Asianet Suvarna News Asianet Suvarna News

Safer Internet Day 2022: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿವೆ 5 ಸರಳ ಸೂತ್ರಗಳು!

ಸುರಕ್ಷಿತ  ಅಂತರ್ಜಾಲ ದಿನವನ್ನು  ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಇಂಟರ್ನೆಟನ್ನು ಸುರಕ್ಷಿತ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಲು ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ

Safer Internet Day 2022 5 easy ways to keep children safe online and avoid cyber attacks mnj
Author
Bengaluru, First Published Feb 8, 2022, 10:13 AM IST | Last Updated Feb 8, 2022, 10:19 AM IST

Tech Desk: ಉತ್ತಮ ಆನ್‌ಲೈನ್ ಜಗತ್ತನ್ನು ರಚಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು  ಸುರಕ್ಷಿತ ಅಂತರ್ಜಾಲ ದಿನವನ್ನು (Safer Internet Day)  ಆಚರಿಸಲಾಗುತ್ತದೆ. ಆರೋಗ್ಯಕರ ಮತ್ತು ಹೆಚ್ಚು ಸುರಕ್ಷಿತ ಆನ್‌ಲೈನ್ ಅನುಭವವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, 19 ನೇ ಆವೃತ್ತಿಯ ಸುರಕ್ಷಿತ ಇಂಟರ್ನೆಟ್ ದಿನವನ್ನು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ಫೆಬ್ರುವರಿ 8ರಂದು ಮಂಗಳವಾರ ಆಚರಿಸಲಾಗುತ್ತಿದೆ. "Together for a better internet" (ಉತ್ತಮ ಇಂಟರ್ನೆಟ್‌ಗಾಗಿ ಒಟ್ಟಿಗೆ) ಎಂಬ ಥೀಮ್‌ನೊಂದಿಗೆ, ಇಂಟರ್ನೆಟನ್ನು ಎಲ್ಲರಿಗೂ ಸುರಕ್ಷಿತ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಲು ಮತ್ತು ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಒಟ್ಟಿಗೆ ಸೇರಿಸಲು ಈ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ " ಈ ಸೇಫ್‌ ಇಂಟರ್‌ನೆಟ್ ಡೇ ದಿನದಂದು ಪಾರದರ್ಶಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ಅಂತರ್ಜಾಲದಲ್ಲಿ ಒಳ್ಳೆಯ ವಿಚಾರಗಳನ್ನು ಹೆಚ್ಚಿಸಲು ಮತ್ತು ಕೆಟ್ಟದನ್ನು ಪರಿಹರಿಸಲು ಒಟ್ಟಾಗಿ ಸೇರೋಣ" ಎಂದು ಹೇಳಿದ್ದಾರೆ. ಭಾರತವು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟರ್ನೆಟನ್ನು ಹೊಂದಿರಬೇಕು ಎಂದು ರಾಜೀವ್‌ ಹೇಳಿದ್ದಾರೆ.

 

 

ವರ್ಚುವಲ್ ಜಗತ್ತಿನಲ್ಲಿ ಸುರಕ್ಷತೆಯನ್ನು ಪ್ರತಿದಿನ ಅನುಸರಿಸುವುದು ಅತ್ಯಗತ್ಯ. ಮಾಹಿತಿಯ ಯುಗದಲ್ಲಿ, ಇಂಟರ್ನೆಟನ್ನು ಸರಿಯಾಗಿ ಬಳಸಿದರೆ ವರದಾನವಾಗಬಹುದು. ಆದರೆ ಇದರ ದುರುಪಯೋಗ ಅನೇಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು . ಸುರಕ್ಷಿತ ಇಂಟರ್ನೆಟ್ ದಿನದಂದು, ಸಾಮಾಜಿಕ ನೆಟ್‌ವರ್ಕಿಂಗ್, ಡಿಜಿಟಲ್ ಐಡೆಂಟಿಟಿ, ಸೈಬರ್‌ಬುಲ್ಲಿಂಗ್ ಮತ್ತು ಹೆಚ್ಚಿನ ವಿಷಯಗಳ ಕುರಿತು ಸೈಬರ್ ಭದ್ರತಾ ತಜ್ಞರು, ನೀತಿ-ನಿರ್ಮಾಪಕರು ಮತ್ತು ತಂತ್ರಜ್ಞಾನ ವಿಶ್ಲೇಷಕರು ಚರ್ಚೆ ನಡೆಸುತ್ತಾರೆ. 

ಇದನ್ನೂ ಓದಿ: Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಭಾರತದಲ್ಲಿ ಪ್ರತಿ ವರ್ಷ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಇಂದಿನ ಡಿಜಿಟಲ್ ಪ್ರಪಂಚವು ಮಕ್ಕಳಿಗೆ ಅಪಾಯಕಾರಿಯಾಗಬಹುದು. ವಿಶೇಷವಾಗಿ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳ (Online Class) ಮೊರೆ ಹೋಗಿದ್ದವು. ಇದು ಚಿಕ್ಕ ಮಕ್ಕಳ ಕೈಗೂ ಮೊಬೈಲ್‌ ಸುಲಭವಾಗಿ ದೊರಕುವಂತೆ ಮಾಡಿತ್ತು. ಹೀಗಾಗಿ ಮಕ್ಕಳಲ್ಲಿ ಮೊಬೈಲ್‌ ಬಳಕೆ ಗಣನೀಯವಾಗಿ ಏರಿಕೆ ಕಂಡಿದೆ. 

ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಕಲಿಯುತ್ತಿರಲಿ, ವೀಡಿಯೊಗಳನ್ನು ನೋಡುತ್ತಿರಲಿ ಅಥವಾ ವಿಡಿಯೋ ಗೇಮ್‌ಗಳನ್ನು ಆಡುತ್ತಿರಲಿ,  ಈ ಆನ್‌ಲೈನ್ ಪ್ರಪಂಚವು ಪ್ರತಿಯೊಬ್ಬ ಪೋಷಕರಿಗೆ ಹೊಸ ಸವಾಲುಗಳನ್ನು ಒದಗಿಸುತ್ತದೆ. ಹೀಗಾಗಿ ನಿಮ್ಮ ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿವೆ  5 ಸರಳ ಸೂತ್ರಗಳು 

1. ಆನ್‌ಲೈನ್ ಅಪಾಯಗಳು, ಸೈಬರ್‌ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ: ಸೈಬರ್‌ ಸುರಕ್ಷತೆಯ ಕುರಿತು ನಿಮ್ಮ ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ. ಸೈಬರ್‌ ವಂಚಕರು ತಮ್ಮ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಮಕ್ಕಳನ್ನು ಪ್ರಚೋದಿಸಬಹುದು. ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ವಿಶೇಷವಾಗಿ ಅಪರಿಚಿತರಿಗೆ ಬಹಿರಂಗಪಡಿಸದಂತೆ ಮಕ್ಕಳಿಗೆ ತಿಳಿಸಿ.

ನಿಮ್ಮ ಮಕ್ಕಳಿಗೆ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ತಿಳಿದರೆ , ತಕ್ಷಣವೇ ನಿಮಗೆ ಅಥವಾ ವಿಶ್ವಾಸಾರ್ಹ ವಯಸ್ಕರಿಗೆ ಹೇಳಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಮಗು ಆನ್‌ಲೈನ್ ಚಟುವಟಿಕೆಗಳಿಂದ ಅಸಮಾಧಾನಗೊಂಡಿರುವಂತೆ ಕಂಡುಬಂದರೆ ಅಥವಾ ಸೈಬರ್‌ಬುಲ್ಲಿಂಗ್ ಅನ್ನು ಅನುಭವಿಸಿದರೆ ಎಚ್ಚರದಿಂದಿರಿ. 

ಇದನ್ನೂ ಓದಿ: Take A Break: ಸಾಮಾಜಿಕ ಜಾಲತಾಣದಿಂದ ವಿರಾಮ ತೆಗೆದುಕೊಳ್ಳಲು ಇನ್ಸ್ಟಾಗ್ರಾಮ್ ನೋಟಿಫಿಕೆಶನ್‌!‌

2. ಲೆಟೇಸ್ಟ್ ಆಂಟಿ-ವೈರಸ್ ಪ್ರೋಗ್ರಾಂಗಳನ್ನು ಬಳಸಿ: ನಿಮ್ಮ ಮಕ್ಕಳು ಬಳಸುವ ಸಾಧಗಳು ಇತ್ತೀಚಿನ ಸಾಫ್ಟ್‌ವೇರ್ ಮತ್ತು ಆಂಟಿ-ವೈರಸ್ ಪ್ರೋಗ್ರಾಂಗಳನ್ನು ರನ್ ಮಾಡುತ್ತಿದೆಯೇ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳು ಆನ್ ಆಗಿವೆಯೇ ಎಂದು ಪರಿಶೀಲಿಸಿ. ಬಳಕೆಯಲ್ಲಿಲ್ಲದಿದ್ದಾಗ ವೆಬ್‌ಕ್ಯಾಮ್‌ಗಳನ್ನು ಮುಚ್ಚಿಡಿ. 

ಸುರಕ್ಷಿತ ಹುಡುಕಾಟ‌ (Safe Search) ಸೇರಿದಂತೆ ಪೋಷಕರ ನಿಯಂತ್ರಣಗಳಂತಹ (Parental Control) ಪರಿಕರಗಳು ಆನ್‌ಲೈನ್ ಅನುಭವಗಳನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಉಚಿತ ಆನ್‌ಲೈನ್ ಶೈಕ್ಷಣಿಕ ಸಂಪನ್ಮೂಲಗಳ ಬಗ್ಗೆ ಜಾಗರೂಕರಾಗಿರಿ. ಡೇಟಾ ಸಂಗ್ರಹಣೆಯನ್ನು ಕಡಿಮೆ ಮಾಡಲು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರೀಕ್ಷಿಸಲು ಮರೆಯದಿರಿ. 

3. ಬಲವಾದ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿ: ಪ್ರಬಲವಾದ ಪಾಸ್‌ವರ್ಡ್‌ಗಳು ನಿಮ್ಮ ಮಗುವಿನ ಸಾಧನವನ್ನು ಸೈಬರ್ ವಂಚಕರಿಂದ ಉಳಿಸಬಹುದು. ಒಂದೇ ಪಾಸ್‌ವರ್ಡ್‌ಗಳನ್ನು ಬಹು ಖಾತೆಗಳಿಗೆ ಮರುಬಳಕೆ ಮಾಡಬೇಡಿ. ಬಲವಾದ ಪಾಸ್‌ವರ್ಡ್ ರಚಿಸಲು ನಿಮ್ಮ ಮಕ್ಕಳಿಗೆ ಕಲಿಸಿ. ಕುಟುಂಬದ ಸದಸ್ಯರ ಹೆಸರುಗಳು ಅಥವಾ ಮೊಬೈಲ್ ಸಂಖ್ಯೆಗಳಂತಹ ಮಾಹಿತಿಯನ್ನು ಬಳಸಬೇಡಿ.

4. ಆನ್‌ಲೈನ್‌ನಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ: ಸ್ನೇಹಿತರು, ಕುಟುಂಬ ಮತ್ತು ನಿಮ್ಮೊಂದಿಗೆ ಸುರಕ್ಷಿತ ಮತ್ತು ಧನಾತ್ಮಕ ಆನ್‌ಲೈನ್ ಸಂವಹನಗಳನ್ನು ಹೊಂದಲು ನಿಮ್ಮ ಮಗುವಿಗೆ ಅವಕಾಶಗಳನ್ನು ರಚಿಸಿ. ಇತರರೊಂದಿಗೆ ಸಂಪರ್ಕ ಸಾಧಿಸುವುದು ಈ ಸಮಯದಲ್ಲಿ ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಕೋವಿಡ್‌ 19 ಸಾಂಕ್ರಾಮಿಕ ರೋಗದ ಬಗ್ಗೆ ಆತಂಕವನ್ನು ಹೆಚ್ಚಿಸುವ ತಪ್ಪು ಮಾಹಿತಿ ಮತ್ತು ವಯಸ್ಸಿಗೆ ಅನುಚಿತವಾದ ವಿಷಯವನ್ನು ಗುರುತಿಸಲು ಮತ್ತು ತಪ್ಪಿಸಲು ನಿಮ್ಮ ಮಗುವಿಗೆ ಸಹಾಯ ಮಾಡಿ.

ಇದನ್ನೂ ಓದಿ: Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?

ವಯಸ್ಸಿಗೆ ಸೂಕ್ತವಾದ ಅಪ್ಲಿಕೇಶನ್‌ಗಳು, ಆಟಗಳು ಮತ್ತು ಇತರ ಆನ್‌ಲೈನ್ ಮನರಂಜನೆಯನ್ನು ಗುರುತಿಸಲು ನಿಮ್ಮ ಮಗುವಿನೊಂದಿಗೆ ಸಮಯ ಕಳೆಯಿರಿ. ಮಕ್ಕಳಿಗಾಗಿ ಆನ್‌ಲೈನ್ ವ್ಯಾಯಾಮದ ವೀಡಿಯೊಗಳಂತಹ ಡಿಜಿಟಲ್ ಪರಿಕರಗಳ ಲಾಭವನ್ನು ಪಡೆಯಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ ಎಂದು UNICEF ನ ವೆಬ್‌ಸೈಟ್ ಸಲಹೆ ನೀಡುತ್ತದೆ.

5. ಆರೋಗ್ಯಕರ ಆನ್‌ಲೈನ್ ಅಭ್ಯಾಸಗಳನ್ನು ಪ್ರೋತ್ಸಾಹಿಸಿ: ಆನ್‌ಲೈನ್ ಮತ್ತು ವೀಡಿಯೊ ಕರೆಗಳಲ್ಲಿ ಉತ್ತಮ ನಡವಳಿಕೆಯನ್ನು ಪ್ರಚಾರ ಮಾಡಿ ಮತ್ತು ಮೇಲ್ವಿಚಾರಣೆ ಮಾಡಿ. ನಿಮ್ಮ ಮಕ್ಕಳು ಸಹಪಾಠಿಗಳಿಗೆ ದಯೆ ಮತ್ತು ಗೌರವಾನ್ವಿತರಾಗಿರಲು ಪ್ರೋತ್ಸಾಹಿಸಿ, ಅವರು ಯಾವ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. 

ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ, ಅವರು ಅನಾರೋಗ್ಯಕರ ಆಹಾರಗಳು  ಅಥವಾ ವಯಸ್ಸಿಗೆ ಅನುಚಿತವಾದ ವಸ್ತುಗಳನ್ನು ಉತ್ತೇಜಿಸುವ ಹೆಚ್ಚಿನ ಜಾಹೀರಾತಿಗೆ ಒಡ್ಡಿಕೊಳ್ಳಬಹುದು. ಹಾಗಾಗಿ ಸರಿಯಾದ ಆನ್‌ಲೈನ್ ಜಾಹೀರಾತುಗಳನ್ನು ಗುರುತಿಸಲು ಮಕ್ಕಳಿಗೆ ಸಹಾಯ ಮಾಡಿ.

Latest Videos
Follow Us:
Download App:
  • android
  • ios