Asianet Suvarna News Asianet Suvarna News

ಗೂಗಲ್‌ ಹೋಮ್‌ ಪೇಜ್‌ನಲ್ಲೇ ಸುಲಭವಾಗಿ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸುವುದು ಹೇಗೆ?

ಗೂಗಲ್ ಮುಖಪುಟದಲ್ಲಿ ಇಂಟರ್ನೆಟ್ ಸ್ಪೀಡನ್ನು ಸರಳವಾಗಿ ಮತ್ತು ಅತ್ಯಂತ ಸುಲಭವಾಗಿ ಪರಿಶೀಲಿಸಬಹುದು
 

How to check internet speed from Google homepage Easily mnj
Author
Bengaluru, First Published Mar 21, 2022, 1:37 PM IST

Tech Desk: ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು (Internet Service Provider) ನಿಮಗೆ ಭರವಸೆ ನೀಡಿದ ಡೇಟಾ ವೇಗವನ್ನು ನೀಡುತ್ತಿದ್ದಾರೆಯೇ? ನಿಮ್ಮ ಇಂಟರ್ನೆಟ್ ಕಾಲಕಾಲಕ್ಕೆ ಏರುಪೇರಾಗುತ್ತಿದೆಯೇ? ನೀವು ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ, ನಿಮ್ಮ ಇಂಟರ್‌ನೆಟ್ ಸ್ಪೀಡ್‌ ಕಂಡುಹಿಡಿಯಲು ಒಂದು ಸುಲಭ ಮಾರ್ಗವಿದೆ. ಗೂಗಲ್ ಮುಖಪುಟದಲ್ಲಿ (Google Hompage)‌ ನೀವು ನಿಮ್ಮ ಇಂಟರ್ನೆಟ್ ವೇಗವನ್ನು ಸುಲಭ  ಮತ್ತು ತ್ವರಿತವಾಗಿ ಪರೀಶಿಲಸಬಹುದು.

ನಿಮ್ಮ ಇಂಟರ್ನೆಟ್ ವೇಗವನ್ನು ಪರಿಶೀಲಿಸಲು ಹಲವಾರು ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಇದ್ದರೂ, ಗೂಗಲ್ ಮುಖಪುಟದಲ್ಲಿ ಸರಳವಾಗಿ ಪರಿಶೀಲಿಸುವುದು ಅತ್ಯಂತ ಸುಲಭವಾದ ಮಾರ್ಗವಾಗಿದೆ. ಐದು ಸರಳ ಹಂತಗಳಲ್ಲಿ ಇಂಟರ್ನೆಟ್ ಸಂಪರ್ಕದ ವೇಗ ಪರೀಕ್ಷೆಯನ್ನು ನಡೆಸಲು ಮೇಷರ್‌ಮೆಂಟ್ ಲ್ಯಾಬ್ (M-Lab) ನೊಂದಿಗೆ ಗೂಗಲ್ ಪಾಲುದಾರಿಕೆ ಹೊಂದಿದೆ. 

ಇದನ್ನೂ ಓದಿ6G ತಂತ್ರಜ್ಞಾನದಲ್ಲಿ ಭಾರತ ಮುಂದಾಳತ್ವ ವಹಿಸಿ ಜಗತ್ತಿಗೆ ಮಾದರಿಯಾಗಲಿ: ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್!

“ಪರೀಕ್ಷೆಯನ್ನು ನಡೆಸಲು, ನೀವು ಮೇಷರ್‌ಮೆಂಟ್ (M-ಲ್ಯಾಬ್) ಗೆ ಸಂಪರ್ಕ ಹೊಂದುತ್ತೀರಿ ಮತ್ತು ನಿಮ್ಮ IP ವಿಳಾಸವನ್ನು ಅವರೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ಅವರ ಗೌಪ್ಯತೆ ನೀತಿಗೆ ಅನುಗುಣವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. M-ಲ್ಯಾಬ್ ಪರೀಕ್ಷೆಯನ್ನು ನಡೆಸುತ್ತದೆ ಮತ್ತು ಇಂಟರ್ನೆಟ್ ಸಂಶೋಧನೆಯನ್ನು ಉತ್ತೇಜಿಸಲು ಎಲ್ಲಾ ಪರೀಕ್ಷಾ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತದೆ. ಪ್ರಕಟಿಸಿದ ಮಾಹಿತಿಯು ನಿಮ್ಮ IP ವಿಳಾಸ ಮತ್ತು ಪರೀಕ್ಷಾ ಫಲಿತಾಂಶಗಳನ್ನು ಒಳಗೊಂಡಿರುತ್ತದೆ, ಆದರೆ ಇಂಟರ್ನೆಟ್ ಬಳಕೆದಾರರಾಗಿ ನಿಮ್ಮ ಕುರಿತು ಯಾವುದೇ ಇತರ ಮಾಹಿತಿಯನ್ನು ಒಳಗೊಂಡಿಲ್ಲ, ” ಎಂದು ಗೂಗಲ್ ಹೇಳಿದೆ.

ಗೂಗಲ್ ಮುಖಪುಟದಿಂದ ಇಂಟರ್ನೆಟ್ ವೇಗವನ್ನು ಪರಿಶೀಲಿಸಲು ಇಲ್ಲಿದೆ 5 ಹಂತದ ಮಾರ್ಗದರ್ಶಿ

ಹಂತ 1: ಮೊದಲು ನಿಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಯಾವುದೇ ಇಂಟರ್ನೆಟ್ ಬ್ರೌಸರ್‌ನಲ್ಲಿ Google.com ಎಂದು ಟೈಪ್ ಮಾಡಿ

ಹಂತ 2: ಸರ್ಚ್ ಬಾರ್‌ನಲ್ಲಿ 'Run Speed Test' (ರನ್ ಸ್ಪೀಡ್ ಟೆಸ್ಟ್) ಎಂದು ಟೈಪ್ ಮಾಡಿ

ಹಂತ 3: ಈ ಬಳಿಕ ಹೊಸ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ, ನಂತರ 'Internet speed test' ಆಯ್ಕೆಯನ್ನು ನೋಡುತ್ತೀರಿ . “30 ಸೆಕೆಂಡುಗಳಲ್ಲಿ ನಿಮ್ಮ ಇಂಟರ್ನೆಟ್ ವೇಗವನ್ನು ಪರಿಶೀಲಿಸಿ. ವೇಗ ಪರೀಕ್ಷೆಯು ಸಾಮಾನ್ಯವಾಗಿ 40 MB ಗಿಂತ ಕಡಿಮೆ ಡೇಟಾವನ್ನು ವರ್ಗಾಯಿಸುತ್ತದೆ, ಆದರೆ ವೇಗದ ಸಂಪರ್ಕಗಳಲ್ಲಿ ಹೆಚ್ಚಿನ ಡೇಟಾವನ್ನು ವರ್ಗಾಯಿಸಬಹುದು, " ಎಂದು  ಡೈಲಾಗ್ ಬಾಕ್ಸ್‌ನಲ್ಲಿ ತಿಳಿಸಲಾಗಿದೆ. 

ಹಂತ 4: ಬಾಕ್ಸ್‌ನಲ್ಲಿ 'Run Speed Test' (ರನ್ ಸ್ಪೀಡ್ ಟೆಸ್ಟ್) ಬಟನನ್ನು ಆಯ್ಕೆಮಾಡಿ

ಹಂತ 5: ನಿಮ್ಮ ಇಂಟರ್ನೆಟ್ ವೇಗದ ಬಗ್ಗೆ ಎಲ್ಲಾ ವಿವರಗಳನ್ನು ಪಡೆಯುವ ಹೊಸ ವಿಂಡೋ ತೆರೆಯುತ್ತದೆ. ನೀವು ಇಂಟರ್ನೆಟ್ ವೇಗವನ್ನು ಮತ್ತೊಮ್ಮೆ ಪರೀಕ್ಷಿಸಲು ಬಯಸಿದರೆ ನಂತರ 'test again' ಬಟನನ್ನು ಆಯ್ಕೆ ಮಾಡಿ

ಇದನ್ನೂ ಓದಿ: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿವೆ 5 ಸರಳ ಸೂತ್ರಗಳು!

How to check internet speed from Google homepage Easily mnj

ಏತನ್ಮಧ್ಯೆ, ಭಾರತದಲ್ಲಿ ಇಂಟರ್ನೆಟ್ ವೇಗವು ಬೆಳವಣಿಗೆಯನ್ನು ಮುಂದುವರೆಸಿದೆ, ಕಳೆದ ವರ್ಷ ಜೂನ್‌ನಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಡೌನ್‌ಲೋಡ್ ವೇಗದ ಆಧಾರದ ಮೇಲೆ ಕ್ರಮವಾಗಿ ಜಾಗತಿಕ ಇಂಟರ್ನೆಟ್ ವೇಗ ಶ್ರೇಯಾಂಕದಲ್ಲಿ ದೇಶ 70 ನೇ (+3) ಮತ್ತು 122 ನೇ (+6) ಸ್ಥಾನದಲ್ಲಿದೆ ಎಂದು  ಯುಎಸ್ ಮೂಲದ ಬ್ರಾಡ್‌ಬ್ಯಾಂಡ್ ವೇಗ ಪರೀಕ್ಷಕ ಓಕ್ಲಾ ತಿಳಿಸಿತ್ತು. 

ಮೇ ತಿಂಗಳಿನಲ್ಲಿ 55.65Mbps ಗೆ ಹೋಲಿಸಿದರೆ ಕಳೆದ ವರ್ಷ ಜೂನ್‌ನಲ್ಲಿ 58.17Mbps ಸರಾಸರಿ ಡೌನ್‌ಲೋಡ್ ವೇಗದೊಂದಿಗೆ ಭಾರತವು ಸ್ಥಿರ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ವೇಗದಲ್ಲಿ ಉತ್ತಮ ಬೆಳವಣಿಗೆ ಕಾಯ್ದುಕೊಂಡಿದೆ. ಸ್ಥಿರ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ವೇಗಕ್ಕಾಗಿ, ಮೇ ತಿಂಗಳಲ್ಲಿ ಸಣ್ಣ ಕುಸಿತವನ್ನು ಕಂಡ ನಂತರ, ಜೂನ್‌ನಲ್ಲಿ ಒಟ್ಟಾರೆ ಸ್ಥಿರ ಡೌನ್‌ಲೋಡ್ ವೇಗವು ಜಾಗತಿಕ ಸೂಚ್ಯಂಕದಲ್ಲಿ ಭಾರತಕ್ಕೆ ಅತ್ಯಧಿಕವಾಗಿದೆ ಎಂದು ವರದಿ ತೋರಿಸಿದೆ. 

Follow Us:
Download App:
  • android
  • ios