Asianet Suvarna News Asianet Suvarna News

Advisory To Parents: ನಿಮ್ಮ ಮಕ್ಕಳನ್ನು ಆನಲೈನ್‌ ವಂಚಕರಿಂದ ರಕ್ಷಿಸಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ!

*ಕೊರೋನಾ ಲಾಕ್‌ಡೌನ್: ಮಕ್ಕಳಲ್ಲಿ ಮೊಬೈಲ್‌ ಬಳಕೆ ಹೆಚ್ಚಳ
*ಆನ್‌ಲೈನ್ ಗೇಮಿಂಗ್ ಚಟವನ್ನು ಬೆಳೆಸಿಕೊಂಡಿರುವ ಸಾಧ್ಯತೆ
*ಪೋಷಕರು ಮತ್ತು ಶಿಕ್ಷಕರಿಗಾಗಿ ಕೇಂದ್ರ ಸರ್ಕಾರದ ಸಲಹೆಗಳು

Centre Issues Advisory To Parents Teachers On Childrens Safe Online Gaming mnj
Author
Bengaluru, First Published Dec 11, 2021, 12:54 PM IST
  • Facebook
  • Twitter
  • Whatsapp

ನವದೆಹಲಿ(ಡಿ. 11): ಕೊರೋನಾ ಸಾಂಕ್ರಾಮಿಕ (Corona Virus Pandemic) ಹರಡುವಿಕೆಯಿಂದ ಕಳೆದ 2 ವರ್ಷಗಳಿಂದ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದವು. ಕೊರೋನಾ ಅಬ್ಬರ ಈಗ ಕಡಿಮೆಯಾಗಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳ (Online Class) ಮೊರೆ ಹೋಗಿದ್ದವು. ಇದು ಚಿಕ್ಕ ಮಕ್ಕಳ ಕೈಗೂ ಮೊಬೈಲ್‌ ಸುಲಭವಾಗಿ ದೊರಕುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ಹೆಚ್ಚಾಗಿದ್ದು  ಮಕ್ಕಳು ಆನ್‌ಲೈನ್ ಗೇಮಿಂಗ್ ಚಟವನ್ನು ಬೆಳೆಸಿಕೊಂಡಿರುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಾಲಕರಿಗೆ ಮತ್ತು ಶಿಕ್ಷಕರಿಗೆ ಹಲವು ಸಲಹೆ ನೀಡಿದೆ. ಮಕ್ಕಳಿಗೆ ಸಂಬಂಧಿಸಿದ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಿಸಲು ಶಿಕ್ಷಣ ಸಚಿವಾಲಯ (Ministry of Education) ನೀಡಿದ ಹಲವು ಸಲಹೆಗಳ ಪಟ್ಟಿ ಇಲ್ಲಿದೆ.

ಈ ವಿಷಯಗಳಲ್ಲಿ ಪೋಷಕರು ಅತ್ಯಂತ ನಿಗಾ ವಹಿಸಿ!

*ಪೋಷಕರ ಒಪ್ಪಿಗೆಯಿಲ್ಲದೆ ಆನ್‌ಲೈನ್ ಆಟ ಖರೀದಿಯನ್ನು ಅನುಮತಿಸಬೇಡಿ. ಮಕ್ಕಳು ವಿವಿಧ ಅಪ್ಲಿಕೇಶನ್ ಖರೀದಿಗಳನ್ನು ತಪ್ಪಿಸಲು RBI ಮಾರ್ಗಸೂಚಿಗಳ ಪ್ರಕಾರ OTP ಆಧಾರಿತ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.

*ಚಂದಾದಾರಿಕೆಗಳಿಗಾಗಿ ಅಪ್ಲಿಕೇಶನ್‌ಗಳಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ನೋಂದಣಿಯನ್ನು ಮಾಡಬೇಡಿ. ಪ್ರತಿ ವಹಿವಾಟಿನ ಮೇಲಿನ ವೆಚ್ಚದ  ಮಿತಿಯನ್ನು ನಿರ್ಧರಿಸಿ

*ಮಕ್ಕಳು ಗೇಮಿಂಗ್‌ಗೆ ಬಳಸುವ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಿಂದ ನೇರವಾಗಿ ಆ್ಯಪ್ ಖರೀದಿಸಲು ಬಿಡಬೇಡಿ.‌ ಇದಕ್ಕಾಗಿ ಪ್ರತ್ಯೇಕ ಮೊಬೈಲ್‌ ಅಥವಾ ಲ್ಯಾಪಟಾಪ್‌ ಬಳಸಿ.

*ಅಜ್ಞಾತ ವೆಬ್‌ಸೈಟ್‌ಗಳಿಂದ ಸಾಫ್ಟ್‌ವೇರ್ ಮತ್ತು ಆಟಗಳನ್ನು ಡೌನ್‌ಲೋಡ್ ಮಾಡದಂತೆ ಮಕ್ಕಳಿಗೆ ಸಲಹೆ ನೀಡಿ.

ಕೋವಿಡ್‌ ವೇಳೆ ಶೇ.70ರಷ್ಟು ಮಕ್ಕಳು ಓದಿಗೆ ಗುಡ್‌ಬೈ

ಮಕ್ಕಳು ವೈಯುಕ್ತಿಕ  ಮಾಹಿತಿಯನ್ನು ನೀಡದಂತೆ ತೆಡೆಯುವುದು ಹೇಗೆ?

*ವೆಬ್‌ಸೈಟ್‌ಗಳಲ್ಲಿನ ಲಿಂಕ್‌ಗಳು, ಚಿತ್ರಗಳು ಮತ್ತು ಪಾಪ್-ಅಪ್‌ಗಳನ್ನು (Pop Ups) ಕ್ಲಿಕ್ ಮಾಡುವುದರ ಕುರಿತು ಎಚ್ಚರದಿಂದಿರಿ ಎಂದು ಅವರಿಗೆ ತಿಳಿಸಿ. ಏಕೆಂದರೆ ಅವುಗಳು ವೈರಸ್  ಹೊಂದಿರಬಹುದು ಮತ್ತು ಕಂಪ್ಯೂಟರ್‌ಗೆ ಹಾನಿ ಮಾಡಬಹುದು. ಜತೆಗೆ  ವಯಸ್ಸಿಗೆ ಸೂಕ್ತವಲ್ಲದ ವಿಷಯವನ್ನು ಒಳಗೊಂಡಿರಬಹುದು.

*ಆಟಗಳನ್ನು ಡೌನ್‌ಲೋಡ್ ಮಾಡುವಾಗ ಇಂಟರ್ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ನೀಡದಂತೆ ಅವರಿಗೆ ಸಲಹೆ ನೀಡಿ.

*ಆಟಗಳಲ್ಲಿ ಮತ್ತು ಗೇಮಿಂಗ್ ಪ್ರೊಫೈಲ್‌ನಲ್ಲಿ ಅವರು ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳಬಾರದು ಎಂದು ತಿಳಿಸಿ

*ವೆಬ್ ಕ್ಯಾಮ್, ಖಾಸಗಿ ಸಂದೇಶ ಕಳುಹಿಸುವಿಕೆ ಅಥವಾ ಆನ್‌ಲೈನ್ ಚಾಟ್ ಮೂಲಕ ವಯಸ್ಕರು ಸೇರಿದಂತೆ ಅಪರಿಚಿತರೊಂದಿಗೆ ಸಂವಹನ ನಡೆಸದಂತೆ ಅವರಿಗೆ ಸಲಹೆ ನೀಡಿ. ಏಕೆಂದರೆ ಇದು ಆನ್‌ಲೈನ್ ವಂಚಕರಿಂದಾಗುವ ಅಪಾಯವನ್ನು ಹೆಚ್ಚಿಸುತ್ತದೆ.

*ವಿರಾಮ ತೆಗೆದುಕೊಳ್ಳದೆ ಹೆಚ್ಚು ಗಂಟೆಗಳ ಕಾಲ ಆಟದಲ್ಲಿ ತೊಡಗಿಸಿಕೊಳ್ಳುವುದರಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ  ಅವರಿಗೆ ಸಲಹೆ ನೀಡಿ.

Omicron Fear In Schools : ಒಮಿಕ್ರೋನ್‌ ಭೀತಿಯಲ್ಲೂ ಶಾಲೆಗಳಲ್ಲಿ ಹಾಜರಿ ಏರಿಕೆ

ಆನಲೈನ್‌ನಲ್ಲಿಆಟವಾಡುವಾಗಾ ನಿಮ್ಮ ಮಕ್ಕಳು ಮೋಸ ಹೋಗಿದ್ದಾರೆ ಎಂದು ತಿಳಿದರೆ ತಕ್ಷಣ ಈ ಕ್ರಮಗಳನ್ನು ಪಾಲಿಸಿ

*ಆನ್‌ಲೈನ್ ಆಟಗಳನ್ನು ಆಡುವಾಗ, ಏನಾದರೂ ತಪ್ಪಾದಲ್ಲಿ, ತಕ್ಷಣವೇ ನಿಲ್ಲಿಸಿ ಮತ್ತು ಸ್ಕ್ರೀನ್‌ಶಾಟ್ ತೆಗೆಯಿರಿ (ಕೀಬೋರ್ಡ್‌ನಲ್ಲಿರುವ "ಪ್ರಿಂಟ್ ಸ್ಕ್ರೀನ್" ಬಟನ್ ಬಳಸಿ) ಮತ್ತು ಅದನ್ನು ರಿಪೋರ್ಟ್‌ (Report) ಮಾಡಿ

*ನಿಮ್ಮ ಮಗುವಿಗೆ ಆನ್‌ಲೈನ್‌ನಲ್ಲಿ ಅವರ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡಿ. ಅವರ ನೈಜ ಹೆಸರನ್ನು ಬಹಿರಂಗಪಡಿಸದ ನಕಲಿ ಹೆಸರನ್ನು (ಅವತಾರ್) ಬಳಸಲು ಸೂಚಿಸಿ

*ನಿಮ್ಮ ಮಗು ಆಡುತ್ತಿರುವ ಯಾವುದೇ ಆಟಗಳ ವಯಸ್ಸಿನ ರೇಟಿಂಗ್ (Age Rating) ಅನ್ನು ಪರಿಶೀಲಿಸಿ.

ನಿಮ್ಮ ಮಕ್ಕಳು ಈ ರೀತಿ ವರ್ತಿಸಿದರೆ ತಕ್ಷಣ ಕ್ರಮಕೈಗೊಳ್ಳಿ

*ಆನ್‌ಲೈನ್ ಚಟುವಟಿಕೆಗೆ ಸಂಬಂಧಿಸಿದಂತೆ ರಹಸ್ಯವಾದ ನಡವಳಿಕೆ

*ಸಾಮಾಜಿಕ ಮಾಧ್ಯಮ ಅಥವಾ ಆನ್‌ಲೈನ್‌ನಲ್ಲಿ ಕಳೆಯುವ ಸಮಯದಲ್ಲಿ ಹಠಾತ್ ಹೆಚ್ಚಳ

*‌ಯಾರಾದರೂ ಹತ್ತಿರ ಹೋದಾಗ ಅವರು ತಮ್ಮ ಮೊಬೈಲ್‌ ಅಥವಾ ಲ್ಯಾಪಟಾಪ್ ಸ್ಕ್ರೀನ್ ಬದಲಾಯಿಸುವುದು

*ಇಂಟರ್ನೆಟ್ ಬಳಸಿದ ನಂತರ ಅಥವಾ ಪಠ್ಯ ಸಂದೇಶಗಳನ್ನು ಕಳುಹಿಸಿದ ನಂತರ ಅವರು  ಕೋಪಗೊಳ್ಳುವುದು

*ಅವರ ಮೊಬೈಲ್‌ನಲ್ಲಿ ಇದ್ದಕ್ಕಿದ್ದಂತೆ ಅನೇಕ ಹೊಸ ಫೋನ್ ಸಂಖ್ಯೆಗಳು (Contacts) ಮತ್ತು ಇಮೇಲ್ ಸಂಪರ್ಕಗಳನ್ನು ಸೇರಿಸಿವುದು

ಶಿಕ್ಷಕರಿಗಾಗಿ ಸಲಹೆಗಳು

*ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸ/ಅಂಕಗಳಲ್ಲಿ ಆಗುತ್ತಿರುವ  ಏರಿಳತಗಳನ್ನು ಮತ್ತು ಅವರ ಸಾಮಾಜಿಕ ನಡವಳಿಕೆಯನ್ನು ಗಮನಿಸಬೇಕು

*ಶಿಕ್ಷಕರು ಅನುಮಾನಾಸ್ಪದ ಅಥವಾ ಆತಂಕಕಾರಿ ವಿಷಯವನ್ನು ಗಮನಿಸಿದರೆ, ಅವರು ತಕ್ಷಣ ಶಾಲಾ ಅಧಿಕಾರಿಗಳಿಗೆ ತಿಳಿಸಬೇಕು.

*ಶಿಕ್ಷಕರು ಕಾಲಕಾಲಕ್ಕೆ ಅಂತರ್ಜಾಲದ ಸಾಧಕ-ಬಾಧಕಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.

*ವೆಬ್ ಬ್ರೌಸರ್‌ಗಳು ಮತ್ತು ವೆಬ್ ಅಪ್ಲಿಕೇಶನ್‌ಗಳ ಸುರಕ್ಷಿತವಾಗಿ ಬಳಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು.

Follow Us:
Download App:
  • android
  • ios