ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಸೃಷ್ಟಿಸುತ್ತಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ ಬಿಡುಗಡೆ ಮಾಡಿರುವ 'ಬಾರ್ಡ್' ಬುಧವಾರ ತಪ್ಪು ಮಾಹಿತಿಯೊಂದನ್ನು ನೀಡಿದೆ. ಇದರ ಬೆನ್ನಲ್ಲೇ ಗೂಗಲ್‌ನ (Google) ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ (Alphabet) ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ.

8 lakh crore loss to Google after Bard giving wrong information akb

ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಸೃಷ್ಟಿಸುತ್ತಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ ಬಿಡುಗಡೆ ಮಾಡಿರುವ 'ಬಾರ್ಡ್' ಬುಧವಾರ ತಪ್ಪು ಮಾಹಿತಿಯೊಂದನ್ನು ನೀಡಿದೆ. ಇದರ ಬೆನ್ನಲ್ಲೇ ಗೂಗಲ್‌ನ (Google) ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ (Alphabet) ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ. ಸೋಮವಾರ ಬಿಡುಗಡೆಯಾದ 'ಬಾರ್ಡ್‌'ನ ಪ್ರಾತ್ಯಕ್ಷಿಕೆಯನ್ನು ಬುಧವಾರ ಗೂಗಲ್‌ ಆಯೋಜಿಸಿತ್ತು. ಈ ವೇಳೆ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಗ್ಗೆ ವಿವರಿಸುತ್ತಿದ್ದ ಬಾರ್ಡ್‌, ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಮೊಟ್ಟಮೊದಲ ಬಾರಿಗೆ ನಮ್ಮ ಸೌರವ್ಯೂಹದ ಹೊರಗಿರುವ ಗ್ರಹವೊಂದರ ಫೋಟೋವನ್ನು ತೆಗೆದಿದೆ ಎಂದು ಉತ್ತರಿಸಿದೆ. 

ಆದರೆ ಬಾಹ್ಯಗ್ರಹದ ಫೋಟೋವನ್ನು 2004ರಲ್ಲಿ ಮೊದಲ ಬಾರಿಗೆ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ ಲಾರ್ಜ್ ಟೆಲಿಸ್ಕೋಪ್‌ ತೆಗೆದಿದೆ. ಇದನ್ನು ನಾಸಾ (NASA) ಸಹ ಒಪ್ಪಿಕೊಂಡಿದೆ. ಗೂಗಲ್‌ನಿಂದ ಈ ರೀತಿಯ ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಆಲ್ಫಾಬೆಟ್‌ನ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದ್ದು, ಕಂಪನಿ ಒಟ್ಟಾರೆ 8.2 ಲಕ್ಷ ಕೋಟಿ ರು. ನಷ್ಟಅನುಭವಿಸಿದೆ. ಈ ನಡುವೆಯೇ ಚಾಟ್‌ಜಿಪಿಟಿಗೆ ಸಹಾಯ ಮಾಡುತ್ತಿರುವ ಮೈಕ್ರೋಸಾಫ್ಟ್ ಕಂಪನಿಯ ಷೇರುಗಳು ಶೇ.3ರಷ್ಟು ಏರಿಕೆ ಕಂಡಿವೆ.

ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ

Google Play store ನಿಂದ 12 ಜನಪ್ರಿಯ Apps Deleteಗೆ ಸೂಚನೆ

Latest Videos
Follow Us:
Download App:
  • android
  • ios