ಗೂಗಲ್‌ ಇಂಜಿನಿಯರ್‌ ಸಾಹಸ, ಭಗವದ್ಗೀತೆಯ ಜ್ಞಾನಕ್ಕಾಗಿ ಗೀತಾ ಜಿಪಿಟಿ!

ಈಗ ಎಲ್ಲೆಂದರಲ್ಲಿ ಚಾಟ್‌ ಜಿಪಿಟಿ ಕುರಿತಾಗಿಯೇ ಚರ್ಚೆಗಳು ಆಗುತ್ತಿವೆ. ಮೈಕ್ರೋಸಾಫ್ಟ್‌ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ 'ಬಾರ್ಡ್‌' ಅನಾವರಣ ಮಾಡಿದೆ. ಇದರ ನಡುವೆ ಗೂಗಲ್ ಇಂಜಿನಿಯರ್‌ ಒಬ್ಬರು ಆಧ್ಮಾತ್ಮಿಕ ಜ್ಞಾನಕ್ಕಾಗಿ ಭಗವದ್ಗೀತೆಯನ್ನು ಆಧರಿಸಿದ ಗೀತಾ ಜಿಪಿಟಿಯನ್ನು ಅಭಿವೃದ್ಧಿ ಮಾಡಿದ್ದಾರೆ.
 

Google engineer develops GitaGPT Bhagavad Gita for spiritual wisdom san

ಬೆಂಗಳೂರು (ಫೆ.11): ತಲೆತಿನ್ನುವ ಅಸೈನ್‌ಮೆಂಟ್‌ಗಳು, ಮೂವಿ ಸ್ಕ್ರಿಪ್ಟ್‌ಗಳು ಅಥವಾ ಲವ್‌ ಲೆಟರ್‌ಗಳ ಕಾರಣಕ್ಕಾಗಿ ತಲೆಕೆಡಿಸಿಕೊಂಡಿದ್ದೀರಾ? ಅದಕ್ಕಾಗಿ ಚಾಟ್‌ ಜಿಪಿಟಿ ಅನ್ನೋ ಎಐ ತಂತ್ರಜ್ಞಾನ ಆಧರಿಸಿ ಬಾಟ್‌ ಈಗಾಗಲೇ ಜನಪ್ರಿಯವಾಗಿದೆ. ನೀವು ಇಂಥದ್ದನ್ನು ಬರೀ ಎಂದರೆ ಸಾಕು, ಮನುಷ್ಯರ ಯೋಚನೆಗೂ ನಿಲುಕದಂತೆ ಅಷ್ಟು ಅದ್ಬುತವಾಗಿ ನಿಮ್ಮ ಕೆಲಸವನ್ನು ಮಾಡಿ ಮುಗಿಸುತ್ತದೆ. ಅದನ್ನೇ ಎತ್ತಿ ಕಾಪಿ ಪೇಸ್ಟ್‌ ಮಾಡಿದರೆ, ನಿಮ್ಮ ಎಸೈನ್‌ಮೆಂಟ್‌, ಮೂವಿ ಸ್ಕ್ರಿಪ್ಟ್‌, ಲವ್‌ ಲೆಟರ್‌ ಎಲ್ಲವೂ ಸಿದ್ಧವಾಗುತ್ತದೆ. ಇದರ ಮೇಲೆ ಮೈಕ್ರೋಸಾಫ್ಟ್‌ ಕಂಪನಿ 80 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎನ್ನುವ ಸುದ್ದಿ ಇದೆ. ಭವಿಷ್ಯದ ದಿನಗಳಲ್ಲಿ ಗೂಗಲ್‌ ಮೇಲಿನ ಅವಲಂಬನೆಯನ್ನೇ ಕಡಿಮೆ ಮಾಡುವ ಉದ್ದೇಶ ಇದರಲ್ಲಿರುವ ಕಾರಣ,ಗೂಗ್‌ ಕೂಡ ಕಾರ್ಯಪ್ರವೃತ್ತವಾಗಿದ್ದು, ತನ್ನದೇ ಎಐ ಆಧರಿತ ಬಾಟ್‌ 'ಬಾರ್ಡ್‌' ಅನ್ನು ಅನಾವರಣ ಮಾಡಿದೆ. ಈಗ ಚಾಟ್‌ ಜಿಪಿಟಿ ಹಾಗೂ ಬಾರ್ಡ್‌ ರೀತಿಯಲ್ಲಿಯೇ ಇರುವ ಇನ್ನೊಂದು ವೇದಿಕೆ ಅನಾವರಣವಾಗಿದೆ. ಇದು ಆಧ್ಯಾತ್ಮಕ ಜ್ಞಾನವನ್ನು ನೀಡುವ ವೇದಿಕೆಯಾಗಿದೆ. ಹೊಸ ರೀತಿಯ ಎಐ ಚಾಟ್‌ಬಾಟ್‌ ಸದ್ಯ ಸುದ್ದಿಯಲ್ಲಿದ್ದು ಅದರ ಹೆಸರು ಗೀತಾ ಜಿಪಿಟಿ. ಇದು ನಿಮ್ಮ ಆಧ್ಯಾತ್ಮಿಕ ಪ್ರಶ್ನೆಗಳಿಗೆ ನೇರವಾಗಿ ಭಗವದ್ಗೀತೆಯನ್ನು ಅಧರಿಸಿಕೊಂಡು ಉತ್ತರವನ್ನು ನೀಡಲಿದೆ.

ಗೂಗಲ್‌ನಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಸುಕುರು ಸಾಯಿ ವಿನೀತ್‌ ಈ ಗೀತಾ ಜಿಪಿಟಿಯನ್ನು ರಚನೆ ಮಾಡಿದ್ದಾರೆ. 700 ಶ್ಲೋಕಗಳನ್ನು ಹೊಂದಿರುವ ಹಿಂದುಗಳ ಪವಿತ್ರ ಧರ್ಮಗ್ರಂಥವಾದ ಭಗವದ್ಗೀತೆಯ ಮೇಲೆ ಆಧಾರಿತವಾದ ಜಿಪಿಟಿ-3 ಭಾಷಾ ಮಾದರಿಯನ್ನು ಆಧರಿಸಿ ಇದು ಉತ್ತರ ನೀಡಲಿದೆ. 'ಗೀತಾ ಜಿಪಿಟಿ ಎನ್ನುವುದು ಜಿಪಿಟಿ-3 ಚಾಲಿತ ಅಪ್ಲಿಕೇಶನ್‌ ಆಗಿದೆ. ಇದು ಭಗವದ್ಗೀತೆಯಿಂದ ನಿಮ್ಮ ಜೀವನದ ಸಮಸ್ಯೆಗಳಿಗೆ ಉತ್ತರಗಳನ್ನು ನೀಡುತ್ತದೆ' ಎಂದು ಇದರಲ್ಲಿ ವಿವರಣೆ ನೀಡಲಾಗಿದೆ.

ಎಐ ಬಾಟ್‌ ಆಗಿರುವ ಇದನ್ನು ಗೀತಾ ಜಿಪಿಟಿ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಇದು ಹಿಂದುಗಳ ಅತ್ಯಂತ ಪುರಾತನ ಧರ್ಮಗ್ರಂಥವಾದ ಭಗವದ್ಗೀತೆಯ ಜ್ಞಾನ ಹಾಗೂ ಆಧ್ಯಾತ್ಮವನ್ನು ಬಳಸಿಕೊಂಡು, ಜಿಟಪಿಯ ಬಳಕೆದಾರನ ಜೀವನದ ನಿರ್ಧಾರಗಳಿಗೆ ಮಾರ್ಗದರ್ಶನ ಹಾಗೂ ಸ್ಪಷ್ಟ ಜ್ಞಾನವನ್ನು ನೀಡುತ್ತದೆ. ಭಗವದ್ಗೀತೆಯ ಅಪಾರ ಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಗೀತಾ ಜಿಪಿಟಿ ಬಳಕೆದಾರರಿಗೆ ಒಂದು ಅನನ್ಯ ದೃಷ್ಟಿಕೋನವನ್ನು ಮತ್ತು ಅವರ ಪ್ರಶ್ನೆಗಳ ಬಗ್ಗೆ ಹೆಚ್ಚು ಆಳವಾದ ಜ್ಞಾನವನ್ನು ನೀಡುತ್ತದೆ. ಇದು ಜೀವನದ ಉದ್ದೇಶ, ನೈತಿಕ ಸಂದಿಗ್ಧತೆಗಳು ಅಥವಾ ಯಾವುದೇ ಇತರ ಅಸ್ತಿತ್ವವಾದದ ಪ್ರಶ್ನೆಯಾಗಿರಲಿ, ವ್ಯಕ್ತಿಗಳು ತಮ್ಮ ಜೀವನವನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡಲು ಗೀತಾ ಜಿಪಿಟಿ ನಿಮಗೆ ಭಗವದ್ಗೀತೆಗೆ ಒಳನೋಟವುಳ್ಳ ಮತ್ತು ಅರ್ಥಪೂರ್ಣ ಉತ್ತರಗಳನ್ನು ನೀಡುತ್ತದೆ.

ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!

ಜೀವನದ ಅರ್ಥವೇನು ಎನ್ನುವ ಪ್ರಶ್ನೆಗೆ ಗೀತಾ ಜಿಪಿಟಿ ನೀಡಿದ ಉತ್ತರ:
ಗೀತಾ ಜಿಪಿಟಿಯನ್ನು ಸೃಷ್ಟಿ ಮಾಡಿರುವ ಗೂಗಲ್‌ ಇಂಜಿನಿಯರ್‌, ಚಾಟ್‌ಬಾಟ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸುವ ಮಾಹಿತಿಯನ್ನು ಟ್ವಿಟರ್‌ನಲ್ಲಿ ನೀಡಿದ್ದಾರೆ. ಇದರಲ್ಲಿ ಅವರು ಗೀತಾ ಜಿಪಿಟಿಗೆ 'ಜೀವನದ ಅರ್ಥವೇನು..?' ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನೀಡಿರುವ ಉತ್ತರ ಇಲ್ಲಿದೆ.

ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ

"ಭಗವದ್ಗೀತೆಯಲ್ಲಿ ವಿವರಿಸಿದಂತೆ ಜೀವನದ ಅರ್ಥವು ವೃದ್ಧಾಪ್ಯ ಮತ್ತು ಮರಣದಿಂದ ವಿಮೋಚನೆಗಾಗಿ ಶ್ರಮಿಸುವುದು, ಆತ್ಮದ ಜ್ಞಾನ ಮತ್ತು ಎಲ್ಲಾ ಕ್ರಿಯೆಗಳಿಗಾಗಿ ದೇವರನ್ನು ಆಶ್ರಯಿಸುವುದು ಮತ್ತು ಬ್ರಹ್ಮವನ್ನು ಅರಿತುಕೊಳ್ಳುವುದು. ಆತ್ಮವನ್ನು ದೇವರಿಗೆ ಸಮರ್ಪಿಸುವುದು ಮತ್ತು ಜ್ಞಾನದಲ್ಲಿ ನಿರ್ಲಿಪ್ತತೆ ಮತ್ತು ಸ್ಥಾಪಿತ ಮನಸ್ಸಿನಿಂದ ತ್ಯಾಗಕ್ಕಾಗಿ ಕೆಲಸ ಮಾಡಿ. ಅಂತಿಮವಾಗಿ, ಉಜ್ವಲವಾದ ಪರಮಾತ್ಮನನ್ನು ತಲುಪುವುದೇ ಗುರಿಯಾಗಿದೆ."

Google engineer develops GitaGPT Bhagavad Gita for spiritual wisdom san

ಉತ್ತರದೊಂದಿಗೆ, ಚಾಟ್‌ಬಾಟ್ ಭಗವದ್ಗೀತೆಯ ಸಂಬಂಧಿತ ಶ್ಲೋಕಗಳನ್ನು ಸಹ ತೋರಿಸುತ್ತದೆ, ಅದರಿಂದಲೇ ಉತ್ತರವನ್ನು ನೀಡಲಾಗಿದೆ.
 

Latest Videos
Follow Us:
Download App:
  • android
  • ios