6G ತಂತ್ರಜ್ಞಾನದಲ್ಲಿ ಭಾರತ ಮುಂದಾಳತ್ವ ವಹಿಸಿ ಜಗತ್ತಿಗೆ ಮಾದರಿಯಾಗಲಿ: ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್!

ನಾವು 6G ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು ಇಲ್ಲದಿದ್ದರೆ ಭಾರತವನ್ನು ಪ್ರತಿಭೆಗಳ ರಾಷ್ಟ್ರ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದು  ಅಶ್ವಿನಿ ವೈಷ್ಣವ್ ಹೇಳಿದ್ದಾರೆ
 

India should take lead in 6G and set direction for world telecom Minister Ashwini Vaishnaw mnj

ನವದೆಹಲಿ (ಮಾ. 14): ಭಾರತವು 6ಜಿ ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು, ಇದರಿಂದ ಇಡೀ ಜಗತ್ತಿಗೆ ದಿಕ್ಕನ್ನು ತೋರಿಸಿ ಮಾದರಿಯಾಗಬೇಕು ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ.  “ನಾವು ಈಗಾಗಲೇ 6G ಯ ಕೆಲಸವನ್ನು ಪ್ರಾರಂಭಿಸಿದ್ದೇವೆ, ಏಕೆಂದರೆ ನಾವು 4G, 5G ನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ. ನಾವು 6G ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು ಇಲ್ಲದಿದ್ದರೆ ಭಾರತವನ್ನು ಪ್ರತಿಭೆಗಳ ರಾಷ್ಟ್ರ ಎಂದು ಕರೆಯುವುದರಲ್ಲಿ ಅರ್ಥವಿಲ್ಲ" ಎಂದು ಸಚಿವರು ಹೇಳಿದ್ದಾರೆ. 

ತಂತ್ರಜ್ಞಾನದ ಅಭಿವೃದ್ಧಿಗೆ ಅನುಕೂಲವಾಗುವಂತೆ ನಿಯಂತ್ರಕ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಪಾಲುದಾರರಾಗಿ ಉದ್ಯಮದೊಂದಿಗೆ ಸಂವಹನ ನಡೆಸಲು ಕೇಂದ್ರವು ಎದುರು ನೋಡುತ್ತಿದೆ ಎಂದು ಸಚಿವರು ಹೇಳಿದ್ದಾರೆ.  ಟಿಡಿಎಸ್‌ಎಟಿ (TDST) ಸೆಮಿನಾರ್‌ನ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವೈಷ್ಣವ್, "ಈ ವ್ಯವಸ್ಥೆಯು ಎಲ್ಲರನ್ನು ಸಿಕ್ಕಿಹಾಕಿಸಿದೆ ಮತ್ತು ಸಾಕಷ್ಟು ಬಲವಾದ ಮೌಲ್ಯಗಳನ್ನು ಹೊಂದಿರದ ಕೆಲವು ಜನರು ಈ ಹಿಂದೆ ಟೆಲಿಕಾಂ ಮಾರುಕಟ್ಟೆಯನ್ನು ದೂಷಿಸಿ ಅವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ಹೇಳಿದ್ದಾರೆ. 

ಇದನ್ನೂ ಓದಿ6G Mobile Technology: 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, 2030ಕ್ಕೆ ಸೇವೆಗೆ!

"ಇಡೀ ಡಿಜಿಟಲ್ ಮಾರುಕಟ್ಟೆ ನಿಯಂತ್ರಣಕ್ಕೆ ನಾವು ಏಕೀಕೃತ ನಿಯಂತ್ರಕ ಸಂಸ್ಥೆಯನ್ನು ಹೊಂದಬಹುದೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿವೆ. ಕಾನೂನು ರಚನೆ, ನಿಯಂತ್ರಕ ಸಂಸ್ಥೆಯ ಕಾರ್ಯತಂತ್ರ ರಚನೆ, ನಮ್ಮ ಸರ್ಕಾರಿ ಸಂಸ್ಥೆಗಳು ಹಾಗೂ ಜನರು ಯೋಚಿಸುವ ರೀತಿಯಲ್ಲಿ, ನಮ್ಮ ಸಂಪೂರ್ಣ  ವ್ಯವಸ್ಥೆಯನ್ನು ನಾವು ನಿಜವಾಗಿಯೂ ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ನಾವು ಉದ್ಯಮದೊಂದಿಗೆ ವಿರೋಧಿಗಳಾಗಿ ಅಲ್ಲ, ಆದರೆ ಪಾಲುದಾರರಾಗಿ ಸಂವಹನ ನಡೆಸಬೇಕಾಗಿದೆ . ಅದು ನಾವು ಮಾಡಬೇಕಾದ ಮುಂದಿನ ದೊಡ್ಡ ಕಾರ್ಯ," ಎಂದು ವೈಷ್ಣವ್ ಹೇಳಿದ್ದಾರೆ. 

ಸದ್ಯಕ್ಕೆ ಹೆಚ್ಚಿನದನ್ನು ಮಾಡಲಾಗಿಲ್ಲ ಆದರೆ ತಂತ್ರಜ್ಞಾನದ ಸ್ಟ್ಯಾಕ್‌ನ ಅಭಿವೃದ್ಧಿಯನ್ನು ಮುಂದುವರಿಸಲು ಮತ್ತು ಅದಕ್ಕೆ ಹೆಚ್ಚು ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಸೇರಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ ಏಕೆಂದರೆ ಇದು ಭವಿಷ್ಯದ ಪೀಳಿಗೆಯ ಉದ್ಯಮಿಗಳನ್ನು ಸೃಷ್ಟಿಸುವ ಮಾರುಕಟ್ಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Indian Smartphone Market: 2026ರ ಹೊತ್ತಿಗೆ ಭಾರತದಲ್ಲಿ 100 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು!

6Gನಲ್ಲಿ ನಾವು ಮುನ್ನಡೆ ಸಾಧಿಸಬೇಕು:  “2ಜಿ ಮತ್ತು 3ಜಿ ಇದ್ದಾಗ ನಾವು ಹಿಂದುಳಿದಿದ್ದೆವು. ನಾವು 4Gಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ನಾವು ಕನಿಷ್ಠ 5G ಯಲ್ಲಿ ಉತ್ತಮ ಬೆಳವಣಿಗೆ ಸಾಧಿಸಬೇಕು, ಆದರೆ 6Gನಲ್ಲಿ ನಾವು ಮುನ್ನಡೆ ಸಾಧಿಸಬೇಕು. ಇಲ್ಲದಿದ್ದರೆ ಇಂದು ಪ್ರತಿಭಾನ್ವಿತ ರಾಷ್ಟ್ರ ಎಂದು ಕರೆಯಲ್ಪಡುವ ರಾಷ್ಟ್ರವಾಗಿ ಏನು ಪ್ರಯೋಜನ" ಎಂದು ವೈಷ್ಣವ್‌ ಪ್ರಶ್ನಿಸಿದ್ದಾರೆ. "ಪ್ರತಿಭಾನ್ವಿತ ರಾಷ್ಟ್ರವು ಆ ರೀತಿಯಲ್ಲಿ ಯೋಚಿಸಬೇಕು, ಅದು ಮುನ್ನಡೆಸುತ್ತದೆ, ಗುರಿಯನ್ನು ಹೊಂದಿಸುತ್ತದೆ ಮತ್ತು ಇಡೀ ಜಗತ್ತಿಗೆ ದಿಕ್ಕನ್ನು ಹೊಂದಿಸುತ್ತದೆ" ಎಂದು ಅವರು ಹೇಳಿದ್ದಾರೆ

ಐಐಟಿ ಚೆನ್ನೈ, ಐಐಟಿ ಕಾನ್ಪುರ, ಐಐಟಿ ಬಾಂಬೆ, ಐಐಎಸ್‌ಸಿ ಬೆಂಗಳೂರು ಸೇರಿದಂತೆ 11 ಸಂಸ್ಥೆಗಳ ಒಕ್ಕೂಟವು 14 ತಿಂಗಳುಗಳಲ್ಲಿ ಸುಮಾರು 30 ಮಿಲಿಯನ್ ಡಾಲರ್ ವೆಚ್ಚದಲ್ಲಿ 4ಜಿ ತಂತ್ರಜ್ಞಾನವನ್ನು ಸೃಷ್ಟಿಸಿದೆ ಎಂದು ವೈಷ್ಣವ್ ತಿಳಿಸಿದ್ದು, ಇದು ಟೆಲಿಕಾಂನಲ್ಲಿ ಪ್ರಬಲ ಕಂಪನಿಗಳು ವಲಯದಲ್ಲಿ  ತಂತ್ರಜ್ಞಾನ ಸೃಷ್ಟಿಸಲು ವೆಚ್ಚ ಮಾಡಿದಕ್ಕೆ ಹೋಲಿಸಿದರೆ ಸಣ್ಣ ಭಾಗವಾಗಿದೆ" ಎಂದು ಹೇಳಿದ್ದಾರೆ 

35 ಭಾರತೀಯ ಟೆಲಿಕಾಂ ಕಂಪನಿಗಳು ಈಗ ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಬಯಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ಸ್ ಯೂನಿಯನ್ ಅಡಿಯಲ್ಲಿ 5G ಮತ್ತು 6G ಭವಿಷ್ಯದ ಅಭಿವೃದ್ಧಿಗಾಗಿ ಪ್ರಮುಖ ಅಧ್ಯಯನ ಗುಂಪುಗಳು ಈಗ ಭಾರತೀಯ ಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

Latest Videos
Follow Us:
Download App:
  • android
  • ios