ.
ಭೂಮಿಯಿಂದ ಸುಮಾರು 130 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ NGC 5468 ಗ್ಯಾಲಕ್ಸಿಯಲ್ಲಿ ಸಾಯಲು ಸಜ್ಜಾಗಿರುವ ನಕ್ಷತ್ರಗಳ ದೊಡ್ಡ ಪಡೆಯೇ ಇದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!
ಕಳೆದ ಎರಡು ದಶಕಗಳಿಂದ NGC 5468 ಗ್ಯಾಲಕ್ಸಿಯ ಅಧ್ಯಯನ ನಡೆಸಿರುವ ಹಬಲ್, ಸೂಪರ್ ನೋವಾ ಹಂತಕ್ಕೆ ಬಂದು ತಲುಪಿರುವ ಸಾವಿರಾರು ನಕ್ಷತ್ರಗಳನ್ನು ಗುರುತಿಸಿದೆ.
ಹಂತ ಹಂತವಾಗಿ ಈ ನಕ್ಷತ್ರಗಳು ತಮ್ಮ ಅನಿಲವನ್ನು ಕಳೆದುಕೊಳ್ಳುತ್ತಿದ್ದು, ಈ ಕಾರಣಕ್ಕೆ ಗ್ಯಾಲಕ್ಸಿಯ ಅಂಚಿನಲ್ಲಿ ಅನಿಲದ ಸುಂದರವಾದ ವೃತ್ತಾಕಾರ ನಿರ್ಮಾಣವಾಗಿದೆ ಎಂದು ನಾಸಾ ಹೇಳಿದೆ.
ಒಂದಕ್ಕೊಂದು ಸಂಬಂಧ: ಹಬಲ್ ಪತ್ತೆ ಹಚ್ಚಿದ ಗ್ಯಾಲಕ್ಸಿಗಳ ಅನುಬಂಧ!
ಕಳೆದ 30 ವರ್ಷಗಳಿಂದ ವಿಶ್ವದ ಅಧ್ಯಯನ ನಡೆಸುತ್ತಿರುವ ಹಬಲ್ ಕೂಡ ತನ್ನ ಅಂತ್ಯವನ್ನು ಸಮೀಪಿಸಿದ್ದು, ಆದರೂ ಮುಂದಿನ ಒಂದು ದಶಕಗಳ ಕಾಲ ಹಬಲ್ ತನ್ನ ಕರ್ತವ್ಯ ಮುಂದುವರೆಸಲಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.